ಕಡಬ: ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಂಸ್ಥೆಯ ಆರ್.ಜಿ.ಎಸ್.ಎ ಯೋಜನೆಯಡಿ ರಾಜ್ಯ ಗ್ರಾಮ ಪಂಚಾಯಿತಿಗಳಿಗೆ ಐಎಸ್‌ಒ ಪ್ರಮಾಣೀಕರಣವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಒಂದು ದಿನದ ತರಬೇತಿಯನ್ನು ಹಮ್ಮಿಕೊಂಡಿದ್ದು, ಈ ತರಬೇತಿಗೆ ಸ್ವಂತ ಸಂಪನ್ಮೂಲ ಸಂಗ್ರಹಣೆಯಲ್ಲಿ ಅತೀ ಹೆಚ್ಚು ಸಂಗ್ರಹಣೆ ಮಾಡಿದ ಕ್ರೀಯಾಶೀಲ ಬಿಳಿನೆಲೆ ಗ್ರಾಮ ಪಂಚಾಯತ್‌ನ ಅಧ್ಯಕ್ಷರು, ಪಿಡಿಒ ನಿಯೋಜಿಸುವಂತೆ ಪಂಚಾಯತ್‌ರಾಜ್ ಆಯುಕ್ತಾಲಯ ಬೆಂಗಳೂರು ಇವರು ಸೂಚಿಸಿದ್ದಾರೆ.

ತರಬೇತಿಯು ಜು.21ರಂದು ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಂಸ್ಥೆ ವಸತಿ ನಿಲಯ ಮೈಸೂರು ಇಲ್ಲಿ ನಡೆಯುತ್ತಿದೆ. ಈ ತರಬೇತಿಯಲ್ಲಿ ಬಿಳಿನೆಲೆ ಗ್ರಾಮ ಪಂಚಾಯತ್‌ನ ಅಧ್ಯಕ್ಷೆ ಶಾರಾದದಿನೇಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಾವತಿ, ಭಾಗವಹಿಸಿದ್ದಾರೆ.
ಕಡಬ ತಾಲೂಕಿನಲ್ಲಿ ಬಿಳಿನೆಲೆ ಹಾಗೂ ಸುಬ್ರಹ್ಮಣ್ಯ ಗ್ರಾ.ಪಂ. ಆಯ್ಕೆಯಾಗಿದೆ.