ಸಿ.ಎ. ಪರೀಕ್ಷೆ : ನಿಶ್ಚಲ್ ರೈ ಡಿಂಬ್ರಿ ಭಾರತದಲ್ಲಿ 24ನೇ ರ‍್ಯಾಂಕ್‌

0

ಪುತ್ತೂರು: ನಿಶ್ಚಲ್ ರೈ ಡಿಂಬ್ರಿ ರವರು ಸಿ.ಎ ಪರೀಕ್ಷೆಯಲ್ಲಿ ಭಾರತದಲ್ಲಿ 24ನೇ ರ‍್ಯಾಂಕ್‌ ಪಡೆದಿರುತ್ತಾರೆ.

ಇವರು ಪಿ.ಯು ವ್ಯಾಸಂಗವನ್ನು ಪುತ್ತೂರು ವಿವೇಕಾನಂದ ಪಿ.ಯು ಕಾಲೇಜಿನಲ್ಲಿ ಮಾಡಿರುತ್ತಾರೆ. ಪಿ.ಯುನಲ್ಲಿ ರಾಜ್ಯದಲ್ಲಿ 8ನೇ ರ್‍ಯಾಂಕ್ ಪಡೆದು ಕಾಮರ್ಸ್‌ ವಿಭಾಗದಲ್ಲಿ ಟಾಪರ್ ಆಗಿರುತ್ತಾರೆ. ಡಿಗ್ರಿಯನ್ನು ಎಮ್ ಎ ಪಿ ಎಸ್ ಕಾಲೇಜ್ ಮಂಗಳೂರಿನಲ್ಲಿ ಸಿ.ಎ ಜೊತೆ ಮಾಡಿರುತ್ತಾರೆ. ಫೌಂಡೇಶನ್ ಸಿ.ಎನಲ್ಲಿ ಭಾರತಕ್ಕೆ 37ನೇ ರ್‍ಯಾಂಕ್ ಪಡೆದಿರುತ್ತಾರೆ. ಆರ್ಟಿಕಲ್ ಸಿಫ್‌ನ್ನು ಸಿ.ಎ ಶ್ಯಾಮಭಟ್ ಜೊತೆ ಮಾಡುತ್ತಾ ಸಿ.ಎ ಫೈನಲ್ ಪರೀಕ್ಷೆಯಲ್ಲಿ ಭಾರತಕ್ಕೆ ಈಗ 24ನೇ ರ್‍ಯಾಂಕ್ ಗಳಿಸಿರುತ್ತಾರೆ.

ಇವರು ಸುನೀತಾ ಉಮೇಶ್ ರೈ ಡಿಂಬ್ರಿಯವರ ಮಗ ಮತ್ತು ದಿ. ಡಿಂಬ್ರಿ ಐತ್ತಪ್ಪ ರೈ ಹಾಗೂ ಮರ್ಧೂರು ಗುತ್ತು ವಾಸಪ್ಪ ರೈಯವರ ಮೊಮ್ಮಗ ಮತ್ತು ನಿಶ್ಚಯ್ ರೈ ಯವರ ಅಣ್ಣ.

LEAVE A REPLY

Please enter your comment!
Please enter your name here