ಕಾಣಿಯೂರು: ಚಾರ್ವಾಕ ಗ್ರಾಮದ ಕೋರಿಯಾನ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಗರಡಿ ಹಾಗೂ ಪರಿವಾರ ಪರಿವಾರ ದೈವಗಳ ಜೀರ್ಣೋದ್ಧಾರದ ಅಂಗವಾಗಿ ಮನೆ ಮನೆ ಭಜನೆ ಭಕ್ತಿ ಹೆಜ್ಜೆ ಕಾರ್ಯಕ್ರಮಕ್ಕೆ ಗರಡಿ ಕ್ಷೇತ್ರದಲ್ಲಿ ಚಾಲನೆ ನೀಡಲಾಯಿತು.
ಕ್ಷೇತ್ರದ ಸೇವಾ ಟ್ರಸ್ಟಿನ ಅಧ್ಯಕ್ಷರಾದ ಸತ್ಯನಾರಾಯಣ ಕಲ್ಲೂರಾಯ ಚಾರ್ವಾಕ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಟ್ರಸ್ಟಿನ ಕಾರ್ಯದರ್ಶಿ ಬಾಲಕೃಷ್ಣ ರೈ ಕಾಸ್ಪಾಡಿಗುತ್ತು, ಉಪಾಧ್ಯಕ್ಷ ವಸಂತ ದಲಾರಿ, ಟ್ರಸ್ಟಿಗಳಾದ ಅಜಿತ್ ನಡುಬೈಲು, ಪ್ರಸನ್ನ ಅಭಿಕಾರ, ಸ್ವಯಂ ಸೇವಕ ಸಮಿತಿ ಅಧ್ಯಕ್ಷ ನಂದನ್ ಕಜೆ, ಹಿರಿಯರಾದ ನಾರ್ಣಪ್ಪ ಗೌಡ ಜತ್ತೋಡಿ, ಉಮನಾಥ ಗೌಡ ಮುದುವ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.