ಪುಣಚ: ಪುಣಚ ಗ್ರಾ.ಪಂ. ಮಾಜಿ ಸದಸ್ಯ ಪಟಿಕಲ್ಲು ನಾರಾಯಣ ನಾಯ್ಕ ರವರ 60ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮಾಚರಣೆ ಜು.21ರಂದು ಪಟಿಕಲ್ಲು ನಿವಾಸದಲ್ಲಿ ನಡೆಯಿತು. ಆರಂಭದಲ್ಲಿ ನಾರಾಯಣ ನಾಯ್ಕ ದಂಪತಿ ದೀಪ ಬೆಳಗಿಸಿದರು. ಬಳಿಕ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಆಚರಿಸಿದರು.
ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಪುಣಚ ಗ್ರಾ.ಪಂ.ಸದಸ್ಯೆ ಲಲಿತ ಅಜ್ಜಿನಡ್ಕ, ವಿಟ್ಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಬಾಲಕೃಷ್ಣ ಪೂಜಾರಿ ಹಿತ್ತಿಲು, ಪುಣಚ ವಲಯ ಕಾಂಗ್ರೆಸ್ ಕಾರ್ಯದರ್ಶಿ ಸಿರಾಜ್ ಮಣಿಲ, ಮೋಹನ ಹಿತ್ತಿಲು, ನಾರಾಯಣ ನಾಯ್ಕರವರ ಸಹೋದರಿಯರಾದ ಗಿರಿಜಾ ದಂಬೆ, ಗಿರಿಜಾ ಆಲಂಗಾರು, ಲಲಿತಾ ಕನ್ಯಾನ, ಸುನಂದ ಒರ್ಮೊಡಿ, ಭಾವಂದಿರಾದ ಕೃಷ್ಣ ನಾಯ್ಕ ಮರ್ತನಾಡಿ, ಅರಿಯಪ್ಪ ನಾಯ್ಕ ಒರ್ಮೊಡಿ ಹಾಗೂ ಅಳಿಯಂದಿರು, ಕುಟುಂಬಸ್ಥರು, ಮಿತ್ರರು, ಹಿತೈಷಿಗಳು ಆಗಮಿಸಿ ಶುಭ ಹಾರೈಸಿದರು.
ನಾರಾಯಣ ನಾಯ್ಕರವರ ಪತ್ನಿ ಗೀತಾ ಪಟಿಕಲ್ಲು, ಪುತ್ರರಾದ ಚಂದ್ರಶೇಖರ ನಾಯ್ಕ,ಹೊನ್ನಪ್ಪ ನಾಯ್ಕ, ಪ್ರವೀಣ ನಾಯ್ಕ, ಪುತ್ರಿ ಗುಲಾಬಿ, ಅಳಿಯ ಸುರೇಶ ನಾಯ್ಕ ಕಜೆ ಬೆಳ್ತಂಗಡಿ, ಮೊಮ್ಮಕ್ಕಳಾದ ಜಶ್ವಿತಾ, ಯಕ್ಷಿತ್ ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿದರು.