ಉತ್ತಮ ಮಹಿಳಾ ಸಮಾಜ ನಿರ್ಮಾಣಕ್ಕೆ ಮರ್ಕಝ್ ಕೊಡುಗೆ ಅನನ್ಯ-ಝಕರಿಯ್ಯ ಅಲ್ ಮುಝೈನ್
ಪುತ್ತೂರು: ಮುಸ್ಲಿಂ ಸಮಾಜದ ಇಂದಿನ ಶೈಕ್ಷಣಿಕ ಸುಧಾರಣೆ ತೃಪ್ತಿಕರವಾಗಿ ಮುಂದುವರಿಯುತ್ತಿರುವುದು ಹೆಮ್ಮೆ ಎನಿಸುತ್ತಿದೆ. ಡಾಕ್ಟರ್, ಇಂಜಿನಿಯರ್, ಲಾಯರ್, ಸಿ.ಎ ಜೊತೆಗೆ ಐಪಿಎಸ್ ನಂತಹ ಪ್ರಮುಖ ಸರಕಾರಿ ಸ್ಥಾನಗಳಿಗೆ ಪ್ರಾಮುಖ್ಯತೆ ಕೊಟ್ಟು ಬೆಳೆಸಲು ಶಿಕ್ಷಣ ಸಂಸ್ಥೆ, ಸಮಿತಿಗಳು ಕಾರ್ಯಾಚರಣೆ ನಡೆಸುತ್ತಿದೆ. ಬಡವನಾಗಿ ಬೆಳೆದು ಬಂದ ನಾನು ಇಂದು ಸೌದಿ ಅರೇಬಿಯಾದಲ್ಲಿ ಏಳು ಸಾವಿರಕ್ಕೂ ಮಿಕ್ಕ ಜನರಿಗೆ ಉದ್ಯೋಗ ನೀಡುತ್ತಿದ್ದೇನೆ. ಅಲ್ಲಾಹನು ಆ ಮಟ್ಟಕ್ಕೆ ನನ್ನನ್ನು ಬೆಳೆಸಿದ್ದಕ್ಕೆ ಅದರ ಫಲವನ್ನು ಸಮಾಜ ಸೇವೆ, ವಿದ್ಯಾದಾನದ ಮೂಲಕ ಸಮಾಜಕ್ಕೆ ರಿಟರ್ನ್ ಮಾಡುತ್ತಿದ್ದೇನೆ ಎಂದು ಸೌದಿ ಅರೇಬಿಯಾದ ಅಲ್ ಮುಝೈನ್ ಕಂಪನಿಯ ಎಂಡಿ ಝಕರಿಯ್ಯ ಅಲ್ ಮುಝೈನ್ ರವರು ಹೇಳಿದರು. ಅವರು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಅರಂಭಗೊಂಡ ಹೆಲ್ತ್ ಸಯನ್ಸ್ ಸೆಕ್ಷನ್ ಉದ್ಘಾಟನೆಗೊಳಿಸಿ ಮಾತನಾಡಿದರು. ಮುಂದೆ ಗಲ್ಫ್ ರಾಜ್ಯಗಳಲ್ಲಿ ಕರಾವಳಿ ಕಲ್ಚರ್ ಒಳಗೊಂಡ ನಾಲ್ಕು ಯುನಿವರ್ಸಿಟಿಗಳನ್ನು ಆರಂಭ ಮಾಡುವ ಪ್ಲಾನ್ ಹೊಂದಿದ್ದೇನೆ. ಆ ಮೂಲಕ ಗಲ್ಫ್ ರಾಷ್ಟ್ರಗಳಲ್ಲಿ ವಿದ್ಯಾದಾನಕ್ಕೆ ಹೊಸ ತಿರುವು ನೀಡಲು ಬಯಸಿದ್ದೇನೆ, ಕುಂಬ್ರ ಮರ್ಕಝುಲ್ ಹುದಾದ ಗುಣಮಟ್ಟದ ಸೇವೆಯನ್ನು ಎಂದೂ ಮರೆಯಲಾರೆ, ಉತ್ತಮ ಮಹಿಳಾ ಸಮಾಜ ನಿರ್ಮಾಣಕ್ಕೆ ಇದು ನೀಡುತ್ತಿರುವ ಕೊಡುಗೆ ಶ್ಲಾಘನೀಯ, ಎಲ್ಲಾ ವಿಧದ ಶುಭವನ್ನು ಈ ಸಂಸ್ಥೆಗೆ ಕೋರುತ್ತಿದ್ದೇನೆ ಎಂದು ಅವರು ಶುಭ ಹಾರೈಸಿದರು.

ಸುಲ್ತಾನ್ ಗೋಲ್ಡ್ ಎಂಡ್ ಡೈಮಂಡ್ಸ್ ಇದರ ಮೆಹರುನ್ನೀಸಾ ಮಾತನಾಡಿ ಪ್ರತಿಭೆಗಳನ್ನು ಬೆಳೆಸಿ ಸಮಾಜಕ್ಕೆ ಬಹುದೊಡ್ಡ ಸೊತ್ತಾಗಿ ನೀಡುವುದು ಅಷ್ಟೊಂದು ಸುಲಭದ ಮಾತಲ್ಲ, ಈ ನಿಟ್ಟಿನಲ್ಲಿ ಮರ್ಕಝ್ ಕಾರ್ಯಾಚರಣೆ ಅಭಿನಂದನಾರ್ಹ ಎಂದು ಹೇಳಿದರು.
ರಾಜ್ಯ ಮಟ್ಟದಲ್ಲಿ ಸಂಸ್ಥೆಗೆ 9ನೇ ರ್ಯಾಂಕ್ ಗಳಿಸಿದ ಮರ್ಕಝ್ ಹಾಸ್ಟಲ್ ವಿದ್ಯಾರ್ಥಿನಿ ಕೊಡಗಿನ ಕುಂಜಿಲ ಫರ್ಹತ್ ಎಂ.ಎ ಅವರನ್ನು ಸುಲ್ತಾನ್ ಗೋಲ್ಡ್ ವತಿಯಿಂದ ನೀಡಲ್ಪಟ್ಟ ಒಂದು ಪವನ್ ಚಿನ್ನದ ನಾಣ್ಯ ವನ್ನು ನೀಡಿ ಗೌರವಿಸಲಾಯಿತು.
ಇದೇ ವೇಳೆ ಎಂಎಚ್ಕೆ ಸೌದಿ ರಾಷ್ಟ್ರೀಯ ಸಮಿತಿ ವತಿಯಿಂದ ಅಧ್ಯಕ್ಷರಾದ ಫಾರೂಕ್ ಹಾಜಿ ಕನ್ಯಾನ ಮತ್ತು ಎಂಎಚ್ಕೆ ಬಹರೈನ್ ಸಮಿತಿ ಅಧ್ಯಕ್ಷರಾದ ಜಮಾಲುದ್ದೀನ್ ವಿಟ್ಲ ತಮ್ಮ ಘಟಕಗಳ ವತಿಯಿಂದ ರ್ಯಾಂಕ್ ವಿಜೇತೆ ಫರ್ಹತ್ ಮತ್ತು ಕಾಲೇಜು ಟಾಪರ್ಸ್ ಗಳಾದ ಅಲೀಮತ್ ಸಈದಾ, ಅಶೀಮಾ ಇಶ್ರತ್ ,ನಫೀಸತ್ ಮುಫೀಸರವರಿಗೆ ಕ್ಯಾಶ್ ಅವಾರ್ಡ್ ನೀಡಿ ಗೌರವಿಸಿದರು.
ಮರ್ಕಝುಲ್ ಹುದಾ ಆಡಳಿತ ಸಮಿತಿಯ ಉಪಸ್ಥಿತಿಯಲ್ಲಿ ಪದವಿಪೂರ್ವ ವಿಭಾಗದ ಉಪನ್ಯಾಸಕಿಯರು ಶಾಲು ಹೊದಿಸಿ ಫಲಕ ನೀಡಿ ಗೌರವಿಸಿದರು.
ರ‍್ಯಾಂಕ್ ವಿಜೇತೆ ವಿದ್ಯಾರ್ಥಿನಿ ಫರ್ಹತ್ ಮಾತನಾಡಿ ನನ್ನ ಈ ಬೆಳವಣಿಗೆಗೆ ಕಾರಣಕರ್ತರಾದ ಇಲ್ಲಿನ ಆಡಳಿತ ಸಮಿತಿ ಮತ್ತು ಉಪನ್ಯಾಸಕ ವ್ರಂದಕ್ಕೆ ಈ ಎಲ್ಲಾ ಕ್ರೆಡಿಟ್ ನ್ನು ನಾನು ಅರ್ಪಿಸುತ್ತಿದ್ದೇನೆ. ಅವರು ನಿಜವಾಗಿಯೂ ನನ್ನನ್ನು ಬೆಳೆಸಿದ ರೂವಾರಿಗಳಾಗಿದ್ದಾರೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮಾತನಾಡಿ ಈ ಸಂಸ್ಥೆಯ ಹೆಸರನ್ನು ಕೇಳಿದ್ದೆ, ಇಂದು ಬೇಟಿ ನೀಡಲು ಅವಕಾಶ ಸಿಕ್ಕಿದೆ. ಇಲ್ಲಿನ ವಿಚಾರಗಳನ್ನು ಕಂಡು ತಿಳಿದು ಅತೀವ ಸಂತುಷ್ಠಗೊಂಡೆ. ವಿದ್ಯಾರ್ಥಿನಿಯರಿಗೆ ಸಂಸ್ಥೆ ನೀಡುತ್ತಿರುವ ಉತ್ತೇಜನ ಕಂಡು ನಿಜಕ್ಕೂ ಹೆಮ್ಮೆಯೆನಿಸಿತು ಎಂದು ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷರಾದ ಡಾ.ಎಂ ಎಸ್‌ಎಂ ಅಬ್ದುಲ್ ರಶೀದ್ ಝೈನಿ ಮಾತನಾಡಿ ಮಕ್ಕಳು ಟೀನೆಜ್ ಕಾಲವಾದ ಪಿ.ಯು ಸಮಯ ಅವರಲ್ಲಿ ಪ್ರತಿಯೊಂದನ್ನು ತಿದ್ದಿ ಸರಿಪಡಿಸಬೇಕಾದ ಸಮಯ. ಗುರುವಿಗೆ ಸಲ್ಲಿಸಬೇಕಾದ ರೆಸ್ಪೆಕ್ಟ್ ಅದರಲ್ಲಿ ಕಿಂಚಿತ್ತೂ ಖೋತಾ ನಡೆಸಿದರೆ ವಿದ್ಯಾರ್ಥಿನಿಯರ ಬಾಳು ಗೋಳಾಗುವುದರಲ್ಲಿ ಸಂಶಯವಿಲ್ಲ, ಆರ್ಥಿಕವಾಗಿ ಬಹಳಷ್ಡು ಸಂಕಷ್ಟದಲ್ಲಿದ್ದರೂ ಸಂಸ್ಥೆ ಯಾವುದೇ ಬೆಳವಣಿಗೆಗಳನ್ನು ಕುಂಠಿತಗೊಳಿಸಿಲ್ಲ. ಉಚಿತ ಬಸ್ ಪ್ರಯಾಣದಿಂದ ಒಂದು ವರ್ಷಕ್ಕೆ ಇಪ್ಪತ್ತು ಲಕ್ಷಕ್ಕೂ ಅಧಿಕ ಅರ್ಥಿಕ ನಷ್ಠ ನಮ್ಮ ಸಂಸ್ಥೆ ಅನುಭವಿಸಿದೆ. ನಮ್ಮ ಬಸ್ ನಲ್ಲಿ ಬರುವ ವಿದ್ಯಾರ್ಥಿನಿಯರ ಪೋಷಕರು ಇದನ್ನು ಅರ್ಥೈಸಿಸಿ ನಮ್ಮೊಂದಿಗೆ ಸಹಕರಿಸಬೇಕು. ನಿಮ್ಮ ಮಕ್ಕಳನ್ನು ನಮ್ಮ ಸಂಸ್ಥೆಯ ಜ್ಞಾನದ ಮೂಲಕ ಅದ್ಬುತವಾದ ಪ್ರಪಂಚವನ್ನು ನಿಮಗೆ ನೀಡುತ್ತಿದ್ದೇವೆ ಎಂದು ಹೇಳಿದರು.

ತರಬೇತುದಾರ ರಫೀಕ್ ಮಾಸ್ಟರ್ ಮಾತನಾಡಿ ಮಕ್ಕಳನ್ನು ಬೆಳೆಸುವಾಗ ಟೀನೇಜ್ ಮೇಲೆ ಸಾಧ್ಯವಾದಷ್ಟು ಗಮನ ನೀಡಿ. ಮಕ್ಕಳಿಗೆ ಕಲಿಕಾ ಟಾಸ್ಕ್ ನೀಡಿ ಬೆಳೆಸಬೇಕು. ಇಂದು ಕಾಲೇಜು ವಿದ್ಯಾರ್ಥಿನಿಯರಿಗೆ ಮಾರಕವಾಗಿ ಕಾಲಿಟ್ಟಿರುವ ಡ್ರಗ್ಸ್, ಆನ್ಲೈನ್ ಗೇಮ್ಸ್, ಲವ್ ಮುಂತಾದ ದುಷ್ಠ ವರ್ತನೆಗಳು ವಿದ್ಯಾರ್ಥಿನಿಯರನ್ನು ಪ್ರತಿಷ್ಠಿತ ಕಾಲೇಜಿಗೆ, ನಗರಗಳ ಕಾಲೇಜಿಗೆ ಕಳುಹಿಸಲು ಭಯಪಡಬೇಕಾದ ಹಂತಕ್ಕೆ ತಂದು ನಿಲ್ಲಿಸಿದೆ. ಇದರಲ್ಲಿ ಬಹಳಷ್ಟು ವಿದ್ಯಾರ್ಥಿನಿಯರೇ ಒಳಪಡುತ್ತಿದ್ದು ಅತ್ಯಂತ ಚಿಂತೇಗೀಡುಮಾಡುತ್ತಿದೆ. ಈ ನಿಟ್ಟಿನಲ್ಲಿ ಶುದ್ದವಾಗಿ ಯಾವುದೇ ಕಲ್ಮಷಗಳಿಲ್ಲದೆ ಉನ್ನತ ವಿದ್ಯೆ ಪಡೆಯಲು ಕುಂಬ್ರ ಮರ್ಕಝುಲ್ ಹುದಾ ಸಂಸ್ಥೆ ಹೇಳಿ ಮಾಡಿಸಿದ್ದು, ಸಂಸ್ಥೆಗೆ ಎಲ್ಲರ ಸಹಕಾರವಿರಲಿ ಎಂದು ಹೇಳಿದರು.
ಕಳೆದ ಎರಡುವರೆ ದಶಕಗಳಿಂದ ಕಾರ್ಯಾಚರಣೆ ನಡೆಸುತ್ತಿರುವ ಈ ಸಂಸ್ಥೆ ಸಮಾಜದ ಕಣ್ಣಾಗಿದೆ. ಇದನ್ನು ಪೋಷಿಸಿ ಬೆಳೆಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಎಲ್ಲರೂ ಸೇರಿ ಈ ಸಂಸ್ಥೆಯನ್ನು ಅದ್ಭುತವಾಗಿ ಬೆಳೆಸೋಣ ಎಂದು ಕುಡುಕೋಳಿ ವಾಟರ್ ಪ್ರೊಜೆಕ್ಟೆರ್ ಸಿ.ಇ.ಒ ಅಬ್ದುಲ್ಲ ಮುದುಮೂಲೆ ಹೇಳಿದರು.
ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಎಂ ಎಸ್ ಮುಹಮ್ಮದ್ ಮಾತನಾಡಿ ಹೊಸಹೊಸ ವಿಭಾಗಗಳನ್ನು, ಕೊರ್ಸ್ ಅಳವಡಿಸುವ ಮೂಲಕ ಮರ್ಕಝ್ ಮತ್ತಷ್ಟು ವಿದ್ಯಾ ಸೌಂದರ್ಯವನ್ನು ಹೊರ ಸೂಸುತ್ತಿದೆ. ಸಾಮಾಜಿಕವಾಗಿ ಯಾವುದೇ ಕೆಲಸ ಮಾಡುವಾಗ ಅದಕ್ಕೆ ವಿರೋದ ಇದ್ದರೆ ಅದನ್ನು ಚಾಲೆಂಜ್ ಮಾಡಿ ಬೆಳೆಸಲು ಸಾಧ್ಯವಾಗುತ್ತದೆ. ಮರ್ಕಝ್ ನಲ್ಲಿ ಆರಂಭ ಮಾಡುವ ಎಲ್ಲವೂ ಅದ್ಬುತ ಬೆಳೆವಣಿಗೆಯ ಕ್ರಮಗಳಾಗಿದ್ದು ಸಂಸ್ಥೆಯ ನಾಯಕರಿಗೆ ನಾನು ಧನ್ಯವಾದ ಸಮರ್ಪಿಸುತ್ತಿದ್ದೇನೆ ಎಂದು ಹೇಳಿದರು.
ಸುಡಾ ಅಧ್ಯಕ್ಷ ಮುಸ್ತಫಾ ಸುಳ್ಯ ಮಾತನಾಡಿ ನಾನು ಸಂಸ್ಥೆಯನ್ನು ಹತ್ತಿರದಿಂದ ಬಲ್ಲವನಾಗಿದ್ದು ಇಲ್ಲಿನ ಪ್ರತಿಯೊಂದೂ ಕ್ವಾಲಿಟಿ ಮತ್ತು ಸ್ಟಾಂಡರ್ಡ್ ಮೂಲಕ ನಿಯಂತ್ರಿಸಲಾಗುತ್ರಿದೆ. ಸಂಸ್ಥೆಯ ಇತ್ತೀಚಿನ ಬೆಳವಣಿಗೆ ಸ್ತ್ಯುತ್ಯಾರ್ಹ ಎಂದು ಹೇಳಿದರು.
ಮರ್ಕಝ್ ಪದವಿಪೂರ್ವ ವಿಭಾಗದ ಪ್ರಾಂಶುಪಾಲರಾದ ಸಂಧ್ಯಾ.ಪಿ ಮಾತನಾಡಿ ಮೊಬೈಲ್ ಗೀಳು ಮಕ್ಕಳ ಭವಿಷ್ಯವನ್ನು ಕುಂಠಿತಗೊಳಿಸಿಬಿಟ್ಟಿದೆ. ಇಂದಿನ ಅನೇಕ ವಿದ್ಯಾರ್ಥಿನಿಯರು ಫ್ರೀಡಂ ಪದದ ಬೆನ್ನ ಹತ್ತಿ ಸಮಾಜಕ್ಕೆ ಕುಟುಂಬಕ್ಕೆ ಮಾರಕವಾಗಿ ಮಾರ್ಪಡುತ್ತಿದ್ದಾರೆ. ವಿದ್ಯಾಭ್ಯಾಸದ ಸಂದರ್ಭ ಎಲ್ಲಿದ್ದರೂ ಫ್ರೀಡಂ ಎಲ್ಲವೂ ಯಥೇಷ್ಠವಾಗಿ ನಮ್ಮ ಮುಂದಿದ್ದರೂ ಅವೆಲ್ಲವನ್ನೂ ಅವೈಡ್ ಮಾಡಿ ಯಾವುದು ಎಷ್ಟು ಬೇಕೋ ಅದನ್ನು ಮಾತ್ರ ಪಡೆದು ನಿಯ್ಯತಿನಲ್ಲಿ ಕಲಿಯಲು ಸಾಧ್ಯವಾಗಬೇಕು. ಈ ಕಾರಣದಿಂದಲೇ ಇಂದು ಇಷ್ಟೊಂದು ದೊಡ್ಡ ಸಂಸ್ಥೆಯಲ್ಲಿ ಗೌರವಯುವಾಗಿ ನನಗೆ ಸೇವೆ ಸಲ್ಲಿಸಲು ಸಾಧ್ಯವಾಗಿದೆ. ಜೀವನದಲ್ಲಿ ಅವರವರ ಧರ್ಮ ಕಟ್ಟುಪಾಡುಗಳಲ್ಲಿ ನೆಮ್ಮದಿ ಕಾಣುವ ಮೂಲಕ ಅವನ್ನು ಅನುಸರಿಸಿ ಜೀವನ ಮಾಡಿ ಟೀನೇಜ್ ನಲ್ಲಿ ಎಡವದೆ ಜಾಗರೂಕರಾಗಿ ಹೆಜ್ಜೆ ಇಟ್ಟು ಮುಂದುವರಿದರೆ ಸಾಧನೆ ಸಾಧ್ಯ ಎಂದು ಹೇಳಿದರು.
ಹೆಲ್ತ್ ಸಯನ್ಸ್ ವಿಭಾಗದ ಮುಖ್ಯಸ್ಥರಾದ ಸಲೀಂ ಮಾತನಾಡಿ ಗುಣಮಟ್ಟದ ಶಿಕ್ಷಣಕ್ಕೆ ಮೊದಲೇ ಕಿರ್ತಿ ಪಡೆದ ಈ ಸಂಸ್ಥೆ ಇದೀಗ ಹೆಲ್ತ್ ಸೆಯನ್ಸ್ ವಿಭಾಗವನ್ನೂ ಆರಂಭಿಸುವ ಮೂಲಕ ಮತ್ತೊಂದು ಹಿರಿಮೆಯನ್ನು ಪಡೆದುಕೊಂಡಿದೆ. ಉತ್ತಮವಾದ ಕ್ವಾಲಿಟಿ ವಿಧ್ಯೆ ನೀಡಿ ಬೆಳೆಸಲು ಎಲ್ಲಾ ವಿಭಾಗಗಳಂತೆ ಈ ವಿಭಾಗವನ್ನು ಸಜ್ಜುಗೊಳಿಸಲಾಗಿದ್ದು ಮರ್ಕಝ್ ಭವಿಷ್ಯಕ್ಕೆ ಈ ವಿಭಾಗದಲ್ಲಿ ಬಹಳಷ್ಟು ಎತ್ತರದ ಬೆಳವಣಿಗೆಗಳನ್ನು ಕಾಣಲಿದೆ ತಮ್ಮೆಲ್ಲರ ಸಹಕಾರವಿರಲಿ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷರಾದ ಅರಿಯಡ್ಕ ಅಬ್ದುರ್ರಹ್ಮಾನ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಶರೀಅತ್ ವಿಭಾಗದ ಪ್ರಾಂಶುಪಾಲರಾದ ವಳವೂರು ಮುಹಮ್ಮದ್ ಸಅದಿ ಉಸ್ತಾದ್ ದುವಾ ನಿರ್ವಹಿಸಿದರು. ಪ್ರಧಾನ ಕಾರ್ಯದರ್ಶಿ ಬಶೀರ್ ಇಂದ್ರಾಜೆ ಸ್ವಾಗತಿಸಿದರು. ವೇದಿಕೆಯಲ್ಲಿ ಸುಲೈಮಾನ್ ಹಾಜಿ ವಿಟ್ಲ, ರೈಸ್ಕೋ ಗ್ರೂಪ್ ಚಯರ್ಮೇನ್ ಅಬೂಬಕ್ಕರ್ ಹಾಜಿ ರೈಸ್ಕೋ, ಮರ್ಕಝುಲ್ ಹುದಾ ಆಡಳಿತ ಸಮಿತಿಯ ಅಬ್ದುಲ್ ಕರೀಂ ಹಾಜಿ, ಎಂಎಚ್ಕೆ ಕತಾರ್ ಅಧ್ಯಕ್ಷರಾದ ರಾಶಿದ್ ಅಡ್ಕಾರ್, ಎಂಎಚ್ಕೆ ದಮ್ಮಾಮ್ ಅಧ್ಯಕ್ಷ ಶಂಸುದ್ದೀನ್ ಕಡಬ, ದಮ್ಮಾಮ್ ಕಮಿಟಿ ಜನರಲ್ ಸೆಕ್ರಟರಿ ಅಶ್ರಫ್ ಅಡ್ಕಾರ್, ದುಬೈ ಸಮಿತಿ ಜನರಲ್ ಸೆಕ್ರಟರಿ ಕಲಂದರ್ ಕಬಕ, ಬಹರೈನ್ ನ ಅಶ್ರಫ್ ಇಂದ್ರಾಜೆ, ಬುರೈದಾ ಸಮಿತಿಯ ಅಧ್ಯಕ್ಷರಾದ ಸೈಯ್ಯಿದ್ ವೈ ಎಂ ಕೆ, ಇಬ್ರಾಹಿಂ ಫೈಝಿ ಶಾಮಿಲಿ, ರಿಯಾದ್ ಕಮಿಟಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ನೀರಕಟ್ಟೆ, ಸುನ್ನೀ ಸಂಘ ಕುಟಂಬದ ಅಬೂಶಝ ಅಲ್ ಖಾಸಿಮಿ, ಸಂಸ್ಥೆಯ ಅಡ್ಮಿನಿಸ್ಟ್ರೇಶನ್ ಅಸಿಷ್ಟಂಟ್ ಶಬ್ನಾ , ಮರ್ಕಝ್ ಮುದರ್ರಿಸ್ ಹನೀಫ್ ಸಖಾಫಿ, ಶಾಫಿ ಮದನಿ, ಪದವಿ ವಿಭಾಗದ ಪ್ರಾಂಶುಪಾಲರಾದ ಮನ್ಸೂರ್ ಕಡಬ ಮುಂತಾದವರು ಉಪಸ್ಥಿತರಿದ್ದರು.
ಪದವಿಪೂರ್ವ ವಿಭಾಗದ ಉಪನ್ಯಾಸಕಿ ನೂರ್ಜಾನ್ ಸಂಪಾಜೆ ಪೋಷಕರ ಸಭಾ ಕಾರ್ಯಕ್ರಮ ನಿರ್ವಹಿಸಿದರು. ಪದವಿಪೂರ್ವ ವಿಭಾಗದ ವಿದ್ಯಾರ್ಥಿನಿಯರಾದ ಫಾತಿಮತ್ ಹಫೀಝ, ನಫ್ಲ ಸಿ.ಎ, ಶರೀಅತ್ ವಿದ್ಯಾರ್ಥಿನಿಯರಾದ ಫಾತಿಮತ್ ಹಫೀಫ, ಖದೀಜತ್ ತಸ್ನೀಮ ಪ್ರಾರ್ಥನೆ ಸಲ್ಲಿಸಿದರು.