ಮದುವೆಯಾಗುವುದಾಗಿ ವಂಚನೆ ಮಾಡಿದ ಪ್ರಕರಣ ಆರೋಪಿ ಶ್ರೀಕೃಷ್ಣ ನಿಗೆ ನ್ಯಾಯಾಂಗ ಬಂಧನ – ತಂದೆಗೆ ಜಾಮೀನು ಮಂಜೂರು

0

ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ನಡೆಸಿ ಗರ್ಭವತಿಯನ್ನಾಗಿಸಿ ಬಳಿಕ ಮದುವೆಯಾಗಲು ನಿರಾಕರಿಸಿ ವಂಚನೆ ಮಾಡಿದ ಪ್ರಕರಣದ ಆರೋಪಿ ಶ್ರೀಕೃಷ್ಣ ಜೆ ರಾವ್ ಅವರನ್ನು ಪೊಲೀಸರು ಜು.4ರಂದು ರಾತ್ರಿ ಮೈಸೂರಿನ ಟಿನರಸಿಪುರದಿಂದ ಬಂಧಿಸಿದ್ದು, ಜು.5ರಂದು ಸಂಜೆ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಆರೋಪಿ ಪರಾರಿಯಾಗಲು ಸಹಕರಿಸಿದ ಹಿನ್ನಲೆಯಲ್ಲಿ ಆರೋಪಿಯ ತಂದೆ ಪಿ ಜಿ ಜಗನ್ನಿವಾಸ ರಾವ್ ಅವರ ಮೇಲೂ ಪೊಲೀಸರು ಪ್ರಕರಣ ದಾಖಲಿಸಿ, ಬಂಧಿಸಿದ್ದರು. ಸಂಜೆ ಮಗನೊಂದಿಗೆ ತಂದೆಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.‌ ನ್ಯಾಯಾಲಯ ಪಿ ಜಿ ಜಗನ್ನಿವಾಸ ರಾವ್ ಅವರಿಗೆ ಜಾಮೀನು ಮಂಜೂರು ಮಾಡಿದೆ.

LEAVE A REPLY

Please enter your comment!
Please enter your name here