ಮದುವೆಯಾಗುವುದಾಗಿ ನಂಬಿಸಿ ವಂಚನೆ ಪ್ರಕರಣ : ಸಂತ್ರಸ್ತೆ ಯುವತಿ ಮನೆಗೆ ಶಾಸಕ ಅಶೋಕ್ ರೈ ಭೇಟಿ

0

ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಪ್ರಕರಣದ ಸಂತ್ರಸ್ತೆ ಯುವತಿ ಮನೆಗೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿದರು.

ಈ ವೇಳೆ ಮಾತನಾಡಿದ ಶಾಸಕರು, ಕೃಷ್ಣ ರಾವ್ ವಶಕ್ಕೆ ಪಡೆಯಲಾಗಿದೆ. ಎಸ್ಪಿ ಅವರಿಗೆ ತಿಳಿಸಿದ ತಕ್ಷಣ, ತಂಡ ರಚಿಸಿ ಆರೋಪಿ ಪತ್ತೆಗೆ ಮುಂದಾಗಿದ್ದರು. ಅದರಂತೆ ಶುಕ್ರವಾರ ರಾತ್ರಿ ವಶಕ್ಕೆ ಪಡೆಯಲಾಗಿದೆ ಎಂದರು.

ಇಂತಹ ವಿಚಾರಗಳನ್ನು ರಾಜಕೀಯಕ್ಕೆ ಬಳಸಬಾರದು. ಸಂತ್ರಸ್ತೆ ಹಾಗೂ ಮಗುವಿನ ಭವಿಷ್ಯದ ದೃಷ್ಟಿಯಿಂದ ಆಲೋಚಿಸಬೇಕಾಗಿದೆ. ನನ್ನ ಜಾಗದಲ್ಲಿ ಬೇರೆ ಯಾವುದೇ ಪಕ್ಷದವರಿದ್ದರೂ ರಾಜಕೀಯವನ್ನೇ ಮಾಡುತ್ತಿದ್ದರು. ಆದರೆ ನಾನು ಹಾಗೇ ಮಾಡಿಲ್ಲ. ಇಬ್ಬರು ಒಂದಾಗಿ ಬಾಳಬೇಕೆಂಬುದೇ ನಮ್ಮ ಆಶಯ ಎಂದರು.

ಇದಕ್ಕೆ ಸಂಬಂಧಪಟ್ಟ ಫೊಟೋವೊಂದು ನಿನ್ನೆ ವೈರಲ್ ಆಗುತ್ತಿತ್ತು. ಆದರೆ ಇದರ ಬಗ್ಗೆ ನಾನು ಮಾತನಾಡುವುದಿಲ್ಲ. ಇಬ್ಬರನ್ನು ಒಂದಾಗಿಸುವ ಕೆಲಸವನ್ನಷ್ಟೇ ನಾವು ಮಾಡಬೇಕಾಗಿದೆ ಎಂದರು.


LEAVE A REPLY

Please enter your comment!
Please enter your name here