ಹಿರೇಬಂಡಾಡಿ: ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಶಿವನಗರ ಹಾಗೂ ಮಂಜುಶ್ರೀ ಸೇವಾ ಟ್ರಸ್ಟ್ ಮಂಜುಶ್ರೀ ಭಜನಾ ಮಂದಿರ ಶಿವನಗರ ಹಿರೇಬಂಡಾಡಿ ಇದರ ಆಶ್ರಯದಲ್ಲಿ ನಡೆಯುವ 8ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಮಂಜುಶ್ರೀ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.
ಸಮಿತಿ ಅಧ್ಯಕ್ಷೆ ಸೌಮ್ಯ ಹೆನ್ನಾಳ, ಕಾರ್ಯದರ್ಶಿ ಮಮತಾ ಕಜೆ, ಸದಸ್ಯರುಗಳು, ಮಂಜುಶ್ರೀ ಭಜನಾ ಮಂದಿರದ ಅಧ್ಯಕ್ಷ ಚಂದ್ರಶೇಖರ ನಾಯ್ಕ್ ಮುರದಮೇಲು, ಕಾರ್ಯದರ್ಶಿ ಅರ್ಪಿತಾ ಕುಬಲ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಮಾಧವ ಹೆನ್ನಾಳ, ಮಂಜುಶ್ರೀ ಸೇವಾ ಟ್ರಸ್ಟ್ ಅಧ್ಯಕ್ಷ ಅಶೋಕ ಪಡ್ಪು, ಲಕ್ಷ್ಮೀಶ ನಿಡ್ಡೆಂಕಿ, ಚಂದ್ರಶೇಖರ ಹೆನ್ನಾಳ ಉಪಸ್ಥಿತರಿದ್ದರು.