ಪುತ್ತೂರು: ಬಿಜೆಪಿ ಪುತ್ತೂರು ನಗರ ಮಂಡಲದ ವತಿಯಿಂದ ಆಯೋಜಿಸಿದ ಬೂತ್ 128 ಮತ್ತು 129ರಲ್ಲಿ ಹಿರಿಯ ಗುರುಗಳನ್ನು ಗೌರವಿಸುವ ಮೂಲಕ ಗುರುಪೂರ್ಣಿಮೆ ಆಚರಿಸಲಾಯಿತು.

ಗುರುಗಳಾದ ಕಾಂಚನ ಸುಂದರ್ ಭಟ್ ದಂಪತಿ ಮತ್ತು ಎ.ವಿ.ನಾರಾಯಣ ದಂಪತಿಯವರನ್ನು ಗೌರವಿಸಿ, ಗುರುವಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಪಿ.ಬಿ, ಜಿಲ್ಲಾ ಕಾರ್ಯದರ್ಶಿ ವಿದ್ಯಾಗೌರಿ, ಪ್ರಶಿಕ್ಷಣ ಪ್ರಕೊಷ್ಟದ ಜಿಲ್ಲಾ ಸಂಚಾಲಕ ಚಂದ್ರಶೇಖರ್ ರಾವ್ ಬಪ್ಪಳಿಗೆ, ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ, ನಗರ ಸಭಾ ಅಧ್ಯಕ್ಷೆ ಲೀಲಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು, ಪಕ್ಷದ ಪ್ರಮುಖರಾದ ರಾಜೇಶ್ ಬನ್ನೂರು, ವಿಶ್ವನಾಥ ಗೌಡ ಬನ್ನೂರು, ರಾಮದಾಸ್ ಹಾರಡಿ, ಅಶೋಕ್ ಹಾರಾಡಿ, ನಗರ ಸಭಾ ಸದಸ್ಯ ಪ್ರೇಮಲತಾ ನಂದಿಲ , ನಿರಂಜನ್ ಮಾನ್ಯ, ನಾಗೇಂದ್ರ ಬಾಳಿಗಾ, ಮಣಿಕಂಠ, ಬೂತ್ ಅಧ್ಯಕ್ಷ ಪ್ರವೀಣ್ ಜೈನ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.