ಪುತ್ತೂರು: ಕಾಂಗ್ರೆಸ್ ಪಕ್ಷದ ಕಾರ್ಮಿಕ ಸಂಘಟನೆಯಾದ ಇಂಟೆಕ್ ಇದರ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ಪ್ರಭಾವತಿ.ಆರ್.ಶೆಟ್ಟಿ ಇವರನ್ನು ಶಾಸಕ ಯುಟಿ ಖಾದರ್ ರವರ ಶಿಫಾರಸು ಮೇರೆಗೆ ಇಂಟೆಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿಯವರು ನೇಮಕ ಮಾಡಿದ್ದಾರೆ.
ಪ್ರಭಾವತಿ ರಾಷ್ಟೀಯ ಮಟ್ಟದಲ್ಲಿ ಹೆಸರು ಮಾಡಿರುವ ಖ್ಯಾತ ಕ್ರೀಡಾಪಟು, ಸಮಾಜ ಸೇವಕಿಯೂ ಆಗಿದ್ದಾರೆ. ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಪ್ರಭಾವತಿ ಶೆಟ್ಟಿಯವರಿಗೆ ನೂತನ ಹುದ್ದೆಯ ನೇಮಕಾತಿ ಪತ್ರವನ್ನು ನೀಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಇಂಟಕ್ ಸಂಘಟನೆಗೆ ಕಾನೂನು ಸಲಹೆಗಾರ ಹಾಗೂ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ದಿನಕರ್ ಶೆಟ್ಟಿ, ಇಂಟಕ್ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ ಯುವ ಉದ್ಯಮಿ, ಯುವ ನಾಯಕ, ಸಮಾಜ ಸೇವಕ ನವನೀತ್ ಉಳ್ಳಾಲ್ ಹಾಗೂ ರಾಮಕೃಷ್ಣ ಶೆಟ್ಟಿ ಈ ವೇಳೆ ಉಪಸ್ಥಿತರಿದ್ದರು.