ಪುಣ್ಚಪ್ಪಾಡಿ ಶಕ್ತಿಕೇಂದ್ರದಿಂದ ನಿವೃತ್ತ ಶಿಕ್ಷಕರಾದ ಚಂದ್ರಕಲಾ ಸೋಂಪಾಡಿ ಮತ್ತು ಮೋನಪ್ಪ ನಾಯ್ಕ್ ರವರಿಗೆ ಗುರುವಂದನೆ

0

ಪುತ್ತೂರು : ಭಾರತೀಯ ಜನತಾ ಪಾರ್ಟಿ ಸುಳ್ಯ ವಿಧಾನಸಭಾ ಕ್ಷೇತ್ರದ ಕುಟ್ರುಪ್ಪಾಡಿ ಮಹಾಶಕ್ತಿ ಕೇಂದ್ರದ ಪುಣ್ಚಪ್ಪಾಡಿ ಶಕ್ತಿಕೇಂದ್ರ, ಬೂತ್ ಸಂಖ್ಯೆ 68 ಪುಣ್ಚಪ್ಪಾಡಿ ಮತ್ತು ಬೂತ್ ಸಂಖ್ಯೆ 69 ಕುಮಾರಮಂಗಲ ಇದರ ವತಿಯಿಂದ ಗುರು ಪೂರ್ಣಿಮೆಯ ಅಂಗವಾಗಿ ನಿವೃತ್ತ ಮುಖ್ಯಗುರು ಚಂದ್ರಕಲಾ ಸೋಂಪಾಡಿ ಮತ್ತು ಮೋನಪ್ಪ ನಾಯ್ಕ್ ರವರಿಗೆ ಗುರುವಂದನೆ, ಗೌರವಾರ್ಪಣೆ ಕಾರ್ಯಕ್ರಮವನ್ನು ಅವರ ನಿವಾಸದಲ್ಲಿ ನಡೆಸಲಾಯಿತು.

ಈ ಸಂಧರ್ಭದಲ್ಲಿ ಸವಣೂರು ಗ್ರಾಮ ಪಂಚಾಯತ್‌ ನ ಸದಸ್ಯ ಗಿರಿಶಂಕರ ಸುಲಾಯ, ಪುಣ್ಚಪ್ಪಾಡಿ ಶಕ್ತಿಕೇಂದ್ರ ಪ್ರಮುಖ್ ಮಹೇಶ್‌ ಕೆ ಸವಣೂರು, ಸುಳ್ಯ ಮಂಡಲ ಮಹಿಳಾ ಮೋರ್ಚಾದ ಕಾರ್ಯದರ್ಶಿ ಆಶಾ ರೈ ಕಲಾಯಿ, ಬೂತ್‌ ಸಂಖ್ಯೆ 68 ರ ಅಧ್ಯಕ್ಷ ಧನರಾಜ್‌ ಓಡಂತರ್ಯ, ಬೂತ್‌ 69 ರ ಕಾರ್ಯದರ್ಶಿ ಮೋಹಿತ್‌ ಕುಮಾರಮಂಗಲ, ಪಕ್ಷದ ಪ್ರಮುಖರಾದ ಸುರೇಶ್‌ ರೈ ಸೂಡಿಮುಳ್ಳು, ದಿವಾಕರ ಗುಂಡ್ಯಡ್ಕ, ತೀರ್ಥನ್‌ ಬೊಳ್ಳಾಜೆ, ಸಂಪತ್‌ ಕುಮಾರ್‌ ಇಂದ್ರ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here