ಪುತ್ತೂರು: ಮೇಕಪ್ ಇಲ್ಲದೆ ಮಹಿಳೆಯರು ಮನೆಯಂಗಳಕ್ಕೆ ಕಾಲಿಟ್ಟಾರು. ಆದರೆ ರಸ್ತೆಗೆ ಇಳಿಯುವುದಿಲ್ಲ. ಪ್ರತಿಯೊಬ್ಬರಿಗೂ ತಾವು ಸೌಂದರ್ಯವತಿಯಾಗಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಇರುತ್ತದೆ. ಹೀಗಾಗಿ ಫ್ಯಾನ್ಸಿ ಶಾಪ್ಗಳಿಗೆ ಹೋಗಿ ತಮಗೆ ಬೇಕಾದ ಮೇಕಪ್ ಮತ್ತು ಉಡುವ ಬಟ್ಟೆಗೆ ಸರಿಯಾದ ಫ್ಯಾನ್ಸಿ ಆಭರಣಗಳನ್ನು ಖರೀದಿಸಿ ಮನೆಯಲ್ಲಿ ಅರ್ಧ ತಾಸು ಕನ್ನಡಿ ಮುಂದೆ ನಿಲ್ಲುತ್ತಾರೆ.
ಬಟ್ಟೆ ಖರೀದಿಸಿದ ಮಹಿಳೆಯರ ಮನೆ ಪ್ರವೇಶ ಆಗುವುದು ಫ್ಯಾನ್ಸಿ ಅಂಗಡಿಯಿಂದ ಐಟಂಗಳನ್ನು ಖರೀದಿಸಿದ ಮೇಲೆಯೇ. ಬಟ್ಟೆ ಬಣ್ಣಕ್ಕೆ ಮ್ಯಾಚಿಂಗ್ ಎನಿಸುವ ನೈಲ್ ಪಾಲಿಶ್, ಹೇರ್ ಬ್ಯಾಂಡ್, ಕಿವಿಯೋಲೆ, ಸರ, ಸೊಂಟಪಟ್ಟಿ, ಐಲೈನರ್, ಲಿಪ್ಸ್ಟಿಕ್ ಹೀಗೆ ಹೇಳುತ್ತಾ ಹೋದರೆ ಅನೇಕ ವಸ್ತುಗಳು ಇವೆ. ಇನ್ನು, ಚೂಡಿದಾರ, ಸೀರೆಯುಟ್ಟ ನಾರಿಯ ಹಣೆಯಲ್ಲಿ ಒಂದು ಬಿಂದಿ ಇಲ್ಲದಿದ್ದರೆ ಆಕೆಯ ಸೌಂದರ್ಯ ಕಡಿಮೆ ಎನಿಸುವುದು. ಇವೆಲ್ಲವನ್ನು ಧರಿಸಿದ ನಾರಿ ಸೌಂದರ್ಯವತಿಯಾಗಿ ಕಾಣುವಳು. ಹೀಗಾಗಿ ಮಹಿಳೆಯರು ಚಿನ್ನದ ಜ್ಯುವೆಲರ್ಸ್ಗಳಿಗೆ ಅಪರೂಪಕ್ಕೊಮ್ಮೆ ಹೋದರೂ ಫ್ಯಾನ್ಸಿ ಅಂಗಡಿಗೆ ವಾರದಲ್ಲಿ ಒಂದು ದಿನ ಹೋಗದಿದ್ದರೆ ಸಮಾಧಾನವೇ ಆಗುವುದಿಲ್ಲ.
ಇಂತಹವರಿಗೆ ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ನೀಲಮ್ ಗಾರ್ಮೆಂಟ್ಸ್ ಬಳಿ ಹೊಸ ಫ್ಯಾನ್ಸಿ ಶಾಪ್ ತೆರೆಯುತ್ತಿದೆ. ಮಹಿಳೆಯರನ್ನು ಆಕರ್ಷಿಸುವ ಹಾಗೂ ಅವರ ನಂಬಿಕೆ ಗಳಿಸುವ ಶಾರದ ಫ್ಯಾನ್ಸಿ ನಾಳೆ (ಜು.23) ಶುಭಾರಂಭಗೊಳ್ಳಲಿದೆ. ಹೋಲ್ಸೇಲ್ ಮತ್ತು ರಿಟೈಲ್ ಮಾರಾಟ ಶಾಪ್ ಇದಾಗಿದ್ದು, ಫ್ಯಾನ್ಸಿ, ಕಾಸ್ಮೆಟಿಕ್ಸ್, ಗಿಫ್ಟ್, ಟಾಯ್ಸ್, 1 ಗ್ರಾಂ ಗೋಲ್ಡ್, ಇಮಿಟೇಶನ್ ಜ್ಯುವೆಲ್ಲರಿ, ಸ್ಟೇಷನರಿ, ಬ್ಯಾಗ್ಸ್, ಪ್ಲಾಸ್ಟಿಕ್ ಐಟಂಗಳು ಇಲ್ಲಿ ಲಭ್ಯವಿದೆ.
ಫ್ಯಾಕ್ಟರಿಯಿಂದ ನೇರವಾಗಿ ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ಶುಭಾರಂಭದ ಪ್ರಯುಕ್ತ ಎಲ್ಲಾ ಐಟಂಗಳ ಮೇಲೆ ಶೇ.10 ಡಿಸ್ಕೌಂಟ್ ಆಫರ್ ನೀಡಲಾಗುತ್ತಿದೆ. ಈ ಆಫರ್ ಜು.23 ರಿಂದ ಜು.25ರ ವರೆಗೆ ಇರಲಿದ್ದು, ಹೆಚ್ಚಿನ ಮಾಹಿತಿಗಾಗಿ 9480900758 ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.