ಸವಣೂರು: ಭಾರತೀಯ ಜನತಾ ಪಾರ್ಟಿ ಪಾಲ್ತಾಡಿ ಶಕ್ತಿಕೇಂದ್ರದ ಬೂತ್ ಸಂಖ್ಯೆ 71 ಪಾಲ್ತಾಡಿ ಇದರ ವತಿಯಿಂದ ಗುರು ಪೂರ್ಣಿಮೆಯ ಅಂಗವಾಗಿ ನಿವೃತ್ತ ಮುಖ್ಯಗುರು ಈಶ್ವರ ಭಟ್ ಎಳ್ಯಡ್ಕ ಅವರಿಗೆ ಗುರುವಂದನೆ, ಗೌರವಾರ್ಪಣೆ ಕಾರ್ಯಕ್ರಮವನ್ನು ಅವರ ನಿವಾಸದಲ್ಲಿ ನಡೆಸಲಾಯಿತು.
ಈ ಸಂಧರ್ಭದಲ್ಲಿ ಬೂತ್ ಸಮಿತಿ ಅಧ್ಯಕ್ಷ ಶಿವಾನಂದ ಗೌಡ ಪಾಲ್ತಾಡಿ, ಸವಣೂರು ಗ್ರಾ.ಪಂ.ಸದಸ್ಯ ಭರತ್ ರೈ ಕಲಾಯಿ, ಪ್ರಮುಖರಾದ ಜಯಪ್ರಶಾಂತ್ ಪಲ್ಲತಡ್ಕ, ಬಾಲಕೃಷ್ಣ ಗೌಡ ,ಚೇತನ್ ಪಲ್ಲತಡ್ಕ, ಯತೀಶ್ ಪಲ್ಲತಡ್ಕ ಮೊದಲಾದವರು ಉಪಸ್ಥಿತರಿದ್ದರು.
