ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆ ತುಳು ಪ್ರತಿಭಾಕಾರಂಜಿಯಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿ

0

ಕಾಣಿಯೂರು: ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಾಮಕುಂಜ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ನೇತ್ರಾವತಿ ತುಳುಕುಟ ರಾಮಕುಂಜ ಇದರ ಸಹಕಾರದೊಂದಿಗೆ ಜು.8ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ತೃತೀಯ ಭಾಷೆ ತುಳು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗಾಗಿ ನಡೆಸಿದ ತುಳು ಪ್ರತಿಭಾ ಕಾರಂಜಿಯಲ್ಲಿ ಪ್ರಗತಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕಾಣಿಯೂರು ಹಲವಾರು ಬಹುಮಾನಗಳನ್ನು ಗಳಿಸಿಕೊಳ್ಳುವ ಮೂಲಕ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತದೆ.

ತುಳು ಜನಪದ ಕಥೆಯಲ್ಲಿ ಪ್ರಣಮ್ಯ ರೈ ಕೆ (10ನೇ)ಪ್ರಥಮ ,ತುಳು ಭಾಷಣದಲ್ಲಿ ಶ್ರಾವ್ಯ ರೈ(10ನೇ)ಪ್ರಥಮ, ಚಿತ್ರಕಲೆಯಲ್ಲಿ ಸಾನ್ವಿ ಶೆಟ್ಟಿ (9ನೇ)ಪ್ರಥಮ, ಜನಪದ ಒಗಟ್ಟಿನಲ್ಲಿ ಶ್ರೀಮಾ ಕೆ ಎಚ್ (9ನೇ), ಸಾನ್ವಿಕ ಎಚ್ (9ನೇ) ಪ್ರಥಮ, ಭಾವಗೀತೆಯಲ್ಲಿ ಶರಣ್ಯ (9ನೇ)ತೃತೀಯ ಸ್ಥಾನಗಳನ್ನು ಪಡೆದುಕೊಂಡಿರುತ್ತಾರೆ. ಹಾಗೆಯೇ ಕನ್ನಡ ಮಾಧ್ಯಮದಲ್ಲಿ ತುಳು ರಸಪ್ರಶ್ನೆಯಲ್ಲಿ ದೀಕ್ಷಿತಾ (10ನೇ) ಪ್ರಜ್ಞ (10ನೇ) ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಶಿಕ್ಷಕ ಅಶೋಕ್ ಕುಮಾರ್ ಪಿ ಮತ್ತು ಶಿಕ್ಷಕಿ ಅನಿತಾ ಎಸ್ ರೈ ಮಾರ್ಗದರ್ಶನ ನೀಡಿರುತ್ತಾರೆ. ಪೋಷಕಬಂಧು ಸುಜಿತ್ ರೈ ಪಟ್ಟೆ ಎಣ್ಮೂರು ಸಹಕರಿಸಿದರು.

LEAVE A REPLY

Please enter your comment!
Please enter your name here