ಚಿತ್ರ: ಕಪಿಲಾ ಡಿಜಿಟಲ್ ಸವಣೂರು
ಪುತ್ತೂರು: ಸರ್ವೆಯ ಭಕ್ತಕೋಡಿ ಆರಾಧ್ಯ ಕಾಂಪ್ಲೆಕ್ಸ್‌ನಲ್ಲಿ ವರಾಹ ಮೆಡಿಕಲ್, ಸ್ಪೆಷಾಲಿಟಿ ಕ್ಲಿನಿಕ್ ಜು.14ರಂದು ಶುಭಾರಂಭಗೊಂಡಿದೆ.

ನೂತನ ಸಂಸ್ಥೆಯನ್ನು ಡಾ.ಸ್ವಾತಿ ಆರ್.ಭಟ್ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಭಕ್ತಕೋಡಿಯಲ್ಲಿ ನೂತನ ಆರಂಭಗೊಂಡಿರುವ ಮೆಡಿಕಲ್, ಸ್ಪೆಷಾಲಿಟಿ ಕ್ಲಿನಿಕ್‌ನಿಂದ ಸಾರ್ವಜನಿಕರ ಆರೋಗ್ಯವೃದ್ದಿಯಾಗಲಿ.ನೂತನ ಸಂಸ್ಥೆಗೆ ಎಲ್ಲರೂ ಬೆಂಬಲವಾಗಿ ನಿಲ್ಲಬೇಕು ಎಂದರು.

ಆರಾಧ್ಯ ಕಾಂಪ್ಲೆಕ್ಸ್ ಮಾಲಕ ಜಿ.ಕೆ.ಪ್ರಸನ್ನ ಮಾತನಾಡಿ, ಗ್ರಾಮೀಣ ಭಾಗವೂ ನಗರಕ್ಕೆ ಕಡಿಮೆಯಿಲ್ಲದಂತೆ ಅಭಿವೃದ್ದಿಯಾಗಬೇಕು ಹಾಗೂ ಎಲ್ಲಾ ಸೇವೆಗಳು ದೊರಕಬೇಕೆಂಬ ನಿಟ್ಟಿನಲ್ಲಿ ಭಕ್ತಕೋಡಿಯಲ್ಲಿ ವಾಣಿಜ್ಯ ಸಂಕೀರ್ಣ ಮಾಡಲಾಗಿದೆ. ನೂತನವಾಗಿ ಆರಂಭಗೊಂಡ ವರಾಹ ಮೆಡಿಕಲ್, ಸ್ಪೆಷಾಲಿಟಿ ಕ್ಲಿನಿಕ್‌ಗೆ ಎಲ್ಲರೂ ಪ್ರೋತ್ಸಾಹಿಸಬೇಕು ಎಂದರು.
ಖ್ಯಾತ ಚಿತ್ರಕಲಾವಿದ ಹಾಗೂ ಸಾಮಾಜಿಕ ಮುಂದಾಳು ನಾಗರಾಜ ನಿಡ್ವಣ್ಣಾಯ ಮಾತನಾಡಿ, ವರಾಹ ಮೆಡಿಕಲ್, ಸ್ಪೆಷಾಲಿಟಿ ಕ್ಲಿನಿಕ್ ಈಗಾಗಲೇ ಸವಣೂರಿನಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ.ಇದೀಗ ಸರ್ವೆ ಗ್ರಾಮದ ಭಕ್ತಕೋಡಿಯಲ್ಲಿಯೂ ಶುಭಾರಂಭಗೊಂಡಿದೆ.ಸವಣೂರು ನಂತರ ಸರ್ವೆಯ ಹೆದ್ದಾರಿಯ ಪಕ್ಕದಲ್ಲೇ ಮೆಡಿಕಲ್, ಸ್ಪೆಷಾಲಿಟಿ ಕ್ಲಿನಿಕ್ ಆರಂಭಗೊಂಡಿರುವುದು ಒಳ್ಳೆಯ ವಿಚಾರ.ನೂತನ ಸಂಸ್ಥೆಯು ಉನ್ನತಿಯನ್ನು ಹೊಂದಲಿ ಎಂದು ಶುಭಹಾರೈಸಿದರು.
ಪಾಲುದಾರರಾದ ಪ್ರಕಾಶ್ ರಾಜ್ ನೂಜಾಜೆ, ರಾಜೇಶ್ ಕೆದ್ಕಾರ್ ಅವರು ಅತಿಥಿಗಳನ್ನು ಸ್ವಾಗತಿಸಿ,ಸತ್ಕರಿಸಿದರು.
ಈ ಸಂದರ್ಭದಲ್ಲಿ ರಾಜಮ್ಮ ನೂಜಾಜೆ ,ಲೋಕಯ್ಯ ಗೌಡ ದಂಪತಿಗಳು ಹಾಗೂ ಪ್ರಕಾಶ್ ರಾಜ್ ಅವರ ಮನಯವರು, ರಾಜೇಶ್ ಕೆದ್ಕಾರ್ ಅವರ ಮನೆಯವರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಶುಭಹಾರೈಸಿದರು. ಗೋಪಾಲಕೃಷ್ಣ ವೀರಮಂಗಲ ಅವರು ಕಾರ್ಯಕ್ರಮ ನಿರೂಪಿಸಿ,ವಂದಿಸಿದರು.
ಡಾ.ಸ್ವಾತಿ ಆರ್.ಭಟ್ ಮತ್ತು ಡಾ.ಸುಜಯ್ ತಂತ್ರಿ ಲಭ್ಯ
ಡಾ.ಸ್ವಾತಿ ಆರ್.ಭಟ್ ( ಜನರಲ್ ಮೆಡಿಸಿನ್ ಮತ್ತು ಮಕ್ಕಳ ತಜ್ಞರು ) ಅವರು ಸಂಜೆ 3 ರಿಂದ 4.30ರವರೆಗೆ ಮತ್ತು ಡಾ.ಸುಜಯ್ ತಂತ್ರಿ ಅವರು ಪ್ರತೀ ದಿನ ಸಂಜೆ 5ರಿಂದ 7 ರವರೆಗೆ ಕ್ಲಿನಿಕ್‌ನಲ್ಲಿ ಲಭ್ಯವಿರಲಿದ್ದಾರೆ.
ಆಯುರ್ವೆದಿಕ್, ಅಲೋಪತಿ, ವೆಟರರ್ನರಿ ಔಷಧಿಗಳು ಲಭ್ಯ
ಇಲ್ಲಿ ಎಲ್ಲಾ ತರದ ಆಯುರ್ವೆದಿಕ್, ಅಲೋಪತಿ, ವೆಟರರ್ನರಿ ಇತ್ಯಾದಿ ಎಲ್ಲಾ ಔಷಧಿಗಳು ಲಭ್ಯವಿರಲಿದೆ.ಗ್ರಾಹಕರು ಸಹಕರಿಸುವಂತೆ ಸಂಸ್ಥೆಯ ಪಾಲುದಾರರಾದ ಪ್ರಕಾಶ್ ರಾಜ್ ನೂಜಾಜೆ, ರಾಜೇಶ್ ಕೆದ್ಕಾರ್ ಅವರು ತಿಳಿಸಿದ್ದಾರೆ.