ಜು.14ಕ್ಕೆ ಪುತ್ತೂರಿನಲ್ಲಿ ಜನ್‌ಮನ್ ಜೆನರಿಕ್ ಔಷಧಿಯ ಎರಡು ಪ್ರಾಂಚೈಸಿ ಶುಭಾರಂಭ
ಪುತ್ತೂರು: ದೇಶದಲ್ಲಿ ಯುವಕರಿಗೆ ಸದೃಢವಾದ ವ್ಯವಹಾರವನ್ನು ಕಟ್ಟಿಕೊಡುವ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಜನಸಾಮಾನ್ಯರಿಗೆ ಸಹಕಾರಿಯಾಗುವ ಉದ್ದೇಶದಿಂದ ಪ್ರಾರಂಭವಾದ ಸಂಸ್ಥೆ ಜನ್‌ಮನ್ ಜೆನರಿಕ್ ಔಷಧಿ. ಬ್ರ್ಯಾಂಡ್ ಹೆಸರಿನ ಔಷಧಿಗಳಿಗಿಂತ ಕಡಿಮೆ ಅತ್ಯಂತ ಕಡಿಮೆ ಬೆಲೆಗೆ ಗುಣಮಟ್ಟದ ಔಷಧಿಯನ್ನು ನೀಡುವ ಉದ್ದೇಶದಿಂದ ದೇಶದಾದ್ಯಂತ “ಜನ್‌ಮನ್ ಜೆನರಿಕ್ ಔಷಧಿ” ಫ್ರ್ಯಾಂಚೈಸ್ ಗಳನ್ನು ತೆರೆಯಲಾಗುತ್ತಿದ್ದು ಪುತ್ತೂರಿನಲ್ಲಿ ಎರಡು ಪ್ರಾಂಚೈಸಿಗಳು ಜು.14ರಂದು ಉದ್ಘಾಟನೆಗೊಳ್ಳಲಿದೆ.
ಮುಖ್ಯರಸ್ತೆ ಬೊಳುವಾರಿನಲ್ಲಿರುವ ಮೇಗಾ ಸೆಂಟರ್ ನಲ್ಲಿ ಆಸ್ಕರ್ ಆನಂದ್ ಅವರ ಮಾಲಕತ್ವದಲ್ಲಿ “ಜನ್ ಮನ್ ಜನರಿಕ್ ಔಷಧಿ”ಯ ಹೊಸ ಫ್ರ್ಯಾಂಚೈಸ್ ಹಾಗೂ ಕೋರ್ಟು ರಸ್ತೆಯಲ್ಲಿರುವ ಸತ್ಯಸಾಯಿ ಮೆಡಿಕಲ್‌ನಲ್ಲಿ ಕಿಶೋರ್ ಕುಮಾರ್ ಅವರ ಮಾಲಕತ್ವದಲ್ಲಿ ಉಪ ಫ್ರ್ಯಾಂಚೈಸಿಯು ಉದ್ಘಾಟನೆಗೊಳ್ಳಲಿದೆ. ಶಾಸಕ ಅಶೋಕ್ ಕುಮಾರ್ ರೈ ಅವರು ನೂತನ ಪ್ರಾಂಚೈಸಿಗಳನ್ನು ಉದ್ಘಾಟಿಸಲಿದ್ದಾರೆ.
ಉತ್ಕೃಷ್ಟ ಗುಣಮಟ್ಟದ ಔಷಧಿಗಳನ್ನು ಅತ್ಯಂತ ಕಡಿಮೆ ಬೆಲೆಗೆ ನೀಡುವುದು ಇದರ ಎರಡನೇ ಉದ್ದೇಶವಾಗಿದೆ. ಗುಣಮಟ್ಟದಲ್ಲಿ ಯಾವುದೇ ರೀತಿಯ ರಾಜಿಮಾಡಿಕೊಳ್ಳದೆ ಇಲ್ಲಿ ದೊರೆಯುವ ಶೇ.75 ಔಷಧಿಗಳಿಗೆ ಶೇ.50 ಕಡಿಮೆ ಬೆಲೆಯನ್ನು ನಿರ್ಧರಿಸಿದೆ. “ಜನ್‌ಮನ್ ಜನರಿಕ್ ಔಷಧಿ” ಕೇಂದ್ರದ ಮಾಲಕರ ದೃಢವಾದ ವ್ಯವಹಾರದ ಮೂಲಕ, ಆರ್ಥಿಕ ಸ್ಥಿರತೆ ಹಾಗೂ ಗುಣಮಟ್ಟದ ಔಷಧಿಗಳನ್ನು ಅತ್ಯಂತ ಕಡಿಮೆ ಬೆಲೆಗೆ ನೀಡುವ ಮೂಲಕ ಜನಸಾಮಾನ್ಯರಿಗೆ ಸಹಕಾರ ನೀಡುವುದರ ಜೊತೆಗೆ ಆರೋಗ್ಯವಂತ ಮನಸ್ಸು, ಕುಟುಂಬ, ಸಮಾಜದ ನಿರ್ಮಾಣದೊಂದಿಗೆ ದೇಶದ ಅಭಿವೃದ್ಧಿಗೆ ಬೃಹತ್ ಪ್ರಮಾಣದಲ್ಲಿ ಕೊಡುಗೆ ನೀಡುವ ನಿಟ್ಟಿನಲ್ಲಿ ಶೀಘ್ರಗತಿಯಲ್ಲಿ ಬೆಳೆಯುತ್ತಿರುವಂತಹ ಸಂಸ್ಥೆ. ಮಹಾರಾಷ್ಟ್ರ, ಕೇರಳ ಹಾಗೂ ಕರ್ನಾಟಕದಲ್ಲಿ ಜನ್ ಮನ್ ಜನರಿಕ್ ಔಷಧಿಯ ಫ್ರ್ಯಾಂಚೈಸ್ ಗಳು ಅತ್ಯಂತ ವೇಗದಲ್ಲಿ ತೆರೆಯುತ್ತಿದ್ದು, ಪ್ರತಿ ಕಿ.ಮೀ ಗೆ ಒಂದರಂತೆ ಹೊಸ ಫ್ರ್ಯಾಂಚೈಸ್ ಗಳಿಗೆ ಅವಕಾಶ ನೀಡಲಾಗುತ್ತದೆ. ಇಲ್ಲಿ 3000+ ಔಷಧಿಗಳು, 300 + ಶಸ್ತ್ರಚಿಕಿತ್ಸಾ ಸಲಕರಣೆಗಳು, 250+ ಪಶು ಔಷಧಿಗಳು, ಆನ್ಲೈನ್ ಮೂಲಕ ಔಷಧಿ ಖರೀದಿಸುವ ಅವಕಾಶ ನೀಡಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಜನ್‌ಮನ್ ಜನರಿಕ್ ಫ್ರ್ಯಾಂಚೈಸ್‌ಯಲ್ಲಿ ಆಸಕ್ತಿಯುಳ್ಳ ಯಾವುದೇ ಗ್ರಾಹಕರಿಗೆ ಔಷಧಿ ಅಂಗಡಿಗಳನ್ನು ತೆರೆಯಲು ಸಂಪೂರ್ಣವಾದ ಸಹಕಾರವನ್ನು ನೀಡಲಾಗುತ್ತದೆ. ಸ್ಥಳದ ಆಯ್ಕೆ, ಸಿಬ್ಬಂದಿಗಳ ಆಯ್ಕೆ, ಪಾರ್ಮಾಸಿಟಿಕಲ್ ಆಯ್ಕೆ, ಅಂಗಡಿ ಒಳಾಂಗಣ ವಿನ್ಯಾಸ, ಅಂಗಡಿ ಬ್ರ್ಯಾಂಡಿಂಗ್, ಔಷಧಿ ಪರವಾನಗಿ ಪಡೆಯಲು ಸಹಕಾರ, ಸಿಬ್ಬಂದಿಗಳ ತರಬೇತಿ, ಸಾಫ್ಟ್ವೇರ್ ಅಳವಡಿಕೆ, ವ್ಯವಹಾರದ ಬೆಳವಣಿಗೆಗೆ ಬೇಕಾದ ಮಾರುಕಟ್ಟೆ ಬೆಳವಣಿಗೆ ಹೀಗೆ ಸಂಪೂರ್ಣ ಸಹಕಾರವನ್ನು ನೀಡಿ ವ್ಯವಹಾರದ ಯಶಸ್ಸಿನ ಸಂಪೂರ್ಣ ಜವಾಬ್ದಾರಿಯನ್ನು ಔಷಧಿ ಅಂಗಡಿಯ ಮಾಲಕನೊಂದಿಗೆ ಜನ್‌ಮನ್ ಸಂಸ್ಥೆಯು ತೆಗೆದುಕೊಳ್ಳುತ್ತದೆ. ಔಷಧಿ ಕೇಂದ್ರಗಳನ್ನು ಸ್ಥಾಪಿಸುವ ಮೊದಲು ಸಂಪೂರ್ಣ ಮಾರುಕಟ್ಟೆಯ ಅಧ್ಯಯನವನ್ನು ನಡೆಸಿ, ವ್ಯವಹಾರದ ಯಶಸ್ಸು ಖಚಿತಗೊಂಡ ನಂತರವೇ ಹೊಸ ಫ್ರ್ಯಾಂಚೈಸ್ ಗಳಿಗೆ ಅನುಮೋದನೆಯನ್ನು ನೀಡಲಾಗುತ್ತದೆ. ಜನ್ ಮನ್ ಜನರಿಕ್ ಔಷಧಿಯ ಫ್ರ್ಯಾಂಚೈಸ್ ಗಳನ್ನು ಎರಡು ರೀತಿಯಲ್ಲಿ ತೆರೆಯಲಾಗುತ್ತಿದೆ. ಹೊಸ ಫ್ರಾಂಚೈಸಿಯನ್ನು ಪ್ರಾರಂಭಿಸಬಹುದು ಅಥವಾ ಬೇರೆ ಔಷಧಿ ಅಂಗಡಿಗಳಿಗೆ ಉಪ- ಫ್ರ್ಯಾಂಚೈಸಿಯಾಗಿ ತೆರೆಯಬಹುದು ಆದರೆ ಅಂಗಡಿಯ ಹೆಸರು “ಜನ್ ಮನ್ ಜನರಿಕ್ ಔಷಧಿ” ಎಂದು ಕಡ್ಡಾಯವಾಗಿ ನಮೂದಿಸಿರಬೇಕು. ಈ ಸಂಸ್ಥೆಯ ಹೆಚ್ಚಿನ ವಿವರವನ್ನು www.janmanpharma.in ವೆಬ್ಸೈಟ್ ಮೂಲಕ ಪಡೆಯಬಹುದು.
ಡಾ. ಅನಿಲ ದೀಪಕ್ ಶೆಟ್ಟಿ ಮುಖ್ಯ ಕಾರ್ಯನಿರ್ವಾಹಕರು, ಜನ್ಮಾನ್ ಜೆನೆರಿಕ್ ಔಷಧಿ (ಸಸ್ಪಿಂಜಿರಾ ಫಾರ್ಮಸೂಟಿಕಲ್ಸ್ ಪ್ರೈ.ಲಿ. ಘಟಕ)