ಪುತ್ತೂರು: ಕಳೆದ 25 ವರ್ಷಗಳಿಂದ ನಿರ್ಮಾಣ, ಉತ್ಪಾದನೆ, ಫ್ಯಾಬ್ರಿಕೇಶನ್ ಹಾಗೂ ಸೇವಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ, ಗ್ರಾಹಕರ ಮೆಚ್ಚುಗೆ ಗಳಿಸಿರುವ ಪುತ್ತೂರಿನ ಉದ್ಯಮಿ ಯತೀಶ್ ರೈ ಚೆಲ್ಯಡ್ಕ ಅವರ ನೂತನ ಉದ್ಯಮ, ಹೊಸ ತಂತ್ರಜ್ಞಾನಾಧಾರಿತ ಅತ್ಯಾಧುನಿಕ ರೂಫಿಂಗ್ ಸೇವೆಗಳನ್ನು ಒದಗಿಸುವ ’ಪ್ರಕೃತಿ ಇಎಫ್ಪಿ ಎಲ್ಎಲ್ಪಿ’ ಸಂಸ್ಥೆಯು ಜು.9ರಂದು ಮಂಗಳೂರಿನ ಕುಳಾಯಿ ಹೊನ್ನಕಟ್ಟೆಯಲ್ಲಿರುವ ಲಕ್ಷ್ಮೀನಾರಾಯಣ ಕಾಂಪ್ಲೆಕ್ ನಲ್ಲಿ ಶುಭಾರಂಭಗೊಂಡಿತು. ನೂತನ ಸಂಸ್ಥೆಯನ್ನು ಸುರತ್ಕಲ್ ಕಟ್ಲದ ಜ್ಯೋತಿಷ್ಯರಾದ ನಾಗೇಂದ್ರ ಭಾರಧ್ವಾಜ್ ಅವರು ಉದ್ಘಾಟಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಪಣಂಬೂರು ಕೆನರಾ ಬ್ಯಾಂಕ್ನ ಗುರು ಬಸವರಾಜ್ ಐಶ್ವರ್ಯ ಕನ್ಸ್ಟ್ರಕ್ಷನ್ನ ಕೇಶವ್ ಶೆಟ್ಟಿ, ಪರ್ತಕರ್ತರಾದ ಬಾಳ ಜಗನ್ನಾಥ ಶೆಟ್ಟಿ, ಕಿರಣ್ ರೈ ಕಾವೂರು, ವಿನಾಯಂದ ಶೆಟ್ಟಿ ಕೃಪ್ಣಾಪುರ, ಅನಂತರಾಮ ಭಟ್ ಕುಲಾಯಿ, ಯಮುನಾ ಗ್ರೂಪ್ನ ಪುರುಷೋತ್ತಮ ಶೆಟ್ಟಿ ನುಳಿಯಾಲು, ಎಂಆರ್ಪಿಎಲ್ನ ಸೀತಾರಾಮ ರೈ, ನುಳಿಯಾಲು ಮಾತ ಡೆವಲಪ್ಪರ್ಸ್ನ ಸಂತೋಷ್ ಶೆಟ್ಟಿ, ಮೀರಾವಾಣಿ ಶೆಟ್ಟಿ, ದೇವೇಂದ್ರ ಶೆಟ್ಟಿ ಸುರತ್ಕಲ್, ಪುಷ್ಪರಾಜ್ ಶೆಟ್ಟಿ ಕುದುಂಬುರ್, ಸುರೇಂದ್ರ ಶೆಟ್ಟಿ ಉಡುಪಿ, ಚಿದಾನಂದ ರೈ ನೆಲ್ಯಾಜೆ, ಪದ್ಮನಾಭ ಕಟೀಲ್ ದುಬಾ, ಸಂತೋಷ್ ಕುಮಾರ್ ಮುಂಬಾಯಿ ಮತ್ತಿತರರು ಉಪಸ್ಥಿತರಿದ್ದು ಶುಭ ಹಾರೈಸಿದರು. ಸಂಸ್ಥೆಯ ಮಾಲಕ ಯತೀಶ್ ರೈ ಚೆಲ್ಯಡ್ಕರವರು ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿ ಸಹಕಾರ ಕೋರಿದರು.
ಏನಿದು ಪ್ರಕೃತಿ ಇಎಫ್ಪಿ,ಎಲ್ಎಲ್ಪಿ ಸಂಸ್ಥೆ
’ಪ್ರಕೃತಿ ಇಎಫ್ಪಿ ಎಲ್ಎಲ್ಪಿ’ ಸಂಸ್ಥೆಯು ಎಲ್ಲಾ ಬಗೆಯ ರೂಫಿಂಗ್ (ಕಟ್ಟಡದ ಮೇಲ್ಬಾವಣಿ) ಅವಶ್ಯಕತೆಗಳನ್ನು ಪೂರೈಸುವ ಸಂಸ್ಥೆಯಾಗಿದೆ. ಇಂಜಿನಿಯರ್ಡ್ ರೂಫಿಂಗ್ ಸಿರಾಮಿಕ್ ಟೈಲ್ಸ್, ಸ್ಟೋನ್ ಕೋಟೆಡ್ ’ಮಾಡುತ್ತಿದ್ದು, ತನ್ನ ಗುಣಮಟ್ಟದ ಉತ್ಪನ್ನಗಳ ಮೂಲಕ ಗ್ರಾಹಕರ ವಿಶ್ವಾಸ ಗಳಿಸಿಕೊಂಡಿದೆ. 25 ವರ್ಷಗಳ ಸುದೀರ್ಘ ಅನುಭವದ ಮೂಲಕ ಉತ್ಪಾದಿಸಲ್ಪಡುತ್ತಿರುವ ಸಂಸ್ಥೆಯ ಉತ್ಪನ್ನಗಳು ಮನೆ, ವಾಣಿಜ್ಯ ಸಂಕೀರ್ಣ ಹೀಗೆ ಯಾವುದೇ ಕಟ್ಟಡಗಳ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತಿವೆ. ನುರಿತ ತಂತ್ರಜ್ಞರು, ಸಿಬ್ಬಂದಿಯ ಸೇವೆಯ ಮೂಲಕ ರೂಫಿಂಗ್ ತಂತ್ರಜ್ಞಾನ ಜಗತ್ತಿನಲ್ಲಿ ಭವಿಷ್ಯದ ಅವಶ್ಯಕತೆಗಳನ್ನು ನೀಗಿಸುವಲ್ಲಿ ಸಂಸ್ಥೆಯು ಕಾರ್ಯೋನ್ಮುಖವಾಗಿದೆ. 50ಕ್ಕೂ ಅಧಿಕ ನುರಿತ ತಂಡಗಳ ಮೂಲಕ ಸೇವೆ ನೀಡುತ್ತಿದ್ದು. 300ಕ್ಕೂ ಅಧಿಕ ಸಂತೃಪ್ತ ಗ್ರಾಹಕ ಬಳಗವನ್ನು ಸಂಸ್ಥೆಯು ಹೊಂದಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂ.:9845229878, 8197875427ನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಮಾಲಕ ಯತೀಶ್ ರೈ ಚೆಲ್ಯಡ್ಕ ತಿಳಿಸಿದರು.