ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ತೆಕ್ಕಾರಿನಲ್ಲಿ ಜು.17ರ ಬೆಳಗ್ಗೆ ಮಹಿಳೆಯೋರ್ವರ ಕೊಲೆ ನಡೆದಿದೆ.
ಝೀನತ್ (41) ಮೃತ ಮಹಿಳೆ ಎನ್ನಲಾಗಿದ್ದು, ಇವರ ಪತಿ ರಫೀಕ್ ಅವರ ತಲೆಗೂ ಗಾಯವಾಗಿದೆ. ಪತಿ – ಪತ್ನಿಯರೊಂದಿಗೆ ಜಗಳ ನಡೆದು ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರ ತನಿಖೆಯ ಬಳಿಕವಷ್ಟೇ ಹೆಚ್ಚಿನ ಮಾಹಿತಿ ದೊರೆಯಲಿದೆ.