




ಪುತ್ತೂರು: ಬೊಳುವಾರಿನಲ್ಲಿರುವ ಜೆಕೆ ಕಾಂಪ್ಲೆಕ್ಸ್ನಲ್ಲಿ ಡಿ.7 ರಂದು ಎಸ್ಕೆ ಮೊಬೈಲ್ಸ್ ಸೇಲ್ಸ್ ಆಂಡ್ ಸರ್ವಿಸ್ ಶುಭಾರಂಭಗೊಂಡಿತು. ಕಟ್ಟಡ ಮಾಲಕ ಜಯಕುಮಾರ್ ಆರ್ ನಾಯರ್ ಅವರು ಈ ನೂತನ ಮೊಬೈಲ್ ಶಾಪ್ ಉದ್ಘಾಟಿಸಿದ್ದು, ಪುತ್ತೂರು ಮೊಬೈಲ್ ರಿಟೈಲರ್ ಅಸೋಸಿಯೇಷನ್ ಅಧ್ಯಕ್ಷ ಚೇತನ್ ಕುಮಾರ್ ದೀಪ ಬೆಳಗಿಸಿದರು.




ಈ ವೇಳೆ ಅಸೋಸಿಯೇಷನ್ನ ಕಾರ್ಯದರ್ಶಿ ಅಫೀಜ್, ಗೌರವ ಅಧ್ಯಕ್ಷ ಸಿರಾಜ್, ಉಸ್ತುವಾರಿ ಖಾದರ್, ಸಾಂಸಂಗ್ ಡಿಸ್ಟ್ರಿಬ್ಯೂಟರ್ ನರಸಿಂಹ ಶೆಣೈ, ಸ್ನೇಹ ಸಿಲ್ಕ್ಸ್ ಮಾಲಕ ಸತೀಶ್ ಎಸ್., ಓಂಕಾರ್ ಸ್ವೇಟ್ಸ್ ಮಾಲಕ ಚಂದ್ರಹಾಸ, ಮಹಾವೀರ ಆಸ್ಪತ್ರೆಯ ಮಾಲಕ ಡಾ.ಅಶೋಕ್ ಪಡೀವಾಲ್, ಲಕ್ಷ್ಮಿ ಮೊಬೈಲ್ ಮಾಲಕ ಭರತ್ ಅವರು ಅತಿಥಿಗಳಾಗಿ ಆಗಮಿಸಿ ಶುಭಹಾರೈಸಿದರು. ಮಾಲಕ ಸಂಪತ್ ಕುಮಾರ್ ಮಾತನಾಡಿ ಗ್ರಾಹಕರ ಸಹಕಾರ ಕೋರಿದರು.






ಸ್ನೇಹ ಬಳಗ ಹಾಗೂ ಸಿಬ್ಬಂದಿ ವರ್ಗದವರಾದ ಸಂದೀಪ್ ಜೈನ್, ಸಾಗರ್ ಜೈನ್, ಗೌತಮ್ ಜೈನ್, ವಿನೋದ್, ಸಾನಿಕ ಉಪಸ್ಥಿತರಿದ್ದರು. ಮಾಲಕ ಸಂಪತ್ ಕುಮಾರ್ ಪತ್ನಿ ಶೃತಿ, ಪುತ್ರ ಸಮ್ಮೇದ್, ಪುತ್ರಿ ಸಂಪ್ರೀತಿ ಸಹಕರಿಸಿದರು.
ಖರೀದಿ ಮೇಲೆ ಸ್ಪೆಷಲ್ ಗಿಫ್ಟ್
ಶುಭಾರಂಭ ಹಾಗೂ ಹೊಸ ವರ್ಷದ ಪ್ರಯುಕ್ತ ಎಸ್ಕೆ ಮೊಬೈಲ್ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ಘೋಷಿಸಿದೆ. ಒಂದು ಸ್ಮಾರ್ಟ್ ಫೋನ್ ಖರೀದಿಸಿದರೆ ವಿಶೇಷ ಗಿಫ್ಟ್ ನೀಡಲಾಗುತ್ತಿದೆ. ಅಲ್ಲದೆ, ಗ್ರಾಹಕರ ಬಜೆಟ್ಗೆ ತಕ್ಕಂತೆ ಸುಲಭ ಕಂತುಗಳಲ್ಲಿ ಸ್ಮಾರ್ಟ್ಫೋನ್ಗಳನ್ನು ಖರೀದಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9980470227, 7411440227 ಸಂಪರ್ಕಿಸುವಂತೆ ಸಂಪತ್ ಕುಮಾರ್ ಹೇಳಿದರು.









