ಪುತ್ತೂರು: ಲಯನ್ಸ್ ಕ್ಲಬ್ ಆಲಂಕಾರು ದುರ್ಗಾಂಬಾ ಇದರ 2025-26ನೇ ಸಾಲಿನ ಅಧ್ಯಕ್ಷರಾಗಿ ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಪ್ಪ ಗೌಡ ಕೆ., ಕಾರ್ಯದರ್ಶಿಯಾಗಿ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಿಂಗಪ್ಪ ಪೂಜಾರಿ ನೈಯ್ಯಲ್ಗ ಹಾಗೂ ಕೋಶಾಧಿಕಾರಿಯಾಗಿ ಆಲಂಕಾರು ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಇಂದುಶೇಖರ ಶೆಟ್ಟಿ ಆಯ್ಕೆಯಾಗಿದ್ದಾರೆ.

ನಿಕಟಪೂರ್ವ ಅಧ್ಯಕ್ಷ ಲಕ್ಷ್ಮೀನಾರಾಯಣ ಪ್ರಭು ಆಲಂಕಾರು, ಉಪಾಧ್ಯಕ್ಷರಾಗಿ ಡಾ.ಹರಿದಾಸ್ ಭಟ್, ಶ್ರೀಪತಿ ರಾವ್, ಚೀಫ್ ಎಡೈಸರ್ ಆಗಿ ಸುಂದರ ಗೌಡ, ಸರ್ವೀಸ್ ಚೆಯರ್ಪರ್ಸನ್ ಆಗಿ ನಿತ್ಯಾನಂದ ಶೆಟ್ಟಿ, ಕ್ಲಬ್ ಎಡ್ಮಿನಿಸ್ಟ್ರೇಷನ್ ಆಗಿ ಸುಧಾಕರ ರೈ, ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಶನ್ ಆಗಿ ಮೋಹನದಾಸ್ ರೈ, ಕ್ಲಬ್ ಪಿಆರ್ಒ ಆಗಿ ಚಂದ್ರಶೇಖರ ರೈ, ಮೆಂಬರ್ಶಿಪ್ ಚೆಯರ್ಪರ್ಸನ್ ಆಗಿ ಕಿರಣ್, ಕ್ಲಬ್ ಟೇಮರ್ ಆಗಿ ಸುಭಾಸ್ ಶೆಟ್ಟಿ ಕೊಲ, ನಿರ್ದೇಶಕರಾಗಿ ದಯಾನಂದ ರೈ, ಪ್ರಶಾಂತ್ ರೈ, ಪುಷ್ಪ ಎಸ್.ಶೆಟ್ಟಿ, ಹೇಮಂತ್ ರೈ ಆಯ್ಕೆಯಾಗಿದ್ದಾರೆ. ಜು.೧೯ರಂದು ನೂತನ ಸಮಿತಿ ಪದಗ್ರಹಣ ನಡೆಯಲಿದೆ.