ಮದುವೆಯಾಗುವುದಾಗಿ ವಂಚನೆ : ಸಂತ್ರಸ್ತೆಯ ಮನೆಗೆ ಎಸ್‌ಡಿಪಿಐ ನಿಯೋಗ ಭೇಟಿ

0

ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ವಂಚನೆಗೈದ ಪ್ರಕರಣದ ಸಂತ್ರಸ್ತೆಯ ಮನೆಗೆ ಎಸ್‌ಡಿಪಿಐ ಮತ್ತು ವುಮೆನ್ ಇಂಡಿಯಾ ಮೂವ್ಮೆಂಟ್ ಜಂಟಿಯಾಗಿ ಜು.8ರಂದು ಭೇಟಿ ನೀಡಿದರು. ಈ ವೇಳೆ ಸಂತ್ರಸ್ತೆ ಹಾಗೂ ಮಗುವನ್ನು ನೋಡಿದ ಬಳಿಕ ನಿಮಗೆ ನ್ಯಾಯ ಸಿಗುವವರೆಗೂ ನಿಮ್ಮ ಜೊತೆ ಎಸ್ ಡಿಪಿಐ ಇರುವುದಾಗಿ ಸಂತ್ರಸ್ತೆಯ ತಾಯಿಗೆ ಧೈರ್ಯ ಹೇಳಿದರು.


ಬಳಿಕ ಮಾಧ್ಯಮದ ಜೊತೆ ಎಸ್ ಡಿಪಿಐ ರಾಜ್ಯ ಉಪಾಧ್ಯಕ್ಷೆ ಶಾಹಿದ ತಸ್ಲೀಮ್ ಅವರು ಮಾತನಾಡಿ, ಭೇಟಿ ಬಚಾವೋ ಭೇಟಿ ಪಡಾವೋ ಅಂತೆಲ್ಲ ಹೇಳ್ತಾರೆ. ಆದ್ರೆ ಮಹಿಳೆಗೆ ಅನ್ಯಾಯವಾದಾಗ ನ್ಯಾಯದ ಪರವಾಗಿ ಇರದೆ ಪ್ರಭಾವಿಗಳ ಪರ ನಿಂತು ಬೆಂಬಲ ನೀಡೋದು ಈಗಿನ ಕೆಲ ವರ್ಷಗಳಿಂದ ನಡೀತಾ ಬರ್ತಾ ಇದೆ. ಆರೋಪಿಗಳ ಪರವಾಗಿ ಬಿಜೆಪಿ ಸಂಘಪರಿವಾರ ನಿಲ್ಲೋದ್ರಿಂದ ಇಂತಹ ಘಟನೆಗಳು ಮರುಕಳಿಸುತ್ತಿದೆ ಎಂದ ಅವರು., ಭೂಮಾತೆ, ಗೋತಾಯಿ, ಮಾತೆಯ ಸಂಸ್ಕೃತಿ ನಮ್ಮದು ಅಂತೆಲ್ಲ ಹೇಳಿ ನೈಜ ಮಾತೆಗೆ ಅನ್ಯಾಯವಾದಾಗ ಬೆಂಬಲವಾಗಿ ನಿಲ್ಲದೆ, ಪ್ರಭಾವಿಗಳಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಎಲ್ಲಿಯವರೆಗೂ ಇದು ಮುಂದುವರಿದಿದೆ ಅಂದ್ರೆ ಸಂತ್ರಸ್ತೆಯ ತಾಯಿ ವಿವಿಧ ಹಿಂದುತ್ವ ನಾಯಕರ ಭೇಟಿ ಮಾಡಿದರೂ ಕೂಡ ಬೆಂಬಲ ಸಿಕ್ಕಿಲ್ಲ. ಕೊನೆಗೆ ಎಸ್ ಡಿಪಿಐ ಸಂತ್ರಸ್ತೆಯ ಪರವಾಗಿ ಪ್ರತಿಭಟಿಸಿದರ ಪರಿಣಾಮ ಎಲ್ಲರೂ ಎಚ್ಚೆತ್ತುಕೊಂಡಿದ್ದಾರೆ. ಆದ್ರೆ ಕೆಲವರು ಈ ವಿಚಾರವನ್ನ ರಾಜಕೀಯ ಮೈಲೇಜ್ ಪಡೆಯಲು ಬಂದಿದ್ದಾರೆ. ಎಸ್ ಡಿಪಿಐ ಇಂತಹ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಯಾರಿಗೆ ಅನ್ಯಾಯವಾಗುತ್ತೋ ಅವರ ಪರವಾಗಿ ನಿಲ್ಲುತ್ತದೆ ಎಂದು ಹೇಳಿದರು.


ಬ್ರಾಹ್ಮಣ್ಯವನ್ನು ಸಂರಕ್ಷಿಸುವ ಕೆಲಸ ಆಗುತ್ತಿದೆ:
ಇಂತಹ ಘಟನೆಗಳು ನಡೆದಾಗ ಇಡೀ ಸಮಾಜ ಒಂದಾಗಿ ಯಾರಿಗೆ ಅನ್ಯಾಯ ಆಗಿದೋ ಅವರ ಪರವಾಗಿ ನಿಲ್ಲಬೇಕು. ಬ್ರಾಹ್ಮಣ್ಯವನ್ನ ಸಂರಕ್ಷಿಸಲು ಸಂಘ ಪರಿವಾರ ಮತ್ತು ಬಿಜೆಪಿ ಕೆಲಸ ಮಾಡುತ್ತಿದೆ. ಇಲ್ಲಿ ಜಾತಿ, ಧರ್ಮ ನೋಡಿಕೊಂಡು ಮೇಲ್ವರ್ಗಕ್ಕೊಂದು ನ್ಯಾಯ ಕೆಲ ವರ್ಗಕ್ಕೊಂದು ನ್ಯಾಯದ ರೀತಿ ಇದೆ. ಅದು ನಿಲ್ಲಬೇಕು. ಹಿಂದುತ್ವ ಬೇರೆ ಹಿಂದೂ ಧರ್ಮ ಬೇರೆ. ಹಿಂದೂ ಧರ್ಮ ಅಂದ್ರೆ ಸರ್ವೋ ಜನ ಸುಖಿನೋ ಭವಂತೋ, ವಸುದೈವ ಕುಟುಂಬಕಂ ಅಂತ ಹೇಳುವ ಧರ್ಮ. ಅದನ್ನ ಈ ಹಿಂದುತ್ವವಾದಿಗಳು ಜಾತಿ ನೋಡಿಕೊಂಡು ಬ್ರಾಹ್ಮಣ್ಯವನ್ನು ಸಂರಕ್ಷಿಸುವ ಸಲುವಾಗಿ ಈ ರೀತಿ ಮಾಡುತ್ತಾ ಇದ್ದಾರೆ ಎಂದು ಆರೋಪಿಸಿದ ಅವರು ಈ ಪ್ರಕರಣದಲ್ಲಿ ಆರೋಪಿಗೆ ಶಿಕ್ಷೆಯಾಗಬೇಕು. ಸಂತ್ರಸ್ತೆಗೆ ನ್ಯಾಯ ಒದಗಿಸಿಕೊಡಬೇಕು. ಇದನ್ನ ರಾಜಕೀಯವಾಗಿ ನೋಡುವುದು ಬೇಡ. ಓರ್ವ ಮಹಿಳೆಗೆ ಆದ ಅನ್ಯಾಯ ಅಂತ ತಿಳಿದುಕೊಂಡು ಎಲ್ಲರೂ ಬೆಂಬಲವಾಗಿ ನಿಂತು ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭ ವಿಮೆನ್ ಇಂಡಿಯಾ ಮೂವುಮೆಂಟ್ ಮಂಗಳೂರು ಗ್ರಾಮಾಂತರ ಜಿಲ್ಲೆಯ ಉಪಾಧ್ಯಕ್ಷೆ ಝಹನ, ಎಸ್‌ಡಿಪಿಐ ಜಿಲ್ಲಾ ಸಮಿತಿ ಸದಸ್ಯೆ ಝೀನತ್, ನಗರಸಭೆ ಸದಸ್ಯೆ ಪಾತಿಮಾತ್ ಝೋರ ಬನ್ನೂರು, ಜಿಲ್ಲಾ ಸಮಿತಿ ಸದಸ್ಯರಾದ ಶೀನಿರ, ಝೀನಬ್, ಫೌಝಿಯ, ಎಸ್‌ಡಿಪಿಐ ಪುತ್ತೂರು ಮುಖಂಡ ಅಬ್ದುಲ್ ರಹೀಂ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here