ಜು.17ರಿಂದ ಆ.16: ಬೊಳುವಾರು ಕ್ಷೇತ್ರದಲ್ಲಿ ಆಟಿ ತಿಂಗಳ ವಿಶೇಷ ಪೂಜೆ, ಆಮಂತ್ರಣ ಪತ್ರ ಬಿಡುಗಡೆ

0


ಪುತ್ತೂರು: ಬೊಳುವಾರು ಶ್ರೀ ದುರ್ಗಾಪರಮೇಶ್ವರೀ ಉಳ್ಳಾಳ್ತಿ ಮಲರಾಯ ಸಪರಿವಾರ ಕ್ಷೇತ್ರದಲ್ಲಿ ಆಶಾಢ ಮಾಸ ಆಟಿ ತಿಂಗಳ ಪ್ರಯುಕ್ತ ಕ್ಷೇತ್ರದಲ್ಲಿ ನಡೆಯುವ ವಿಶೇಷ ದುರ್ಗಾಪೂಜೆಯ ಆಮಂತ್ರಣ ಪತ್ರ ಬಿಡುಗಡೆ ಜು.13ರಂದು ಬೆಳಿಗ್ಗೆ ಕ್ಷೇತ್ರದಲ್ಲಿ ನಡೆಯಿತು.

ಜು.17ರಿಂದ ಆ.16ರ ವರೆಗೆ ರಾತ್ರಿ ಶ್ರೀ ದೇವರಿಗೆ ಕಲ್ಪೋಕ್ತ ಸಹಿತ ವಿಶೇಷ ದುರ್ಗಾಪೂಜೆ ಹಾಗೂ ಸರ್ವಾಲಂಕಾರ ಸಹಿತ ವಿಶೇಷ ದುರ್ಗಾಪೂಜೆ ನಡೆಯಲಿರುವುದು. ಈ ಸಂದರ್ಭದಲ್ಲಿ ಕ್ಷೇತ್ರದ ಅರ್ಚಕ ಮನಮೋಹನ್ ಭಟ್, ನಗರಸಭಾ ಸದಸ್ಯ ಸಂತೋಷ್‌ಕುಮಾರ್ ಬೊಳುವಾರು, ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪ್ರವೀಣ್ ನಾಯಕ್, ಉಪಾಧ್ಯಕ್ಷ ಗೋಪಾಲಕೃಷ್ಣ ಹೇರಳೆ, ಪ್ರ. ಕಾರ್ಯದರ್ಶಿ ಪ್ರಸನ್ನ ಬಲ್ಲಾಳ್, ಕೋಶಾಧಿಕಾರಿ ಜಲಜಾಕ್ಷಿ ಹೆಗ್ಡೆ, ಸಹ ಕೋಶಾಧಿಕಾರಿ ಪುಷ್ಪಲತಾ ಬಿ. ಪೂಜಾರಿ, ಜತೆ ಕಾರ್ಯದರ್ಶಿಗಳಾದ ಸುಂದರ ನಾಯ್ಕ, ಜಯಕಿರಣ್ ಉರ್ಲಾಂಡಿ, ವಿಶ್ವಸ್ಥ ಮಂಡಳಿ ಟ್ರಸ್ಟಿಗಳಾದ ಧನಂಜಯ ರೈ ನಾಯಿಲ, ಶೋಭಾ ಹೆಗ್ಡೆ, ವರದರಾಜ ಪ್ರಭು, ಕ್ಷೇತ್ರದ ಯಕ್ಷಕಲಾ ಪ್ರತಿಷ್ಠಾನದ ಗೋವಿಂದ ನಾಯಕ್ ಪಾಲೆಚ್ಚಾರು ಮತ್ತಿತರರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here