ಗುರುಗಳ ಆಶೀರ್ವಾದದಿಂದ ಜೀವನದಲ್ಲಿ ಶ್ರೇಷ್ಠ ಸ್ಥಾನಮಾನ- ಜಯಸೂರ್ಯ ರೈ ಮಾದೋಡಿ
ಕಾಣಿಯೂರು: ಅಜ್ಞಾನವನ್ನು ಓಡಿಸಿ ಜ್ಞಾನವನ್ನು ಬೆಳಗುವ ಗುರುವಿಗೆ ಗುಲಾಮನಾದರೆ ಸಾಕಷ್ಟು ವಿದ್ಯೆ ಮತ್ತು ಜ್ಞಾನ ದೊರೆಯುವುದಲ್ಲದೆ ಅವರ ಆಶೀರ್ವಾದದಿಂದ ಜೀವನದಲ್ಲಿ ಶ್ರೇಷ್ಠ ಸ್ಥಾನಮಾನವನ್ನು ಗಳಿಸಲು ಸಾಧ್ಯ ಎಂದು “ಸಂಸ್ಕಾರ” ತರಗತಿಯಲ್ಲಿ ಶಾಲಾ ಸಂಚಾಲಕ ಜಯಸೂರ್ಯ ರೈ ಮಾದೋಡಿಯವರು ದೀಪ ಪ್ರಜ್ವಲಿಸಿ ಮಾತನಾಡಿದರು. ಗುರು ಪೂರ್ಣಿಮೆಯ ಮಹತ್ವವನ್ನು ಶಿಕ್ಷಕ ಅಶೋಕ್ ಕುಮಾರ್ ಪಿ ಅರ್ಥಪೂರ್ಣವಾಗಿ ವಿವರಿಸಿದ್ದರು. ಯೋಗ ಶಿಕ್ಷಕಿ ಶಶಿಕಲಾರವರು ಗುರುವಿನ ಬಗ್ಗೆ ಭಜನೆ ಹಾಡಿದರು. ಶಿಕ್ಷಕಿ ಸುಮಾ ಪಾರ್ವತಿ ಗುರುವಿನ ಬಗ್ಗೆ ಕಥೆ ಹೇಳಿದರು. ಶಿಕ್ಷಕಿ ಜಯಶೀಲರವರು ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಸ್ಕಾರ ತರಗತಿಯ ಮಕ್ಕಳಿಂದ ಸಾಮೂಹಿಕ ಪಾದ ನಮಸ್ಕಾರವನ್ನು ಮಾಡಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಟ್ರಸ್ಟಿ ದೇವಿಕಿರಣ್ ರೈ ಮಾದೋಡಿ, ಶಾಲಾ ಆಡಳಿತಾಧಿಕಾರಿ ವಸಂತ ರೈ ಕಾರ್ಕಳ, ಸಹ ಆಡಳಿತಾಧಿಕಾರಿ ಹೇಮಾ ನಾಗೇಶ್ ರೈ, ಮುಖ್ಯ ಗುರುಗಳಾದ ನಾರಾಯಣ ಭಟ್, ವಿನಯ ವಿ ಶೆಟ್ಟಿ, ಸಹ ಮುಖ್ಯಸ್ಥೆ ಅನಿತಾ ಜೆ ರೈ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
