ಪುತ್ತೂರು: ರೋಟರಿ ಸಂಸ್ಥೆಯು ಒಂದು ಸೇವಾ ಪರಂಪರೆಯನ್ನು ಒಳಗೊಂಡ ಸಂಸ್ಥೆ. ಮನುಷ್ಯ ಜೀವಿಸುವುದು ಸೇವೆ ಎಂಬ ಕರ್ತವ್ಯಗೋಸ್ಕರವಾಗಿದೆ. ಸಮಾಜದಲ್ಲಿನ ಫಲಾನುಭವಿಗಳನ್ನು ಗುರುತಿಸಿ, ಅವರ ಸೇವೆಯಲ್ಲಿ ತೊಡಗಿಸಿಕೊಂಡಾಗ ನಮಗೆ ಸಿಗುವ ಆತ್ಮತೃಪ್ತಿ ಮತ್ತೊಂದಿಲ್ಲ ಎಂದು ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ.ರವರು ಹೇಳಿದರು.
ಜು.17 ರಂದು ರೋಟರಿ ಮನೀಷಾ ಸಭಾಂಗಣದಲ್ಲಿ ಸಂಜೆ ಜರಗಿದ ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181, ವಲಯ ಐದರ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ 2025-26ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪದ ಪ್ರದಾನ ನೆರವೇರಿಸಿ ಅವರು ಮಾತನಾಡಿದರು.

ಧರಿಸುವ ಸ್ವಚ್ಛ ಉಡುಪು, ನಮ್ಮ ನಡೆ, ನುಡಿಯುವ ಮಾತುಗಳಿಂದ ಗೌರವ-ಎಂ.ಬಿ ವಿಶ್ವನಾಥ ರೈ:
ಮುಖ್ಯ ಅತಿಥಿ, ರೋಟರಿ ಕ್ಲಬ್ ಪುತ್ತೂರು ಪೂರ್ವಾಧ್ಯಕ್ಷ ಎಂ.ಬಿ ವಿಶ್ವನಾಥ ರೈ ಮಾತನಾಡಿ, ಹಣ, ಅಂತಸ್ತು, ಐಶ್ವರ್ಯ ನಮಗೆ ಹೆಸರು ತಂದು ಕೊಡುವುದಿಲ್ಲ ಬದಲಾಗಿ ನಾವು ಧರಿಸುವ ಸ್ವಚ್ಛ ಉಡುಪು, ನಮ್ಮ ನಡೆ ಹಾಗೂ ನಾವು ನುಡಿಯುವ ಮಾತುಗಳಿಂದ ನಮಗೆ ಹೆಸರನ್ನು ತಂದು ಕೊಡುತ್ತದೆ ಮಾತ್ರವಲ್ಲ ಸಮಾಜ ನಮ್ಮನ್ನು ಗೌರವದ ಭಾವನೆಯಿಂದ ನೋಡುತ್ತದೆ. ಸಮಾಜದಲ್ಲಿ ನಾವು ಯಾವಾಗ ಹಂಚಿಕೊಂಡು ತಿನ್ನುತ್ತೇವೆಯೋ ಆವಾಗ ಸಮಾಜ ಪರಿವರ್ತನೆ ಹೊಂದುತ್ತದೆ, ಅವನ್ನು ನಾವು ರೋಟರಿ ಮುಖೇನ ಮಾಡೋಣ ಎಂದರು.
ಸೇವಾ ಕೈಂಕರ್ಯ ಸಮಾಜದಲ್ಲಿ ಉಪಯುಕ್ತವೆನಿಸಲಿ-ಪ್ರಮೀಳಾ ರಾವ್:
ರೋಟರಿ ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ರಾವ್ ರವರು ಮಹೇಶ್ ಕೆ.ಸವಣೂರು ಸಂಪಾದಕತ್ವದ ಕ್ಲಬ್ ಬುಲೆಟಿನ್ ಅನಾವರಣಗೊಳಿಸಿ ಮಾತನಾಡಿ, ನಾವು ಮಾಡುವ ಸೇವಾ ಕೈಂಕರ್ಯ ಅದು ಸಣ್ಣದಿರಲಿ, ದೊಡ್ಡದಿರಲಿ, ಅದು ಸಮಾಜಕ್ಕೆ ಉಪಯೋಗವಾಗಬೇಕು ಹಾಗೂ ತೃಪ್ತಿ ಎನಿಸಬೇಕು. ವಿಶ್ವದಿಂದ ಪೋಲಿಯೊ ನಿರ್ಮೂಲನೆಗೊಳಿಸಬೇಕಾದರೆ ರೋಟರಿಯಲ್ಲಿ ಸೇವಾ ಮನೋಭಾವವಿರುವ ಸದಸ್ಯರನ್ನು ಸೇರ್ಪಡೆಗೊಳಿಸಿ ಎಂದರು.
ಸಂತೃಪ್ತ ಮನೋಭಾವದೊಂದಿಗೆ ನಿರ್ಗಮಿಸುತ್ತಿದ್ದೇನೆ-ಸುರೇಶ್ ಪಿ:
ರೋಟರಿ ವಲಯ ಸೇನಾನಿ ಹಾಗೂ ಕ್ಲಬ್ ದಶಮಾನೋತ್ಸವ ವರ್ಷದ ನಿಕಟಪೂರ್ವ ಅಧ್ಯಕ್ಷ ಸುರೇಶ್ ಪಿ. ಮಾತನಾಡಿ, ಕಳೆದ ದಶಮಾನೋತ್ಸವ ವರ್ಷದಲ್ಲಿ ಸುಮಾರು 145ಕ್ಕೂ ಮಿಕ್ಕಿದ ಸಮಾಜಮುಖಿ ಕಾರ್ಯಗಳಿಗೆ ನನಗೆ ಬೆನ್ನೆಲುಬಾಗಿ ನಿಂತು ಸರ್ವ ರೀತಿಯಲ್ಲಿ ಪ್ರೋತ್ಸಾಹಿಸಿ ವರ್ಷವನ್ನು ಯಶಸ್ವಿಯಾಗಿ ದಾಟಿಸಿದ್ದೇನೆ ಎಂಬ ಹೆಮ್ಮೆ ಇದೆ. ನಮ್ಮ ದುಡಿಮೆಯ ಒಂದು ಭಾಗವನ್ನು ಸಮಾಜದಲ್ಲಿನ ಫಲಾನುಭವಿಗಳಿಗೆ ಅರ್ಪಿಸಿದ ಸಂತೃಪ್ತ ಮನೋಭಾವದೊಂದಿಗೆ ನಿರ್ಗಮಿಸುತ್ತಿದ್ದೇನೆ ಎಂದರು.
ಸ್ವರ್ಣದ ಕಿರೀಟಕ್ಕೆ ವಜ್ರದ ಲೇಪನ-ಚಿದಾನಂದ ಬೈಲಾಡಿ:
ಕ್ಲಬ್ ಜಿ.ಎಸ್.ಆರ್ ಚಿದಾನಂದ ಬೈಲಾಡಿ ಮಾತನಾಡಿ, ಹತ್ತು ಸಂವತ್ಸರಗಳ ದಶಾವತಾರ ಕಳೆದು ಇದೀಗ ಕ್ಲಬ್ ಹನ್ನೊಂದನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಹತ್ತು ವರ್ಷದಲ್ಲಿ ಒಬ್ಬರಿಗಿಂತ ಒಬ್ಬರು ಮಿಗಿಲಾಗಿ ಕ್ಲಬ್ನ್ನು ಮುನ್ನೆಡೆಸಿದ್ದು ಸ್ವರ್ಣದ ಕಿರೀಟಕ್ಕೆ ವಜ್ರದ ಲೇಪನ ತೊಡಿಸಿದ್ದಾರೆ ಎಂದರು.
ಹೊಸ ಸದಸ್ಯೆ ಸೇರ್ಪಡೆ:
ಕ್ಲಬ್ ಸರ್ವಿಸ್ ನಡಿಯಲ್ಲಿ ಕ್ಲಬ್ ಕೋಶಾಧಿಕಾರಿ ವಿಜಯ್ ಡಿ’ಸೋಜರವರ ಪತ್ನಿ ಪ್ರಸ್ತುತ ಸಂತ ಫಿಲೋಮಿನಾ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಸುಶ್ಮಾಕ್ರಾಸ್ತಾರವರನ್ನು ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ರಾವ್ ರವರು ರೋಟರಿ ಪಿನ್ ತೊಡಿಸಿ ಕ್ಲಬ್ ಗೆ ಅಧಿಕೃತವಾಗಿ ಸೇರ್ಪಡೆಗೊಳಿಸಿದರು.
ಜಿಲ್ಲಾ ಸಮಿತಿ ಪದಾಧಿಕಾರಿಗಳಿಗೆ ಅಭಿನಂದನೆ:
ಕ್ಲಬ್ ಸದಸ್ಯರಾಗಿದ್ದು ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181 ರಲ್ಲಿ ಕಾರ್ಯ ನಿರ್ವಹಿಸುವ ಸುಂದರ್ ರೈ ಬಲ್ಕಾಡಿ, ಸೆನೋರಿಟಾ ಆನಂದ್, ಸುರೇಶ್ ಪಿ.ರವರುಗಳನ್ನು ಅಭಿನಂದಿಸಲಾಯಿತು.
ನಿರ್ಗಮಿತ ಪದಾಧಿಕಾರಿಗಳಿಗೆ ಸನ್ಮಾನ:
ಕ್ಲಬ್ ಅನ್ನು ಯಶಸ್ವಿಯಾಗಿ ಮುನ್ನಡೆಸಿ ರೋಟರಿ ಜಿಲ್ಲೆಯಿಂದ ಡೈಮಂಡ್ ಫ್ಲಸ್ ಪ್ರಶಸ್ತಿಗೆ ಭಾಜನರಾಗಲು ಶ್ರಮಿಸಿದ ನಿರ್ಗಮಿತ ಅಧ್ಯಕ್ಷ ಸುರೇಶ್ ಪಿ, ಕಾರ್ಯದರ್ಶಿ ಸೆನೋರಿಟಾ ಆನಂದ್ ಹಾಗೂ ರೋಟರಿ ವಲಯ ಸೇನಾನಿಯಾಗಿ ಕಾರ್ಯ ನಿರ್ವಹಿಸಿದ ಕ್ಲಬ್ ಪೂರ್ವಾಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆರವರುಗಳನ್ನು ಸನ್ಮಾನಿಸಲಾಯಿತು.
ಕೊಡುಗೆ/ಅಭಿನಂದನೆ:
ಕಮ್ಯೂನಿಟಿ ಸರ್ವಿಸ್ ನಡಿಯಲ್ಲಿ ವಾಟರ್ ಫ್ಯೂರಿಪೈಯರ್(ನೀರು ಶುದ್ಧೀಕರಣ ಘಟಕ) ಅನ್ನು ಶ್ರೀಮತಿ ಮಾಲತಿ ರಮಾನಾಥ್ ರವರಿಗೆ ಕೊಡುಗೆಯಾಗಿ ನೀಡಲಾಯಿತು. ಯೂತ್ ಸರ್ವಿಸ್ ನಡಿಯಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿದ ಅಂಬಿಕಾ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕು.ಅಪೂರ್ವ, ಕೃಷಿಯಲ್ಲಿ ಸಾಧನೆ ಮಾಡಿದ ಹರೀಶ್ ಆರ್ಯಾಪುರವರನ್ನು ಅಭಿನಂದಿಸಲಾಯಿತು.
ನೂತನ ಅಧ್ಯಕ್ಷ ಸುಭಾಷ್ ರೈರವರ ಪತ್ನಿ ಮಲ್ಲಿಕಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಾರ್ಜಂಟ್ ಎಟ್ ಆರ್ಮ್ಸ್ ರಾಮಣ್ಣ ರೈ ಕೈಕಾರ ಪ್ರಾರ್ಥಿಸಿದರು. ನಿಕಟಪೂರ್ವ ಅಧ್ಯಕ್ಷ ಸುರೇಶ್ ಪಿ ಸ್ವಾಗತಿಸಿ, ನೂತನ ಕಾರ್ಯದರ್ಶಿ ಪ್ರವೀಣ್ ರೈ ಸಾಂತ್ಯ ವಂದಿಸಿದರು. ನಿರ್ಗಮಿತ ಕಾರ್ಯದರ್ಶಿ ಸೆನೋರಿಟಾ ಆನಂದ್ ಕ್ಲಬ್ ವರದಿ ಮಂಡಿಸಿದರು. ಮಹಾಬಲ ಗೌಡ, ದೀಪಕ್ ಬೊಳ್ವಾರು, ಸಂಧ್ಯಾರಾಣಿ ಬೈಲಾಡಿ, ಗೋಪಾಲಕೃಷ್ಣ ಆಚಾರ್ಯರವರು ಅತಿಥಿಗಳ ಪರಿಚಯ ಮಾಡಿದರು. ಕೋಶಾಧಿಕಾರಿ ವಿಜಯ್ ಡಿ’ಸೋಜ, ನಾರಾಯಣ ರೈರವರು ಸನ್ಮಾನಿತರ ಸನ್ಮಾನ ಪತ್ರವನ್ನು ವಾಚಿಸಿದರು. ಬುಲೆಟಿನ್ ಎಡಿಟರ್ ಮಹೇಶ್ ಕೆ.ಸವಣೂರು, ಆಶಾ ಮರಿಯ ರೆಬೆಲ್ಲೋ ಹಾಗೂ ಸುಶ್ಮಾ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು. ಕ್ಲಬ್ ಸರ್ವಿಸ್ ನಿರ್ದೇಶಕ ದಿನೇಶ್ ಆಚಾರ್ಯ, ವೊಕೇಶನಲ್ ಸರ್ವಿಸ್ ನಿರ್ದೇಶಕ ಸುಂದರ್ ರೈ ಬಲ್ಕಾಡಿ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ವೆಂಕಟ್ರಮಣ ಗೌಡ ಕಳುವಾಜೆ, ಯೂತ್ ಸರ್ವಿಸ್ ನಿರ್ದೇಶಕ ಮೀನಾಕ್ಷಿ, ಇಂಟರ್ನ್ಯಾಷನಲ್ ಸರ್ವಿಸ್ ನಿರ್ದೇಶಕ ಕೆ.ಭಾಸ್ಕರ್ ಕೋಡಿಂಬಾಳ, ಸಾರ್ಜಂಟ್ ಎಟ್ ಆಮ್ಸ್೯ ರಾಮಣ್ಣ ರೈ ಕೈಕಾರರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಸನ್ಮಾನ..
ಮಂಗಳೂರಿನ ಕಸ್ತೂರ್ಬಾ ಮೆಡಿಕಲ್ ಕಾಲೇಜಿನಲ್ಲಿ ಚರ್ಮರೋಗ ವಿಭಾಗದಲ್ಲಿ ಎಂಬಿಬಿಎಸ್, ಎಂಡಿ ಪದವಿಯನ್ನು ಪಡೆದ ಅಮರನಾಥ್ ರೈ ಹಾಗೂ ಪದ್ಮಲತಾ ದಂಪತಿ ಪುತ್ರ, ಚರ್ಮರೋಗ ತಜ್ಞರಾದ ಡಾ.ನಿಹಾಲ್ ರೈ ಬೆಳ್ಳಿಪ್ಪಾಡಿ ಹಾಗೂ ಇತ್ತೀಚೆಗೆ ಪೊಲೀಸ್ ಇಲಾಖೆಯಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ ನಿವೃತ್ತ ಪೊಲೀಸ್ ಸಹಾಯಕ ಉಪ ನಿರೀಕ್ಷಕ ಶ್ರೀಧರ್ ರೈರವರುಗಳನ್ನು ಈ ಸಂದರ್ಭದಲ್ಲಿ ವೊಕೇಶನಲ್ ಸರ್ವಿಸ್ ನಡಿಯಲ್ಲಿ ಸನ್ಮಾನಿಸಲಾಯಿತು.
ಗೌರವದಿಂದ ಹುದ್ದೆಯನ್ನು ಸ್ವೀಕರಿಸುತ್ತೇನೆ..
ಪ್ರತಿಷ್ಠಿತ ರೋಟರಿ ಸಂಸ್ಥೆಯಲ್ಲಿ ಅಧ್ಯನಾಗುವುದು ಹೆಮ್ಮೆಯ ಹಾಗೂ ಗೌರವದ ವಿಷಯವಾಗಿದ್ದು ಅಧ್ಯಕ್ಷ ಹುದ್ದೆಯನ್ನು ಗೌರವದಿಂದ ಸ್ವೀಕರಿಸುತ್ತಿದ್ದೇನೆ. ಕಳೆದ ವರ್ಷ ಸುರೇಶ್ ಪಿ.ರವರ ಅಧ್ಯಕ್ಷತೆಯಲ್ಲಿ ಕ್ಲಬ್ಗೆ ಡೈಮಂಡ್ ಫ್ಲಸ್ ಪ್ರಶಸ್ತಿ ಧಕ್ಕಿರುವುದು ಖುಶಿಯ ವಿಷಯ. ಪ್ರಸ್ತುತ ವರ್ಷದಲ್ಲೂ ಕ್ಲಬ್ ಸದಸ್ಯರ ಜೊತೆಗೆ ಪುತ್ತೂರಿನ ಎಂಟು ಕ್ಲಬ್ಗಳ ಸಹಕಾರದಿಂದ ಸಮಾಜಮುಖಿ ಚಟುವಟಿಕೆಗಳನ್ನು ಹಮ್ಮಿಕೊಂಡು ರೋಟರಿ ಸಂಸ್ಥೆಯನ್ನು ಬೆಳಗಿಸೋಣ.
-ಸುಭಾಷ್ ರೈ ಬೆಳ್ಳಿಪ್ಪಾಡಿ, ನೂತನ ಅಧ್ಯಕ್ಷರು, ರೋಟರಿ ಪುತ್ತೂರು ಸ್ವರ್ಣ