ಅಧ್ಯಕ್ಷ: ಸುಶಾಂತ್ ಅಜ್ಜಿಕಲ್ಲು, ಕಾರ್ಯದರ್ಶಿ: ಸುಷ್ಮಾ ಸತೀಶ್
ಅಧ್ಯಕ್ಷೆ: ತ್ರಿವೇಣಿ ಪಲ್ಲತ್ತಾರು, ಕಾರ್ಯದರ್ಶಿ: ಸುಂದರಿ ಪರ್ಪುಂಜ

ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಗ್ರಾಮ ಸಮಿತಿ ಒಳಮೊಗ್ರು ಇದರ ವಾರ್ಷಿಕ ಮಹಾಸಭೆ ಮತ್ತು ಪುಸ್ತಕ ವಿತರಣೆ ಸಮಾರಂಭವು ಕುಂಬ್ರದ ನವೋದಯ ರೈತ ಸಭಾಭವನ ದಲ್ಲಿ ಸಂಘದ ಅಧ್ಯಕ್ಷ ಉಮೇಶ್ ಕುಮಾರ್ ಬರಮೇಲುರವರ ಅಧ್ಯಕ್ಷತೆಯಲ್ಲಿ ಜು.೬ ರಂದು ನಡೆಯಿತು. ಈ ಸಂದರ್ಭದಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಬಿಲ್ಲವ ಗ್ರಾಮ ಸಮಿತಿಯ ನೂತನ ಅಧ್ಯಕ್ಷರಾಗಿ ಸುಶಾಂತ್ ಅಜ್ಜಿಕಲ್ಲು, ಕಾರ್ಯದರ್ಶಿಯಾಗಿ ಸುಷ್ಮಾ ಸತೀಶ್ ಕೋಡಿಬೈಲು, ಉಪಾಧ್ಯಕ್ಷರಾಗಿ ಬಾಲಕೃಷ್ಣ ಪೂಜಾರಿ ಕುಂಬ್ರ, ಜತೆಕಾರ್ಯದರ್ಶಿಯಾಗಿ ಬಾಬು ಪ್ರಸಾದ್ ದರ್ಬೆತ್ತಡ್ಕ, ಕೋಶಾಧಿಕಾರಿಯಾಗಿ ಪ್ರಮಿತಾ ಬಡಕೋಡಿರವರುಗಳನ್ನು ಆಯ್ಕೆ ಮಾಡಲಾಯಿತು. ಬಿಲ್ಲವ ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ತ್ರಿವೇಣಿ ಪಲ್ಲತ್ತಾರು, ಕಾರ್ಯದರ್ಶಿಯಾಗಿ ಸುಂದರಿ ಪರ್ಪುಂಜ, ಉಪಾಧ್ಯಕ್ಷೆಯಾಗಿ ನವೀನಾಕ್ಷಿ,
ಜೊತೆ ಕಾರ್ಯದರ್ಶಿಯಾಗಿ ವಿನೋದ ಮಗಿರೆ, ಕೋಶಾಧಿಕಾರಿಯಾಗಿ ಸುಮಲತಾ ಮಗಿರೆರವರುಗಳನ್ನು ಆಯ್ಕೆ ಮಾಡಲಾಯಿತು. ಆಯ್ಕೆ ಪ್ರಕ್ರಿಯೆಯನ್ನು ಪುತ್ತೂರು ಬಿಲ್ಲವ ಸಂಘದ ಕಾರ್ಯದರ್ಶಿಯಾದ ಚಿದಾನಂದ ಸುವರ್ಣ ನಡೆಸಿಕೊಟ್ಟರು. ವೇದಿಕೆಯಲ್ಲಿ ಯುವ ವಾಹಿನಿ ಪುತ್ತೂರು ಘಟಕ ಅಧ್ಯಕ್ಷ ಅಣ್ಣಿ ಪೂಜಾರಿ, ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಕೋಲಾಡಿ, ಕುಂಬ್ರ ಸುಶಾ ಡ್ರೆಸ್ಸಸ್ ಮಾಲಕ ಸುರೇಶ್ ಕುಮಾರ್ ತಿಂಗಳಾಡಿ, ಮೋನಪ್ಪ ಪೂಜಾರಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಬಿಲ್ಲವ ಸಮಾಜದ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.