ಈಶ್ವರಮಂಗಲ : ಈಶ್ವರಮಂಗಲ ಶ್ರೀ ಗಜಾನನ ಆಂಗ್ಲಮಾಧ್ಯಮ ಶಾಲೆ ಗುರುಪೂರ್ಣಿಮೆ ದಿನವನ್ನು ಜು.10ರಂದು ಆಚರಿಸಲಾಯಿತು. ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಲಾಯಿತು.
ಮುಖ್ಯ ಅತಿಥಿ ಶಿಕ್ಷಕಿ ಸುಮಲತಾ ಮಾತನಾಡಿ, ಅಜ್ಞಾನದಿಂದ ಯಾರು ನಮ್ಮನ್ನು ಜ್ಞಾನದ ಕಡೆಗೆ ಕೊಂಡೊಯ್ಯುವರೊ ಅವರೇ ನಮ್ಮ ಗುರುಗಳು, ಇಂದು ಮಹರ್ಷಿ ವೇದವ್ಯಾಸರ ದಿನವನ್ನು ಗುರುಪೂರ್ಣಿಮೆಯಾಗಿ ಆಚರಿಸಲಾಗುತ್ತದೆ ಯಾಕೆಂದರೆ ನಾಲ್ಕು ವೇದಗಳ ಪರಿಚಯವನ್ನು ವಿಶ್ವಕ್ಕೆ ಸಾರಿದ ಮಹಾನ್ ವ್ಯಕ್ತಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೆ ಶಾಮಣ್ಣ ಗುರು ಪೂರ್ಣಿಮೆಯ ಮಹತ್ವವನ್ನು ತಿಳಿಸಿದರು.ವಿದ್ಯಾರ್ಥಿಗಳು ಪ್ರಾಂಶುಪಾಲ ಶಾಮಣ್ಣ ಅವರಿಗೆ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಸೌಮ್ಯ ಎ ಮತ್ತು ಲತಾ ಡಿ ಕೆ ಉಪಸ್ಥಿರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿ ಅನನ್ಯ ಎ ನಿರೂಪಿಸಿದರು.ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ರಿಯಾ ಬಿನೋಯ್ ಸ್ವಾಗತಿಸಿ, ಧರಣಿ ವಂದಿಸಿದರು.