ಪುತ್ತೂರು ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘದ ನೂತನ ಕಛೇರಿ ಶುಭಾರಂಭ

0

ಪುತ್ತೂರು: ಕೂರ್ನಡ್ಕದ ಕೆಮ್ಮಿಂಜೆಯಲ್ಲಿರುವ ಪುತ್ತೂರು ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘದ ನವೀಕೃತಗೊಂಡ ನೂತನ ಕಛೇರಿಯ ಶುಭಾರಂಭ ಜು.14ರಂದು ನಡೆಯಿತು. ಅರ್ಚಕ ಕೆಮ್ಮಿಂಜೆ ಕೃಷ್ಣ ಭಟ್‌ರವರು ಗಣಹೋಮ ಹಾಗೂ ಲಕ್ಷ್ಮೀಪೂಜೆಯೊಂದಿಗೆ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ಸಂಘದ ಅಧ್ಯಕ್ಷ ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತುರವರು ದೀಪ ಬೆಳಗಿಸುವ ಮೂಲಕ ಕಛೇರಿ ಉದ್ಘಾಟಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕರು ಹಾಗೇ ಸಂಘದ ನಿರ್ದೇಶಕರೂ ಆಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಸಂಘದ ಬೆಳವಣಿಗೆಯ ಬಗ್ಗೆ ಶ್ಲಾಘನೀಯ ಮಾತುಗಳನ್ನಾಡಿ ಗ್ರಾಹಕರು ಸಂಘದಿಂದ ದೊರೆಯುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಉಪಾಧ್ಯಕ್ಷ ರಾಜೇಶ್, ಸಾಜ ರಾಧಾಕೃಷ್ಣ ಆಳ್ವ, ಚಂದ್ರಶೇಖರ ತಾಳ್ತಜೆ, ಎನ್.ಸುಭಾಷ್ ನಾಯಕ್, ಮೊಹಮ್ಮದ್ ಅಶ್ರಫ್ ಕಲ್ಲೇಗ, ಸುಜಾತ ರಂಜನ್ ರೈ, ನೇತ್ರಾವತಿ ಪಿ.ಗೌಡ, ಬಿ.ಜಯರಾಮ ರೈ ಬಾಲಾಯ, ಪ್ರದೀಪ್ ರೈ ಎಂ, ಪೊಡಿಯ, ಡಿಸಿಸಿ ಬ್ಯಾಂಕ್ ನಾಮ ನಿರ್ದೇಶಿತ ಸದಸ್ಯ ಎಸ್.ಬಿ.ಜಯರಾಮ ರೈ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಮ್ಯಾನೇಜರ್ ಬೆಳಿಯಪ್ಪ ಗೌಡ ಮತ್ತು ಸಿಬ್ಬಂದಿ ವರ್ಗದವರು ಸ್ವಾಗತಿಸಿ, ವಂದಿಸಿದರು.


ʼಸಂಪೂರ್ಣ ನವೀಕೃತಗೊಂಡು ಕಛೇರಿ ಶುಭಾರಂಭಗೊಂಡಿದೆ. ಗ್ರಾಹಕರ ಅನುಕೂಲಕ್ಕಾಗಿ ಸಹಕಾರಿ ಸಂಘದಲ್ಲಿ ಎಫ್‌ಡಿ ಸೌಲಭ್ಯ ಸೇರಿದಂತೆ ಹಳೆ ಮನೆ ದುರಸ್ತಿಗೆ ಸಾಲ, ವಾಹನ ಖರೀದಿ ಸಾಲ, ಚಿನ್ನಾಭರಣ ಅಡವಿನ ಸಾಲ ಹಾಗೇ ಗೃಹೋಪಯೋಗಿ ವಸ್ತುಗಳ ಖರೀದಿಗೆ ಸಾಲ ಸೌಲಭ್ಯ ಸೇರಿದಂತೆ ಹಲವು ಬಗೆಯ ಸೇವೆಗಳನ್ನು ನೀಡಲಾಗುತ್ತಿದೆ. ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕೋರಿಕೆ.’
ಕೃಷ್ಣ ಕುಮಾರ್ ರೈ ಕೆದಂಬಾಡಿಗುತ್ತು,
ಅಧ್ಯಕ್ಷರು ಪುತ್ತೂರು ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ

LEAVE A REPLY

Please enter your comment!
Please enter your name here