ಸಂಘಕ್ಕೆ ಮಂಜೂರಾಗಿರುವ ಜಾಗದಲ್ಲಿ ಅದಷ್ಟು ಶ್ರೀಘ್ರವಾಗಿ ಭೂಮಿ ಪೂಜೆ- ಹೇಮನಾಥ ಶೆಟ್ಟಿ
ಪುತ್ತೂರು: ತಾಲೂಕು ಬಂಟರ ಸಂಘದ ಕಾರ್‍ಯಕಾರಿ ಸಮಿತಿ ಸಭೆಯು ಜು.22ರಂದು ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರಭವನದಲ್ಲಿ ಜರಗಿತು.
ಸಂಘಕ್ಕೆ ಮಂಜೂರಾಗಿರುವ ಜಾಗದಲ್ಲಿ ಅದಷ್ಟು ಶ್ರೀಘ್ರವಾಗಿ ಭೂಮಿ ಪೂಜೆ- ಹೇಮನಾಥ ಶೆಟ್ಟಿ
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ತಾಲೂಕು ಬಂಟರ ಸಂಘಕ್ಕೆ ಬಹುಮುಖ್ಯವಾದ ಬೇಡಿಕೆಯಾದ 3 ಎಕ್ರೆ ಜಾಗ ದೊರೆತಿದೆ. ಇದನ್ನು ಹೆಚ್ಚಿನ ಮುತುವರ್ಜಿಯಿಂದ ವಹಿಸಿ, ಸರಕಾರದ ಮೂಲಕ ಬಂಟರ ಸಂಘಕ್ಕೆ ದೊರೆಯುವಂತೆ ಮಾಡಿದ ಶಾಸಕ ಅಶೋಕ್ ಕುಮಾರ್ ರೈಯವರನ್ನು ಅಭಿನಂದಿಸಬೇಕು. ಸಂಘಕ್ಕೆ ಮಂಜೂರಾಗಿರುವ ಜಾಗದಲ್ಲಿ ಅದಷ್ಟು ಶ್ರೀಘ್ರವಾಗಿ ಭೂಮಿ ಪೂಜೆ ನೇರವೇರಿಸಬೇಕು, ಬಂಟ ಸಮಾಜ ಬಾಂಧವರ ಮತ್ತು ದಾನಿಗಳನ್ನು ಅಲ್ಲಿ ಸೇರಿಸಿ.ದೊಡ್ಡ ಮಟ್ಟದ ಕಾರ್‍ಯಕ್ರಮ ಅಯೋಜನೆಯನ್ನು ಮಾಡಲಿದ್ದೇವೆ ಎಂದು ಹೇಳಿದ ಅವರು, ಮಂಜೂರಾಗಿರುವ ಜಾಗದಲ್ಲಿ ಶಿಕ್ಷಣ ಸಂಸ್ಥೆ, ಸಾಮಾಜಿಕ ಉದ್ದೇಶಕ್ಕಾಗಿ ಬಳಕೆಯನ್ನು ಮಾಡಲಾಗುವುದು ಎಂದು ಹೇಳಿದರು.

ಅಗೋಸ್ಟ್ 3ರಂದು ಮಹಿಳಾ ಬಂಟರ ವಿಭಾಗದವರ ನೇತೃತ್ವದಲ್ಲಿ ತಾಲೂಕು ಬಂಟರ ಸಂಘ, ಯುವ ಹಾಗೂ ವಿದ್ಯಾರ್ಥಿ ಬಂಟರ ವಿಭಾಗದ ಸಹಕಾರದಲ್ಲಿ ನಡೆಯುವ ಆಟಿಡೊಂಜಿ ದಿನ ಕಾರ್‍ಯಕ್ರಮಕ್ಕೆ ಬಂಟ ಸಮಾಜ ಭಾಂದವರು ಪೂರ್ಣ ಸಹಕಾರವನ್ನು ನೀಡುವಂತೆ ಹೇಮನಾಥ ಶೆಟ್ಟಿ ವಿನಂತಿಸಿದರು.
ಕಾವು ಹೇಮನಾಥ ಶೆಟ್ಟಿಯವರಿಗೆ ಸನ್ಮಾನ
ಶಾಸಕ ಅಶೋಕ್ ಕುಮಾರ್ ರೈ ಅವರೊಂದಿಗೆ ತಾಲೂಕು ಬಂಟರ ಸಂಘಕ್ಕೆ ಸರಕಾರದಿಂದ ಜಾಗ ಮಂಜೂರಾಗುವಲ್ಲಿ ವಿಶೇಷವಾದ ಮುತುವರ್ಜಿ ವಹಿಸಿಕೊಂಡು, ಯಶಸ್ವಿಯಾದ ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರನ್ನು ಈ ಸಂದರ್ಭದಲ್ಲಿ ತಾಲೂಕು ಬಂಟರ ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು. ಸಂಘದ ನಿರ್ದೇಶಕ ಸಹಕಾರರತ್ನ ದಂಬೆಕ್ಕಾನ ಸದಾಶಿವ ರೈಯವರು ಸನ್ಮಾನಿತರ ಬಗ್ಗೆ ಸಂದಭೋಚಿತವಾಗಿ ಮಾತನಾಡಿದರು.
ಎಲ್ಲರ ಪೂರ್ಣ ಸಹಕಾರ ಅಗತ್ಯ- ಗೀತಾ ಮೋಹನ್ ರೈ
ತಾಲೂಕು ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈಯವರು ಮಾತನಾಡಿ ಅ.3ರಂದು ನಡೆಯುವ ಆಟಿಡೋಂಜಿ ದಿನ ಕಾರ್‍ಯಕ್ರಮ ಅತ್ಯಂತ ಯಶಸ್ವಿಯಾಗುವ ನಿಟ್ಟಿನಲ್ಲಿ ಎಲ್ಲರ ಪೂರ್ಣ ಸಹಕಾರ ಅಗತ್ಯ ಎಂದರು. ಆಟಿದ ಕೂಟದಲ್ಲಿ ಸುಮಾರು 45 ಬಗೆಯ ವಿವಿಧ ತಿಂಡಗಳು ಲಭ್ಯವಿದೆ ಎಂದರು.
ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ದಯಾನಂದ ರೈ ಮನವಳಿಕೆಗುತ್ತು, ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ, ಸಹಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ದಯಾನಂದ ರೈ ಕೊರ್ಮಂಡ, ಬಂಟರ ಯಾನೆ ನಾಡವರ ಮಾತೃ ಸಂಘದ ನಿರ್ದೇಶಕರುಗಳಾದ ಜೈರಾಜ್ ಭಂಡಾರಿ ನೊಣಾಲು, ಮಿತ್ರಂಪಾಡಿ ಪುರಂದರ ರೈ, ಜಯಪ್ರಕಾಶ್ ರೈ ನೂಜಿಬೈಲು, ಬಂಟರ ಸಂಘದ ನಿರ್ದೇಶಕರುಗಳಾದ ಸಹಕಾರರತ್ನ ದಂಬೆಕ್ಕಾನ ಸದಾಶಿವ ರೈ, ಸದಾಶಿವ ರೈ ಸೂರಂಬೈಲು, ಶಿವನಾಥ ರೈ ಮೇಗಿನಗುತ್ತು, ರವಿಪ್ರಸಾದ್ ಶೆಟ್ಟಿ ಬನ್ನೂರು, ಸುಧೀರ್ ಶೆಟ್ಟಿ ತೆಂಕಿಲ, ರಮೇಶ್ ಆಳ್ವ, ಇಂದು ಶೇಖರ್ ಶೆಟ್ಟಿ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಸ್ವರ್ಣಲತಾ ಜೆ. ರೈ, ಮಹಿಳಾ ಬಂಟರ ವಿಭಾಗದ ಪ್ರದಾನ ಕಾರ್‍ಯದರ್ಶಿ ಕುಸುಮ ಪಿ.ಶೆಟ್ಟಿ ಕೆರೆಕ್ಕೋಡಿ, ಕೋಶಾಧಿಕಾರಿ ಅರುಣಾ ಡಿ.ರೈ, ನಯನ ರೈ ನೆಲ್ಲಿಕಟ್ಟೆ, ಯುವ ಬಂಟರ ವಿಭಾಗದ ಪ್ರಧಾನ ಕಾರ್‍ಯದರ್ಶಿ ರಂಜಿನಿ ಶೆಟ್ಟಿ, ವಿದ್ಯಾರ್ಥಿ ಬಂಟರ ವಿಭಾಗದ ಅಧ್ಯಕ್ಷ ಪವನ್ ಶೆಟ್ಟಿ ಉಪಸ್ಥಿತರಿದ್ದರು. ಬಂಟರ ಸಂಘದ ಪ್ರದಾನ ಕಾರ್‍ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ಸ್ವಾಗತಿಸಿ, ಕೋಶಾಧಿಕಾರಿ ಸಂತೋಷ್ ಕುಮಾರ್ ಶೆಟ್ಟಿ ಸಾಜ ವಂದಿಸಿದರು,
ಆ.17ರಂದು ಕೈಕಾರದಲ್ಲಿ ಬಂಟರ ಸಂಘದಿಂದ “ಬಂಟೆರೆ ಕೆಸರ್‌ಡ್ ಒಂಜಿ ಕುಸಾಲ್”
ಆ. 17 ರಂದು ಕೈಕಾರದ ಪಳ್ಳತ್ತಾರು ಶ್ರೀ ಜುಮಾದಿ ದೈವಸ್ಥಾನದ ಹತ್ತಿರ ಸರಸ್ವತಿ ಹೊಸಲಕ್ಕೆ ಇವರ ಗದ್ದೆಯಲ್ಲಿ ಪುತ್ತೂರು ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಬಂಟ ಸಮಾಜ ಭಾಂದವರಿಗೆ “ಬಂಟೆರೆ ಕೆಸರ್‌ಡ್ ಒಂಜಿ ಕುಸಾಲ್” ಕಾರ್‍ಯಕ್ರಮ ಬೆಳಿಗ್ಗೆಯಿಂದ ಸಂಜೆ ತನಕ ನಡೆಯಲಿದೆ. ಕಾರ್‍ಯಕ್ರಮದಲ್ಲಿ ನಿಧಿಶೋಧನೆ, ಬಾಲಕ ಮತ್ತು ಬಾಲಕಿಯರಿಗೆ 50 ಮೀ ಹಾಳೆ ಎಳೆತ, ಕಂಬಳ ಓಟ, ಇಬ್ಬರ ತಂಡ ರಿಲೇ ಓಟ, ಹಿಮ್ಮುಕ ಓಟ, ಗೂಟ ಸುತ್ತು ಓಟ, ಪುರುಷರಿಗೆ 100 ಮೀಟರ್ ಓಟ, ಗೂಟ ಸುತ್ತುವುದು, ಕಣ್ಣಿಗೆ ಬಟ್ಟೆ ಕಟ್ಟಿ 50 ಮೀಟರ್ ನಡಿಗೆ, ರಿಲೇ ಓಟ, ಮಹಿಳೆಯರು 50 ಮೀಟರ್ ಓಟ ಮೊಸರು ಕುಡಿಕೆ, ರಿಲೇ ಓಟ, ಹಾಳೆಎಳೆತ, ಪುರುಷರಿಗೆ 100 ಮೀಟರ್ ಓಟ ಗೂಟ ಸುತ್ತುವುದು(3 ಮಂದಿಯ ತಂಡ) ರಿಲೇ ಓಟ(4 ಮಂದಿಯ ತಂಡ) ಮಹಿಳೆಯರಿಗೆ 50ಮೀ ಓಟ, ಕಣ್ಣಿಗೆ ಬಟ್ಟೆ ಕಟ್ಟಿ ನಡಿಗೆ-50 ಮೀಟರ್ ಮೊಸರು ಕುಡಿಕೆ ಹಗ್ಗ ಜಗ್ಗಾಟ-ಪುರುಷರ ವಿಭಾಗ(ಎಲ್ಲಾ ವಯೋಮಿತಿಯವರಿಗೆ) ವಾಲೀಬಾಲ್-4 ಮಂದಿಯ ತಂಡ 4+1( ಎಲ್ಲಾ ವಯೋಮಿತಿಯವರಿಗೆ ಮಹಿಳೆಯರ ವಿಭಾಗ ಹಗ್ಗ ಜಗ್ಗಾಟ-7+1( ಎಲ್ಲಾ ವಯೋಮಿತಿಯವರಿಗೆ) ಕೆಸರ್ ಡೊಂಜಿ ಡ್ಯಾನ್ಸ್ ಇದು ವಲಯ ತಂಡಕ್ಕೆ ಸೀಮಿತ ತಂಡದಲ್ಲಿ ಕನಿಷ್ಠ 7 ಮಂದಿ 5 ನಿಮಿಷದ ಅವಕಾಶ ಇದೆ. ಹೆಚ್ಚಿನ ಮಾಹಿತಿಗಾಗಿ ಕಾರ್‍ಯಕ್ರಮದ ಸಂಚಾಲಕರಾದ ದಯಾನಂದ ರೈ ಕೋರ್ಮಂಡ- 9480277947 ಇವರನ್ನು ಸಂಪರ್ಕಿಸಬಹುದು ಎಂದು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ವಿನಂತಿಸಿದ್ದಾರೆ.