ಪುತ್ತೂರು: ಹಿರಿಯ ಸಹಕಾರಿ ಧುರೀಣ, ಸಾಮಾಜಿಕ, ರಾಜಕೀಯ ಮುಂದಾಳು ಪರ್ಪುಂಜ ಬಾರಿಕೆ ನಾರಾಯಣ ರೈ ಮತ್ತು ದೇವಕಿ ಎನ್ ರೈ ರವರ ದಾಂಪತ್ಯ ಜೀವನದ 50ನೇ ವರ್ಷಾಚರಣೆಯು ಜು.13 ರಂದು ಅವರ ಪರ್ಪುಂಜ ಬಾರಿಕೆ ನಿವಾಸದಲ್ಲಿ ನಡೆಯಿತು.

ಪ್ರಾರಂಭದಲ್ಲಿ ಹಿರಿಯ ಉದ್ಯಮಿ ಅರಿಯಡ್ಕ ಚಿಕ್ಕಪ್ಪ ನಾಕ್‌ರವರು ದೀಪ ಬೆಳಗಿಸಿ, ಶುಭಹಾರೈಸಿದರು. ಬಳಿಕ ನಾರಾಯಣ ರೈ ಮತ್ತು ದೇವಕಿ ರೈಯವರು ಪರಸ್ವರ ಹಾರವನ್ನು ಬದಲಾಯಿಸಿಕೊಂಡರು. ಕೇಕ್ ಕತ್ತರಿಸಿ, ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಆಚರಣೆ ನಡೆಯಿತು.

ಜನರ ಪ್ರೀತಿಗಳಿಸಿದ್ದಾರೆ- ಕಡಮಜಲು ಸುಭಾಸ್ ರೈ
ಸಾಮಾಜಿಕ ಮುಂದಾಳು ಕಡಮಜಲು ಸುಭಾಸ್ ರೈರವರು ಮಾತನಾಡಿ ನಾರಾಯಣ ರೈ ಪರ್ಪುಂಜ ಬಾರಿಕೆರವರು 1968 -75 ಸಾಲಿನಲ್ಲಿ ಸಹಕಾರ ಸಂಘಗಳಲ್ಲಿ ವಿವಿಧ ಕಡೆ ಮುಖ್ಯ ಕಾರ್‍ಯನಿರ್ವಹಣಾಧಿಕಾರಿಯಾಗಿದ್ದರು. 1968 -75ರ ಬಳಿಕ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಇವರು 15 ವರ್ಷ ಪುತ್ತೂರಿನಲ್ಲಿ ಮಲೆನಾಡು ಹಾಲು ಉತ್ಪಾದಕರ ಒಕ್ಕೂಟದ ಮುಖ್ಯ ಕಾರ್‍ಯನಿರ್ವಹಣಾಧಿಕಾರಿಯಾಗಿದ್ದರು, ಇವರು ಉತ್ತಮ ಕೃಷಿಕರು ಮತ್ತು ಸಹಕಾರಿಯಾಗಿ ಜನರ ಪ್ರೀತಿಗಳಿಸಿದ್ದಾರೆ ಎಂದರು.

ತುಂಬಾ ಸಂತೋಷವನ್ನು ನೀಡುತ್ತದೆ ಸಂಜೀವ ಮಠಂದೂರು
ಮಾಜಿ ಶಾಸಕ ಸಂಜೀವ ಮಠಂದೂರುರವರು ಮಾತನಾಡಿ ನಾರಾಯಣ ರೈರವರು ಕೃಷಿಕ ಮತ್ತು ಸಹಕಾರಿಯಾಗಿ ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ ಅವರ ಸರಳ ವ್ಯಕ್ತಿತ್ವ ಮನಸಿಗೆ ತುಂಬಾ ಸಂತೋಷವನ್ನು ನೀಡುತ್ತದೆ ಎಂದರು.
ನೂರಾರು ವರ್ಷ ಸುಖವಾಗಿ ಬಾಳಿ ಕಾವು ಹೇಮನಾಥ ಶೆಟ್ಟಿ
ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿರವರು ಮಾತನಾಡಿ ನಾರಾಯಣ ರೈ ಮತ್ತು ನನ್ನ ಒಡನಾಡ ೪೦ ವರ್ಷಗಳ ಹಿಂದಿನದ್ದು, ನನಗೆ ೨೦೦೨ರಲ್ಲಿ ಹೃದಯದ ಸಮಸ್ಯೆ ಬಂದಾಗ, ಬೆಂಗಳೂರಿಗೆ ಕರೆದುಕೊಂಡು ಹೋಗಿ ಉಚಿತವಾಗಿ ಹೃದಯ ಶಸ್ತ್ರ ಚಿಕಿತ್ಯೆಯನ್ನು ಮಾಡಿಸಿ, ಜೀವವನ್ನು ಉಳಿಸಿದ್ದಾರೆ. ಅವರ ಈ ಕಾರ್‍ಯವನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಹೇಳಿ, ಅವರ ದಾಂಪತ್ಯ ಜೀವನ ನೂರಾರು ವರ್ಷ ಸುಖವಾಗಿ ಇರಲಿ ಎಂದರು.
ಬದುಕು ನಮಗೆ ಆದರ್ಶವಾಗಿದೆ ಕುಂಬ್ರ ದುರ್ಗಾಪ್ರಸಾದ್ ರೈ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈಯವರು ಮಾತನಾಡಿ ೫೦ ವರ್ಷ ಆದರ್ಶ ಸತಿಪತಿಗಳಾಗಿ ದಾಂಪತ್ಯ ಜೀವನ ನಡೆಸಿದ ಬಾರಿಕೆ ನಾರಾಯಣ ರೈ- ದೇವಕಿ ರೈಯವರು ಬದುಕು ನಮಗೆ ಆದರ್ಶವಾಗಿದೆ. ನಾರಾಯಣ ರೈಯವರು ಸರಳ ವ್ಯಕ್ತಿತ್ವದ ಮೂಲಕ ಜನಮಾನಸದಲ್ಲಿ ಹೆಸರನ್ನು ಪಡೆದಿದ್ದಾರೆ. ಅವರ ವಿವಾಹ ಅಮೃತಮಹೋತ್ಸವ ನಡೆಸುವ ಭಾಗ್ಯ ಒಲಿದು ಬರಲಿ ಎಂದರು.
ನಾರಾಯಣ ರೈ ಪರ್ಪುಂಜ ಬಾರಿಕೆರವರು ಮಾತನಾಡಿ ನಿಮ್ಮ ಪ್ರೀತಿ- ಗೌರವವನ್ನು ನೋಡಿ ಹೃದಯ ತುಂಬಿ ಬಂತು ಎಂದು ಹೇಳಿ, ಕೃತಜ್ಞತೆ ಸಲ್ಲಿಸಿದರು.
ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಸಹಕಾರರತ್ನ ಸವಣೂರು ಕೆ.ಸೀತಾರಾಮ ರೈ, ಬೂಡಿಯಾರ್ ರಾಧಾಕೃಷ್ಣ ರೈ, ರಾಮಯ್ಯ ರೈ ಡೆಕ್ಕಳ, ಚನಿಲ ತಿಮ್ಮಪ್ಪ ಶೆಟ್ಟಿ, ಶಶಿಕುಮಾರ್ ರೈ ಬಾಲ್ಯೋಟ್ಟು, ರವೀಂದ್ರನಾಥ ರೈ ಬಳ್ಳಮಜಲು, ಸಾಜ ರಾಧಕೃಷ್ಣ ಆಳ್ವ, ಕೆ.ಮಂಜುನಾಥ ರೈ ಶ್ರೀನಿಧಿ ಕಲ್ಲಾರೆ, ಶಿವಪ್ರಸಾದ್ ಶೆಟ್ಟಿ ಚೆಲ್ಯಡ್ಕ, ರಘು ಶೆಟ್ಟಿ ನಡುವಳಚ್ಚಿಲ್, ರಾಜೀವ ರೈ ಕುತ್ಯಾಡಿ, ಸಂತೋಷ್ ಕುಮಾರ್ ರೈ ಇಳಂತಾಜೆ, ಶರತ್ ಕುಮಾರ್ ರೈ ಕಾವು, ಶಿವರಾಮ್ ಆಳ್ವ ಬಳ್ಳಮಜಲು, ರಮೇಶ್ ರೈ ಡಿಂಬ್ರಿ, ರಾಕೇಶ್ ರೈ ಕೆಡೆಂಜಿ, ಸದಾನಂದ ಶೆಟ್ಟಿ ಕೂರೇಲು, ಚಂದ್ರಹಾಸ್ ರೈ ಕೊಡಂಕೀರಿ, ಶೀನಪ್ಪ ರೈ ಕೊಡಂಕೀರಿ, ಜೆ.ಕೆ. ವಸಂತ್‌ಕುಮಾರ್ ರೈ ದುಗ್ಗಳ, ಸುರೇಂದ್ರ ರೈ ಬಳ್ಳಮಜಲು, ಗಣೇಶ್ ರೈ ಬೂಡಿಯಾರ್, ಜಯಪ್ರಕಾಶ್ ರೈ ಬಳ್ಳಮಜಲು, ಶ್ಯಾಮ್‌ಸುಂದರ್ ರೈ ಕೊಪ್ಪಳ, ಮಿತ್ರದಾಸ್ ರೈ ಡೆಕ್ಕಳ, ಪ್ರೇಮ್‌ರಾಜ್ ರೈ ಪರ್ಪುಂಜ, ಪ್ರಕಾಶ್ಚಂದ್ರ ರೈ ಕೈಕಾರ, ಅನಿತಾ ಹೇಮನಾಥ ಶೆಟ್ಟಿ, ಪ್ರೀತಿ ಎಸ್ ರೈ ಕಡಮಜಲು, ಸುಬ್ಬಣ್ಣ ರೈ ಖಂಡಿಗ, ಸದಾಶಿವ ಶೆಟ್ಟಿ ಪಟ್ಟೆ, ಎಸ್‌ಸಿಡಿಸಿಸಿ ಬ್ಯಾಂಕ್ ಪುತ್ತೂರು ಶಾಖಾ ಮೇನೇಜರ್ ಹರೀಶ್ ರೈ ಅಜಿಲಾಡಿ ಪಟ್ಟೆ, ಯತೀಶ್ ರೈ, ಉಷಾ ಸುದರ್ಶನ್ ಹೆಗ್ಡೆ ಸಹಿತ ನೂರಾರು ಮಂದಿ ಭಾಗವಹಿಸಿದರು. ನಾರಾಯಣ ರೈ- ದೇವಕಿ ರೈಯವರ ಮಕ್ಕಳಾದ ಅನಿಲ್ ಕುಮಾರ್ ರೈ, ರೇಖಾ ಕೆ.ಶೆಟ್ಟಿ, ಅಳಿಯ ಕೇಶವ ಶೆಟ್ಟಿ, ಸೊಸೆ ದಿವ್ಯಾ ಎ.ರೈ, ಮೊಮ್ಮಕ್ಕಳಾದ ಅದ್ವಿತ್ ರೈ, ಅನ್ವಿತ್ ರೈ, ಅಪೇಕ್ಷಾ ಶೆಟ್ಟೆ ಹಾಗೂ ನಿರೀಕ್ಷಾ ಶೆಟ್ಟಿ ಕಾರ್‍ಯಕ್ರಮ ನಿರ್ವಹಿಸಿದರು.