ಪುತ್ತೂರು: ರೋಟರಾಕ್ಟ್ ಜಿಲ್ಲೆ 3181 ಇದರ 2025-26ನೇ ಸಾಲಿನ ಜಿಲ್ಲಾ ಸಂಪಾದಕರಾಗಿ ಪುತ್ತೂರು ರೋಟರಾಕ್ಟ್ ಕ್ಲಬ್ ನ ಬುಲೆಟಿನ್ ಸಂಪಾದಕ ಬಿ. ವಿಖ್ಯಾತ್ ಆಯ್ಕೆಯಾಗಿದ್ದಾರೆ.
ಮೈಸೂರಿನಲ್ಲಿ ನಡೆದ 10ನೇ ಜಿಲ್ಲಾ ಅಸೆಂಬ್ಲಿ ಮತ್ತು ಸ್ಥಾಪನಾ ಸಮಾರಂಭದಲ್ಲಿ ಜಿಲ್ಲಾ ಪ್ರತಿನಿಧಿ ರೋ. ಪ್ರಜ್ವಲ್ ಆರ್ ಅವರು ಪದ ಪ್ರಧಾನ ನೆರವೇರಿಸಿದರು.
ವಿಖ್ಯಾತ್ ಅವರು ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜು ಪುತ್ತೂರು ಇಲ್ಲಿನ ಹಿರಿಯ ವಿದ್ಯಾರ್ಥಿ. ಇವರು ಕುರಿಯ ಬಳ್ಳಮಜಲು ನಿವಾಸಿ ತಿಮ್ಮಪ್ಪ ನಾಯ್ಕ ಮತ್ತು ಶಶಿಕಲಾ ದಂಪತಿ ಪುತ್ರ.