ಕೆಯ್ಯೂರು: ಸರ್ಕಾರಿ ಪದವಿಪೂರ್ವ ಕಾಲೇಜು ಕೆಯ್ಯೂರು ಇದರ 2025-26ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಯು ಸಂಸ್ಥೆಯ ಪ್ರಾಚಾರ್ಯರಾದ ಹಸೀನಾ ಬಾನು ಎಸ್ ಇ ಅವರ ಮಾರ್ಗದರ್ಶನದಲ್ಲಿ ನಡೆಯಿತು.

ಅಧ್ಯಕ್ಷಾಧಿಕಾರಿಯಾಗಿ ರಾಜ್ಯಶಾಸ್ತ್ರ ಉಪನ್ಯಾಸಕ ಇಸ್ಮಾಯಿಲ್ ಪಿ, ಮತಗಟ್ಟೆ ಅಧಿಕಾರಿಗಳಾಗಿ ಉಪನ್ಯಾಸಕರಾದ ಆನಂದ ಎನ್, ದೇವಿಕಾ ಎಚ್, ಸಹನಾ ಎಚ್, ಶ್ವೇತಾ ನೆಟ್ಟಾರು ಹಾಗೂ ಸ್ಟೆಲ್ಲಾ ಜೆಸ್ನಾ ಲೂವಿಸ್ ಮತದಾನ ಕಾರ್ಯವನ್ನು ನಡೆಸಿಕೊಟ್ಟರು. ಉಪನ್ಯಾಸಕರಾದ ಉಮಾಶಂಕರಿ ಎಸ್ ಕೆ, ಬಾಲಕೃಷ್ಣ ಬೇರಿಕೆ, ಅರ್ಚನಾ ರಾವ್ ಎ ಎಸ್, ಅಶೋಕ ಪಿ, ಕಚೇರಿ ಸಹಾಯಕಿ ದಿವ್ಯಲತಾ ಎಂ ಸಹಕರಿಸಿದರು.