


ವಿಟ್ಲ: ಮಂಗಳೂರಿನ ಪ್ರತಿಷ್ಠಿತ ವೆಸ್ಟ್ಕೋಸ್ಟ್ ಮೋಟಾರ್ಸ್ ಸಂಸ್ಥೆಯ ನೂತನ ವೀಡಾ ಎಲೆಕ್ಟ್ರಿಕ್ ಇವೂಟರ್ ವಾಹನವನ್ನು ಮಂಗಳೂರಿನ ವೆಲೆನ್ಸಿಯಾ ಬಳಿಯಿರುವ ಶಾಲೋಮ್ ಕಾಂಪ್ಲೆಕ್ಸ್ನಲ್ಲಿರುವ ವೀಡಾ ಶೋರೂಂನಲ್ಲಿ ಮಾರುಕಟ್ಟೆಗೆ ಲೋಕಾರ್ಪಣೆಗೊಳಿಸಲಾಯಿತು.
ಅತಿಥಿಗಳಾಗಿ ಆಗಮಿಸಿದ ನಟ ಅಥರ್ವ ಪ್ರಕಾಶ್ ಮತ್ತು ಧನ್ಯ ಪೂಜಾರಿ ಅವರು ನೂತನ ವಾಹನವನ್ನು ಲೋಕಾರ್ಪಣೆಗೊಳಿಸಿದರು.
ಇದೇ ಸಂದರ್ಭದಲ್ಲಿ ನೂತನ ವೀಡಾ ಎಲೆಕ್ಟ್ರಿಕ್ ಇವೂಟರ್ ವಾಹನದ ಗ್ರಾಹಕರಿಗೆ ಕೀ ಹಸ್ತಾತರಿಸಲಾಯಿತು.
ಲೋಕಾರ್ಪಣೆ ಪ್ರಯುಕ್ತ ಗ್ರಾಹಕರಿಗಾಗಿ ವೀಡಾ ವಿಎಕ್ಸ್೨ ರೀಲ್ಸ್ ಸ್ಪರ್ಧೆ ಹಾಗೂ ಕ್ಯೂ ಆಂಡ್ ಎ ಚಾಲೆಂಜ್ ಅನ್ನು ಹಮ್ಮಿಕೊಳ್ಳಲಾಗಿತ್ತು ಅದರ ವಿಜೇತರಿಗೆ ಬಹುಮಾನವಾಗಿ 2500 ರೂ. ಗಳ ನಗದು ರಿಯಾಯಿತಿ ವೊಚರ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವೆಸ್ಟ್ ಕೋಸ್ಟ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ಮೊಹಮ್ಮದ್ ರಫೀಕ್, ಜನರಲ್ ಮ್ಯಾನೇಜರ್ ಸಂದೀಪ್ ಮೊದಲಾದವರು ಉಪಸ್ಥಿತರಿದ್ದರು.
ಹೀರೋ ವಿಡಾ ವಿ ಎಕ್ಸ್ 2 ವಿಶೇಷತೆ
ಹೀರೋ ವಿಡಾ ವಿ ಎಕ್ಸ್ 2 ಕೈಗೆಟುಕುವ ಪ್ಯಾಕೇಜ್ನಲ್ಲಿ ಪ್ರಾಯೋಗಿಕತೆಯನ್ನು ನೀಡುತ್ತದೆ. ಇದರ ಆರಂಭಿಕ ಶೋರೂಂ ಬೆಲೆ ರೂ 44,990 ಆಗಿದ್ದು, ಪ್ರಪ್ರಥಮ ಬಾರಿಗೆ ಹೀರೋ ವಿಡಾ ವಿ ಎಕ್ಸ್ 2 ದ್ವಿಚಕ್ರ ವಾಹನದಲ್ಲಿ BASS ಸರ್ವೀಸ್ ತರಲಾಗಿದೆ.
ವಿಡಾ ವಿ ಎಕ್ಸ್ 2 ಉತ್ತಮ ಕಾರ್ಯಕ್ಷಮತೆ ಮತ್ತು ಆಕರ್ಷಕ ಬೆಲೆಯನ್ನು ಹೊಂದಿದೆ. ಬ್ಯಾಟರಿ-ಸೇವೆಯೊಂದಿಗೆ, ಗ್ರಾಹಕರ ಮನ ಸೆಳೆಯುವಂತಿದೆ.