ಪುತ್ತೂರು: ʼನಾನು ಮಾಜಿ ಶಾಸಕರಲ್ಲಿ ಯಾವುದೇ ಚಾಲೆಂಜಿಗೆ ಹೋಗುವುದಿಲ್ಲ. ಅವರ ಚಾಲೆಂಜ್ ಅನ್ನು ಅವರು ಮಾಡಿ ತೋರಿಸಲಿ. ಆಗ ಪ್ರತಿರೋಧ ಹೇಗೆ ಬರುತ್ತದೆ ಎಂದು ಗೊತ್ತಾಗುತ್ತದೆ. ಅವರ ಸಾಧನೆ ಎಷ್ಟಿದೆ ಎಂದು ಮಾಧ್ಯಮದಲ್ಲಿ ನೋಡಿಲ್ವ. ಅವರ ತೋಳು ಬಲ ಎಷ್ಟಿದೆ ಎಂದು ನೋಡಿಲ್ವ, ಅವರಿಗೆ ತೋಳು ಬಲವಿದೆ ಅವರು ಸಾಧನೆ ಮಾಡಿದ್ದಾರೆ. ಅವರು ವೈಟ್ಲಿಫ್ಟಿಂಗ್ ಅದೋ ಇದೋ ಏನೆಲ್ಲಾ ಮಾಡಿದ್ದಾರೆʼ ಎಂದು ಶಾಸಕ ಅಶೋಕ್ ರೈ ಅವರು ಮಾಜಿ ಶಾಸಕ ಸಂಜೀವ ಮಠಂದೂರು ಅವರ ಸವಾಲಿಗೆ ತಿರುಗೇಟು ನೀಡಿದ್ದಾರೆ.
ಇತ್ತೀಚೆಗೆ ಬಿಜೆಪಿ ಪ್ರತಿಭಟನೆಯಲ್ಲಿ ಅಜಿತ್ ಮಡಿಕೇರಿಯವರನ್ನು ಪುತ್ತೂರಿನಲ್ಲಿ ಮೆರವಣಿಗೆ ಮಾಡುತ್ತೇವೆ ಆಗ ಶಾಸಕರು ತನ್ನ ಪವರ್ ತೋರಿಸಲಿ ಎಂದು ಸವಾಲು ಹಾಕಿದ ವಿಚಾರವಾಗಿ ಮಾಧ್ಯಮದವರು ಶಾಸಕರನ್ನು ಪ್ರಶ್ನಿಸಿದಾಗ ಶಾಸಕ ಅಶೋಕ್ ರೈ ಅವರು ಜು.22ರಂದು ನೆಲ್ಲಿಕಟ್ಟೆಯಲ್ಲಿ ಪ್ರತಿಕ್ರಿಯೆ ನೀಡಿದರು.
ʼಅವರು ಹಾಕಿದ ಸವಾಲಿಗೆ ಮಾತನಾಡುವ ಅವಶ್ಯಕತೆ ಇಲ್ಲ. ನಾವು ಅವರ ಬಗ್ಗೆ ಯಾವುದನ್ನು ಮಾತನಾಡುವುದಿಲ್ಲ. ಬಿಜೆಪಿ ಪಕ್ಷದ ಬಗ್ಗೆಯಾಗಲಿ ಮಾಜಿ ಶಾಸಕರ ಬಗ್ಗೆಯಾಗಲಿ ನಾವು ಯಾವುದನ್ನೂ ಮಾತನಾಡುವುದಿಲ್ಲ. ನಾನು ಅವರ ಸಾಧನೆ ಹೇಳಿದರೆ ಅವರಿಗೆ ನೋವಾಗಬಹುದು. ಅವರ ಕುಟುಂಬದವರು ಸಹ ಅವರನ್ನು ಮನೆಯಿಂದ ಹೊರಗೆ ಹಾಕಿಯಾರು. ಅವರ ಸಾಧನೆ ಎಷ್ಟಿದೆ ಎಂದು ಮಾಧ್ಯಮದಲ್ಲಿ ನೋಡಿಲ್ವ. ಅವರ ತೋಳು ಬಲ ಎಷ್ಟಿದೆ ಎಂದು ನೋಡಿಲ್ವ, ಅವರಿಗೆ ತೋಳು ಬಲವಿದೆ ಅವರು ಸಾಧನೆ ಮಾಡಿದ್ದಾರೆ. ಅವರು ವೈಟ್ಲಿಫ್ಟಿಂಗ್ ಅದೋ ಇದೋ ಏನೆಲ್ಲಾ ಮಾಡಿದ್ದಾರೆ ಎಂದ ಶಾಸಕರು ನಮ್ಮನ್ನು ಯಾಕೆ ಅವರು ಕೆಣಕುತ್ತಾರೆ. ಅವರು ನಮ್ಮನ್ನು ಕೆಣಕಬಾರದು. ನಾವು ಅವರಿಗೆ ನೋವು ಮಾಡುವುದಿಲ್ಲ. ನಾವು ಅವರ ಮಾತಿಗೆ ಅವತ್ತೆ ಉತ್ತರ ಕೊಡುವುದಿದ್ದರೆ ಎಷ್ಟೋ ಕೊಡಬಹುದಿತ್ತು. ವಾಟ್ಸಪ್ನಲ್ಲಿ ಅದರಲ್ಲಿ ಇದರಲ್ಲಿ ಕೊಡುವಂತಹ ನೋವು ಮಾಡುವುದಿಲ್ಲ. ನಾವು ಅವರಲ್ಲಿ ವಿನಂತಿ ಮಾಡುವುದು ಇಷ್ಟೆ. ನಾವು ಅವರ ಸುದ್ದಿಗೆ ಬರುವುದಿಲ್ಲ. ನಿಮ್ಮ ಪಕ್ಷವನ್ನೂ ದೂರುವುದಿಲ್ಲ. ನಮಗೆ ಮೂರು ವರ್ಷ ಅಭಿವೃದ್ಧಿ ಮಾಡಲು ಅವಕಾಶ ಕೊಡಿ. ಆಮೇಲೆ ಜನ ಏನು ತೀರ್ಮಾಣ ಮಾಡುತ್ತಾರೋ ಹಾಗೆ ಮಾಡಲಿ. ನಿಮ್ಮ ಶಕ್ತಿ, ನಿಮ್ಮತೋಳು ಬಲ ಎಲ್ಲವನ್ನು 5 ವರ್ಷದಲ್ಲಿ ತೋರಿಸಿದ್ದೀರಿ. ಅದರಿಂದಾಗಿ ಅವರಿಗೆ ಸೀಟ್ ಕೂಡಾ ಸಿಗಲಿಲ್ಲ. ಇನ್ನು ಯಾಕೆ ಅದನ್ನು ಮಾಧ್ಯಮದಲ್ಲಿ ತೋರಿಸುವುದು. ಸುಮ್ಮನೆ ಇದ್ದು 3 ವರ್ಷ ರೆಸ್ಟ್ ಮಾಡಲಿ ಎಂದು ತಿಳಿಸಿದರು.