ಕಡಬದಲ್ಲಿ ಅಗ್ನಿಶಾಮಕ ಠಾಣೆ ಪ್ರಾರಂಭಿಸುವಂತೆ ಗೃಹ ಸಚಿವರಿಗೆ ಫಝಲ್ ಕೋಡಿಂಬಾಳ ಮನವಿ

0

ಕಡಬ: ಕಡಬ ತಾಲೂಕು ಕೇಂದ್ರದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸುವಂತೆ ತಾಲೂಕು ಪಂಚಾಯತ್ ಮಾಜಿ ಸದಸ್ಯ ಫಝಲ್ ಕೋಡಿಂಬಾಳ ಅವರು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರಿಗೆ ಮಂಗಳೂರು ಸರ್ಕ್ಯೂಟ್ ಹೌಸ್ ನಲ್ಲಿ ಮನವಿ ನೀಡಿದ್ದಾರೆ.


ಅವರು ಮನವಿ ನೀಡಿ, ಈಗಾಗಲೇ ಕಡಬ ತಾಲೂಕಿನಲ್ಲಿ ಅವಘಡಗಳು ಸಂಭವಿಸಿದಾಗ ದೂರದ ಪುತ್ತೂರು, ಮಂಗಳೂರಿನಿಂದ ಅಗ್ನಿ ಶಾಮಕ ದಳ ಆಗಮಿಸಬೇಕಾಗಿದೆ. ಆದರೆ ಅಷ್ಟು ದೂರದಿಂದ ವಾಹನ ತಲುಪುವಾಗ ಅವಘಡ ನಡೆಯುವಲ್ಲಿ ಅನಾಹುತಗಳು ಸಂಭವಿಸುತ್ತಿದೆ. ಆದುದರಿಂದ ಕೂಡಲೇ ಅಗ್ನಿ ಶಾಮಕ ಠಾಣೆಯನ್ನು ಪ್ರಾರಂಬಿಸಬೇಕು, ಈಗಾಗಲೇ ಈ ಬಗ್ಗೆ ಸ್ಥಳವನ್ನು ಖಾದಿರಿಸಲಾಗಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಪಿ.ಪಿ. ವರ್ಗಿಸ್, ಸರ್ವೋತ್ತಮ ಗೌಡ. ನೆಲ್ಯಾಡಿ ತಾಲೂಕು ಪಂಚಾಯತ್ ಮಾಜಿ ಸದಸ್ಯೆ ಉಷಾ ಅಂಚನ್, ಶಿರಾಡಿ ಗ್ರಾಮ ಪಂಚಾಯತ್ ಸದಸ್ಯ ಎಂ.ಕೆ.ಪೌಲೋಸ್ , ಅಬ್ರಾಹಾಂ ನೆಲ್ಯಾಡಿ, ಪೂವಪ್ಪ ಕರ್ಕೇರ, ಸತೀಶ್ ಮೀನಾಡಿ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here