ಉಪ್ಪಿನಂಗಡಿ: ಮಟನ್ ಅಂಗಡಿ ಮಾಲಕ ಯು.ಕೆ. ಇಲ್ಯಾಸ್ ನಿಧನ

0

ಉಪ್ಪಿನಂಗಡಿ: ಇಲ್ಲಿನ ಪಂಜಾಳ ನಿವಾಸಿ, ಮಟನ್ ವ್ಯಾಪಾರಿ ಯು.ಕೆ. ಇಲ್ಯಾಸ್ (67ವ.) ಹೃದಯಾಘಾತದಿಂದ ಜು.10ರಂದು ನಸುಕಿನಲ್ಲಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.


ಕಳೆದ ಸುಮಾರು 40 ವರ್ಷಗಳಿಂದ ಉಪ್ಪಿನಂಗಡಿ ಹಳೆ ಬಸ್ ಸ್ಟ್ಯಾಂಡ್ ಬಳಿಯಲ್ಲಿ ಸಫಾ ಮಟನ್ ಸ್ಟಾಲ್ ಹೊಂದಿದ್ದರು. ಜಮಾಅತೇ ಇಸ್ಲಾಂ ಹಿಂದ್ ಇದರ ಹಿರಿಯ ಪ್ರವರ್ತಕರಾಗಿರುವ ಇವರು ಆತೂರು ಆಯಿಷಾ ಎಜ್ಯುಕೇಶನಲ್ ಟ್ರಸ್ಟ್‌ನ ಸ್ಥಾಪಕ ಸದಸ್ಯರಾಗಿ, ನೆಕ್ಕಿಲಾಡಿ ಮಸ್ಜಿದುಲ್ ಹುದಾ ಮಸೀದಿಯ ಅಧ್ಯಕ್ಷರಾಗಿದ್ದರು. ಪ್ರಸಕ್ತ ಗೌರವಾಧ್ಯಕ್ಷರಾಗಿ, ಹಲವು ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿದ್ದರು.

ಮೃತರು ಪತ್ನಿ, ನಾಲ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here