ಫೇಲ್ ವಿದ್ಯಾರ್ಥಿಗಳೇ ಚಿಂತಿಸಬೇಡಿ, ಉದ್ಯೋಗವಕಾಶಕ್ಕೆ ಇಲ್ಲಿದೆ ಸುವರ್ಣಾವಕಾಶ – ಪಶುಪತಿ ಸೇವಾ ಟ್ರಸ್ಟ್ ನಲ್ಲಿದೆ ಪ್ರಾಯೋಗಿಕ ತರಬೇತಿ, ಸ್ಟೈಪೆಂಡ್ ಕೂಡ ಲಭ್ಯ

0

ಪುತ್ತೂರು: ಕೆಲವರಿಗೆ ವಿದ್ಯೆ ಹತ್ತುವುದಿಲ್ಲ , ಅವರು ಕೌಶಲ್ಯವನ್ನು ಹೊಂದಿರುತ್ತಾರೆ. ಆದರೆ ಅವರಿಗೆ ಸಾಕಷ್ಟು ಉದ್ಯೋಗವಕಾಶಗಳ ಕೊರತೆ ಇರುತ್ತದೆ. ಲೈಟಿಂಗ್ ಹಾಗೂ ಎಲೆಕ್ಟ್ರಿಕಲ್ ಐಟಂಗಳ ರಿಪೇರಿ ಮುಂತಾದ ಕೆಲಸಗಳನ್ನು ಅವರಿರುವ ಪರಿಸರದಲ್ಲಿ ಮಾಡುವಂತಹ ಅವಕಾಶಗಳ ಸುವರ್ಣಾವಕಾಶವನ್ನು ಇಲ್ಲಿ ಒದಗಿಸಲಾಗುತ್ತದೆ. 

ಹೌದು, 8,9,10 ತರಗತಿಗಳಲ್ಲಿ ಅನುತ್ತೀರ್ಣ(ಫೇಲ್) ಆದಂತಹ ವಿದ್ಯಾರ್ಥಿಗಳಿಗೆ ತಮ್ಮ ಸ್ವಂತ ಉದ್ಯಮಕ್ಕೆ ಅಥವಾ ವೃತ್ತಿ ಬದುಕಿಗೆ ಉದ್ಯೋಗಕ್ಕೆ ಆಧಾರವಾಗಬಲ್ಲ ಲೈಟಿಂಗ್, ಎಲೆಕ್ಟ್ರಿಕಲ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಾಯೋಗಿಕ ತರಬೇತಿಯನ್ನು ವಿನ್ಯಾಸಗೊಳಿಸಲಾಗಿದ್ದು, ಬೊಳ್ವಾರು ಬಂಟರ ಭವನದ ಎದುರಿನ ಜಿ.ಎಲ್ ಟ್ರೇಡ್ ಸೆಂಟರಿನಲ್ಲಿ ಕಾರ್ಯಾಚರಿಸುತ್ತಿರುವ ಪಶುಪತಿ ಲೈಟ್ಸ್, ಫ್ಯಾನ್ಸ್ ಇಲೆಕ್ಟ್ರಿಕಲ್ಸ್ ಸಂಸ್ಥೆಯ ಪಶುಪತಿ ಸೇವಾ ಟ್ರಸ್ಟ್ ಸಂಸ್ಥೆಯು ವಿದ್ಯಾರ್ಥಿಗಳಿಗೆ ಕಲಿಸಿಕೊಡಲು ಮುಂದಾಗಿದೆ. ಪ್ರಾಯೋಗಿಕ ತರಬೇತಿಯ ಜೊತೆಗೆ ಸ್ಟೈಪೆಂಡ್ ಗಳಿಸುವ ಅವಕಾಶವನ್ನೂ ಒದಗಿಸಲಾಗಿದೆ. 

ಲೈಟಿಂಗ್ ಹಾಗೂ ಫ್ಯಾನ್ ಗಳ ಬದಲಾವಣೆ, ಹೊಸ ಫ್ಯಾನ್ ಗಳ ಜೋಡಣೆ, ಸ್ವಿಚ್, ಪ್ಲಗ್ ಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ ಅವನ್ನು ಬದಲಾಯಿಸುವುದರ ಬಗ್ಗೆ ಪ್ರಾಯೋಗಿಕವಾಗಿ ತಿಳಿಸಿಕೊಡಲಾಗುತ್ತದೆ. ಸೀಮಿತ ವಿದ್ಯಾರ್ಥಿಗಳಿಗೆ ಮಾತ್ರ ಸೇರುವ ಅವಕಾಶವಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 24ರಂದು ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ 9448953682 ನಂಬರಿಗೆ ಸಂಪರ್ಕಿಸಬಹುದಾಗಿದೆ ಎಂದು ಪಶುಪತಿ ಸೇವಾ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here