ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿನಿ ಜತೆ ಸಂವಾದ

0

ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಸಿಂಚನಲಕ್ಷ್ಮಿ ಜೊತೆಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

ಇವರು 2021ರ ನೀಟ್‌ ಪರೀಕ್ಷೆಯ PWD ಕೆಟಗರಿಯಲ್ಲಿ 2ನೇ ರಾಂಕ್‌ ಪಡೆದು ಪ್ರಸ್ತುತ ದೆಹಲಿಯ AIIMS(All India Institute of Medical Science) ನಲ್ಲಿ ಎಂಬಿಬಿಎಸ್‌ ವಿದ್ಯಾಭ್ಯಾಸವನ್ನು ಪೂರೈಸುತ್ತಿದ್ದಾರೆ. ಇವರು ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಯ ತಯಾರಿ ಕುರಿತಾದ ಮಾಹಿತಿಗಳನ್ನು ನೀಡಿದರು. ಬಳಿಕ ಸಂವಾದ ಕಾರ್ಯಕ್ರಮವು ನಡೆಯಿತು. 2024-25 ನೇ ಸಾಲಿನ ವಿದ್ಯಾರ್ಥಿನಿ ವಸುಧಾ ಭಟ್‌ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಒಟ್ಟು ನಿರ್ವಹಣೆಯನ್ನು ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಹರೀಶ ಶಾಸ್ತ್ರಿ ನಿರ್ವಹಿಸಿದರು.

LEAVE A REPLY

Please enter your comment!
Please enter your name here