ಆಲಂಕಾರು: ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಕುಟ್ರುಪಾಡಿ ಮಹಾ ಶಕ್ತಿಕೇಂದ್ರದ ಕುಟ್ರುಪಾಡಿ ಬೂತ್ ಸಂಖ್ಯೆ 46 ಇದರ ವತಿಯಿಂದ ಗುರು ಪೂರ್ಣಿಮೆ ಅಂಗವಾಗಿ ಸುಸಂಕೃತ ಸಮಾಜ ನಿರ್ಮಾಣ ಮಾಡುವಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಬೋಧನೆಯನ್ನು ನೀಡಿ ಸಮಾಜದಲ್ಲಿ ಉನ್ನತ ಗೌರವವನ್ನು ಸಂಪಾದಿಸಿರುವ ಹಿರಿಯರಾದ ನಿವೃತ್ತ ಗುರುಗಳಾದ ಸೀತಾರಾಮ ರಾವ್ ಮತ್ತು ಲಲಿತಾ ಸೀತಾರಾಮ ರಾವ್ ಪುತ್ರ ಬೈಲು ದಂಪತಿಗಳನ್ನು ಅವರ ಮನೆಯಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಬಿ.ಜೆ.ಪಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ, ಬಿ.ಜೆ.ಪಿ ಕುಟ್ರುಪಾಡಿ ಮಹಾ ಶಕ್ತಿ ಕೇಂದದ ಅಧ್ಯಕ್ಷ ಸುರೇಶ್ ದೇಂತಾರು, ಬಿ.ಜೆ.ಪಿ ಸುಳ್ಯಮಂಡಲ ರೈತಮೋರ್ಚಾದ ಪ್ರದಾನ ಕಾರ್ಯದರ್ಶಿ ಶಿವಪ್ರಸಾದ್ ರೈ ಮೈಲೇರಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಪುಲಸ್ಥ್ಯ ರೈ, ಬೂತ್ ಸಮಿತಿ ಅಧ್ಯಕ್ಷ ದಯಾನಂದ ಪುರಿಯ ಉಪಸ್ಥಿತರಿದ್ದರು.