ಪುತ್ತೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪುತ್ತೂರು ನಗರದ ವತಿಯಿಂದ ವಿವೇಕಾನಂದ ಕ್ಯಾಂಪಸ್ನ ಎಬಿವಿಪಿ ಕಾರ್ಯಾಲಯದಲ್ಲಿ ವಿದ್ಯಾರ್ಥಿ ದಿವಸ್ನ ಕಾರ್ಯಕ್ರಮವನ್ನು ಜು.9ರಂದು ಧ್ವಜಾರೋಹಣ ಹಾಗೂ ಗಿಡ ನೆಡುವುದರೊಂದಿಗೆ ಆಚರಿಸಲಾಯಿತು.
ವಿವೇಕಾನಂದ ಪದವಿ ಕಾಲೇಜಿನ ಸಂಚಾಲಕರು ಮತ್ತು ವಕೀಲರಾಗಿರುವ ಮುರಳಿಕೃಷ್ಣ ಕೆ ಎಂ ಅವರು ಧ್ವಜಾರೋಹಣವನ್ನು ನೆರವೇರಿಸಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ವೆಂಕಟರಮಣ ಮಂಕಡೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಪ್ರಸಾದ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಮಂದಾರ ಬಾಳುಗೋಡು, ರಾಷ್ಟ್ರೀಯ ಕಲಾ ಮಂಚ್ ಪ್ರಾಂತ ಪ್ರಮುಖ್ ಹಾಗೂ ಅ.ಭಾ.ವಿ.ಪ ಪುತ್ತೂರು ನಗರ ಉಪಾಧ್ಯಕ್ಷೆ ದೀಪಿಕಾ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ಅಮೃತಾಂಬಾ, ಪುತ್ತೂರು ಜಿಲ್ಲಾ ಸಂಚಾಲಕ ಸಮನ್ವಿತ್ ಕೆ , ಜಿಲ್ಲಾ ವಿದ್ಯಾರ್ಥಿನಿ ಪ್ರಮುಖ್ ಸಿಂಚನ, ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ದೇವಿಚರಣ್ ರೈ, ವಿವೇಕಾನಂದ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಗುರುರಾಜ್, ವಿವೇಕಾನಂದ ಪದವಿ ಕಾಲೇಜಿನ ಉಪನ್ಯಾಸಕರು ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಪುತ್ತೂರು ನಗರದ ಎಲ್ಲಾ ಕಾರ್ಯಕರ್ತರು ಉಪಸ್ಥಿತರಿದ್ದರು.