ಪುತ್ತೂರು: ಕುರಿಯ ಅಮ್ಮುಂಜ ಇಲ್ಲಿನ ಪಾಲಿಂಜೆ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಬಲಿವಾಡು ಕೂಟ, ವರಮಹಾಲಕ್ಷ್ಮೀ ಪೂಜಾ ಸಮಿತಿ ಸಭೆ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಭಕ್ತ ಸಮಿತಿ ರಚನೆ ಜು.6 ರಂದು ಬೆಳಿಗ್ಗೆ ಶ್ರಿ ಕ್ಷೇತ್ರದಲ್ಲಿ ನಡೆಯಲಿದೆ.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಭಕ್ತ ಸಮಿತಿಯ ಸಭೆ ಮತ್ತು ಸಮಿತಿಯ ರಚನೆ ಸಂದರ್ಭದಲ್ಲಿ ಸಭೆಗೆ ಶಾಸಕ ಅಶೋಕ್ ಕುಮಾರ್ ರೈ ಮತ್ತು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರು ಭಾಗವಹಿಸಲಿದ್ದಾರೆ.
ಮಧ್ಯಾಹ್ನ ಶ್ರೀ ಮಹಾವಿಷ್ಣು ದೇವರಿಗೆ ಬಲಿವಾಡು ಕೂಟ ಸೇವೆ ನಡೆಯಲಿದೆ. ಭಕ್ತರಾದ ಶ್ರೀನಿಧಿ ಅಂಗಿಂತ್ತಾಯ, ಬೆಂಗಳೂರು, ದಿನೇಶ್ ಗೌಡ ಡೆಮ್ಮಲೆ, ಚಂದ್ರಶೇಖರ ಮೊಟ್ಟೆತ್ತಡ್ಕ, ವಿಶ್ವನಾಥ ರೈ ಸಂಪ್ಯದಮೂಲೆರವರುಗಳಿಂದ ಬಲಿವಾಡು ಕೂಟ ಸೇವೆ ನಡೆಯಲಿದ್ದು, ಬಳಿಕ ಶ್ರೀ ಮಹಾವಿಷ್ಣು ದೇವರಿಗೆ ಮಹಾಪೂಜೆ ನಡೆಯಲಿದೆ. ಬಲಿವಾಡುಕೂಟ ಸೇವೆಯ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಬಲಿವಾಡು ಕೂಟ ಸೇವೆ ಮಾಡಿಸುವವರು ತಮ್ಮ ಹೆಸರು ತಿಳಿಸಿ ಸೇವೆ ಮಾಡಿಸಬಹುದು. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ 9901182276 (ಅಧ್ಯಕ್ಷರು), 9148528349 ( ಅರ್ಚಕರು) ಸಂಪರ್ಕಿಸಬಹುದಾಗಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವಜಿತ್ ಅಮ್ಮುಂಜ ಹಾಗೂ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.