ಪುತ್ತೂರು: ಷಣ್ಮುಖದೇವ ಪ್ರೌಢಶಾಲೆಯಲ್ಲಿ ಪ್ರಥಮ ಚಿಕಿತ್ಸೆಯ ಕುರಿತು ಮಾಹಿತಿ ಕಾರ್ಯಕ್ರಮ ಜು.10ರಂದು ನಡೆಯಿತು ನಡೆಯಿತು.
ಸಂಪನ್ಮೂಲ ವ್ಯಕ್ತಿ ಕೊಳ್ತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಅಮಿತ್ ರವರು ಪ್ರಥಮ ಚಿಕಿತ್ಸಾ ಕ್ರಮಗಳನ್ನು ಪ್ರಾಯೋಗಿಕವಾಗಿ ವಿವರಿಸಿದರು.ಆರೋಗ್ಯ ಸಹಾಯಕಿಯರಾದ ಲೀಲಾವತಿ,ಅಕ್ಷತಾ ಹಾಗೂ ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು, ಪೋಷಕರು,ವಿದ್ಯಾಭಿಮಾನಿಗಳು, ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಶಾಲೆಯ ಸಂಚಾಲಕ ಶಿವರಾಮ ಭಟ್ ಬೀರ್ಣಕಜೆ ಸ್ವಾಗತಿಸಿದರು. ಶಾಲೆಯ ಖಜಾಂಚಿ ದಿವಾಕರ ರೈ ಕೆರೆಮೂಲೆ ಅತಿಥಿಗಳನ್ನು ಶಾಲು ಹಾಕಿ ಗೌರವಿಸಿದರು .ಮುಖ್ಯ ಗುರು ಕೃಷ್ಣವೇಣಿ ವಂದಿಸಿದರು.ಶಿಕ್ಷಕರಾದ ಪ್ರಸಾದ್ ನಿರೂಪಿಸಿದರು.