ಬಡಗನ್ನೂರು : ಪಡುಮಲೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಜು. 27 ರಂದು ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವಸ್ಥಾನದ ವಠಾರ ಡಾ| ರಮಾ ಕೆ.ಟಿ. ಭಂಡಾರಿ ಪೇರಾಲು ವೇದಿಕೆ ಮುಂಭಾಗ ನಡೆಯುವ ದ್ವಿತೀಯ ವರ್ಷದ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಜು. 10 ರಂದು ಪಡುಮಲೆ ಶ್ರೀ ಕ್ಷೇತ್ರದಲ್ಲಿ ನಡೆಯಿತು.

ಆಮಂತ್ರಣ ಪತ್ರಿಕೆಯನ್ನು ಶೀ ದೇವರ ಸನ್ನಿಧಿಯಲ್ಲಿಟ್ಟು ದೇವಸ್ಥಾನದ ಪ್ರಧಾನ ಅರ್ಚಕ ಮಹಾಲಿಂಗ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಬಳಿಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ್ ರೖೆ ಕಟ್ಟಾವು ಹಾಗೂ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಕೃಷ್ಣ ರೖೆ ಕುದ್ಕಾಡಿ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೖೆಸಿದರು.
ಈ ಸಂಧರ್ಭದಲ್ಲಿ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಜನಾರ್ದನ ಪೂಜಾರಿ ಪದಡ್ಕ, ಅಧ್ಯಕ್ಷ ಗಂಗಾಧರ ರೖೆ ಮೇಗಿನಮನೆ ಉಪಾಧ್ಯಕ್ಷ ರಾಜೇಶ್ ಮೇಗಿನಮನೆ, ಪ್ರಧಾನ ಕಾರ್ಯದರ್ಶಿ ರಘರಾಮ ಪಾಟಾಳಿ, ಜತೆ ಕಾರ್ಯದರ್ಶಿ ರಮೇಶ್ ರೖೆ ಕೖೊಲ ಸಲಹೆಗಾರ ರಾಮಣ್ಣ ಗೌಡ ಬಸವಹಿತ್ಯಿಲು, ಸಂಚಾಲಕ ಚಂದ್ರಶೇಖರ ಭಂಡಾರಿ ನಲಿಕೆಮಜಲು, ಗೌರವ ಸಲಹೆಗಾರರಾದ ಸಂತೋಷ ಆಳ್ವ ಗಿರಿಮನೆ, ಸುಬ್ಬಯ್ಯ ರೖೆ ಹಲಸಿನಡಿ, ಪುರಂದರ ರೖೆ ಸೇನೆರಮಜಲು, ಹಾಗೂ ಸುಧಾಕರ ಶೆಟ್ಟಿ ಮಂಗಳಾದೇವಿ ಮಹಾಬಲ ರೖೆ ಕೆ. ಪಿ. ಹಾಗೂ ಸಿಬ್ಬಂದಿ ವರ್ಗದವರು ಮತ್ತು ಊರ ಭಕ್ತಾದಿಗಳು ಉಪಸ್ಥಿತರಿದ್ದರು.