ಪುತ್ತೂರು: ಪಾದಚಾರಿ ಮೇಲ್ಸೇತುವೆಗೆ ಹಾಲಿನ ವಾಹನವೊಂದು ಡಿಕ್ಕಿಯಾದ ಘಟನೆ ಮಂಜಲ್ಪಡು ಸುದಾನ ವಸತಿಯುತ ಶಾಲೆಯ ಬಳಿ ಜು.7ರಂದು ನಡೆದಿದೆ.
ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಮಂಗಳೂರಿನಿಂದ ಬರುತ್ತಿದ್ದ ನಂದಿನಿ ಹಾಲಿನ ವಾಹನ ಚಾಲಕನ ನಿಯಂತ್ರಣ ತಪ್ಪಿ ಸುದಾನ ವಸತಿಯುತ ಶಾಲೆಯ ಬಳಿಯಿರುವ ಪಾದಚಾರಿ ಮೇಲ್ಸೇತುವೆಗೆ ಡಿಕ್ಕಿಯಾಗಿದೆ.ಡಿಕ್ಕಿಯಿಂದಾಗಿ ವಾಹನಕ್ಕೆ ಹಾನಿಯಾಗಿದ್ದು ಚಾಲಕ, ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.