ಪುತ್ತೂರು: ಬೆಟ್ಟಂಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಬ್ಯಾಂಕ್ ಆಫ್ ಬರೋಡಾ ಬೆಟ್ಟಂಪಾಡಿ ಶಾಖಾ ವತಿಯಿಂದ ಶಾಖಾ ಪ್ರಬಂಧಕ ಅತಿಥ್ ರೈರವರು 10,000 ರೂ.ನ ಸಮವಸ್ತ್ರ ವಿತರಿಸಿದರು.
ಶಾಲಾ ಮುಖ್ಯಗುರು ಮಮತಾರವರಿಗೆ ಹಸ್ತಾಂತರಿಸಲಾಯಿತು. ಕೊಡುಗೆ ನೀಡಲು ಪ್ರೇರೇಪಿಸಿದ ಶಾಲಾ ಹಿರಿಯ ವಿದ್ಯಾರ್ಥಿ ಪ್ರಭಾಕರ್ ರೈ ಬಾಜುವಳ್ಳಿ, ಹಮೀದ್ ಕೊಮ್ಮೆಮಾರು, ಯತೀಶ್ ಕೋರ್ಮಂಡ, ಕುಶಾಲಪ್ಪ ಗೌಡ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಸೌಮ್ಯಶ್ರೀ ಹಾಗೂ ಸದಸ್ಯರು, ಹಾಗೂ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
