ಜಿ.ಎಲ್. ಆಟಿ ಸೇಲ್‌ಗೆ ಗ್ರಾಹಕರಿಂದ ಉತ್ತಮ ಸ್ಪಂದನೆ : ಈ ಆಕರ್ಷಕ ಕೊಡುಗೆ ಇನ್ನು ಮೂರು ದಿನಗಳು ಮಾತ್ರ

0

ಪುತ್ತೂರು: ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್‌ನಲ್ಲಿ ನಡೆಯುತ್ತಿರುವ ಆಟಿ ಸೇಲ್‌ಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಈ ಆಕರ್ಷಕ ಕೊಡುಗೆ ಇನ್ನು ಮೂರು ದಿನ ಮಾತ್ರ ಇರಲಿದೆ. ಆ ಪ್ರಯುಕ್ತ ತಮ್ಮೆಲ್ಲ ನೆಚ್ಚಿನ ಗ್ರಾಹಕರಿಗೆ ಜುಲೈ.12ರಂದು ಆರಂಭಗೊಂಡಿರುವ ‘ಆಟಿ ಸೇಲ್’ನಲ್ಲಿ ಚಿನ್ನದ ಆಭರಣಗಳು, ವಜ್ರದ ಆಭರಣಗಳು ಹಾಗೂ ಬೆಳ್ಳಿಯ ಆಭರಣಗಳ ಖರೀದಿಗೆ ಆಕರ್ಷಕ ಕೊಡುಗೆಗಳನ್ನು ಪ್ರಕಟಿಸಿದೆ.

ಚಿನ್ನಾಭರಣಗಳ ಖರೀದಿಯಲ್ಲಿ ಪ್ರತಿ ಗ್ರಾಂಗೆ ರೂ.300/-ನೇರ ರಿಯಾಯಿತಿ ಹಾಗೂ ಪ್ರತಿ 1 ಕ್ಯಾರೆಟ್ ಗ್ಲೋ ವಜ್ರಾಭರಣಗಳ ಖರೀದಿಯಲ್ಲಿ ರೂ.5,೦೦೦/-ನೇರ ರಿಯಾಯಿತಿ ಮತ್ತು ಎಲ್ಲಾ ಬೆಳ್ಳಿಯ ಆಭರಣಗಳ ಖರೀದಿಗೆ ಪ್ರತಿ ಕೆ.ಜಿ.ಗೆ ರೂ 3,೦೦೦/-ನೇರ ರಿಯಾಯಿತಿ ನೀಡಲಾಗುವುದು. ಉತ್ಕೃಷ್ಟ EF VVS ಶ್ರೇಣಿಯ ನೈಸರ್ಗಿಕ ವಜ್ರಾಭರಣಗಳು ಅತ್ಯಾಕರ್ಷಕ ಬೆಲೆಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ. ಜಿಲ್ಲೆಯ ಅತೀ ದೊಡ್ಡ ಚಿನ್ನಾಭರಣ ಮಳಿಗೆಯಲ್ಲಿ ಸುಮಾರು 25,700ಕ್ಕೂ ಮಿಕ್ಕಿ ವೆರೈಟಿ ಚಿನ್ನ ಮತ್ತು ವಜ್ರಾಭರಣಗಳ ಸಂಗ್ರಹದೊಂದಿಗೆ ಶಾಪಿಂಗ್‌ನ ಹೊಸ ಅನುಭೂತಿಯನ್ನು ಪಡೆಯಬಹುದೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.


1957 ರಲ್ಲಿ ಆರಂಭಗೊಂಡ ಸಂಸ್ಥೆಯು ಆಭರಣಗಳ ಮಾರಾಟದಲ್ಲಿ ತನ್ನದೇ ಛಾಪು ಮೂಡಿಸಿದೆ. ವಿಶ್ವಾಸ, ಪರಿಶುದ್ಧತೆ, ಪರಂಪರೆ, ವಿನ್ಯಾಸ ಹಾಗೂ ಗ್ರಾಹಕ ಸೇವೆಗಳಿಗೆ ಸಂಸ್ಥೆ ಮನೆಮಾತಾಗಿದೆ. ಆಂಟಿಕ್ ಚಿನ್ನಾಭರಣಗಳ ವಿನೂತನ ಕಲೆಕ್ಷನ್‌ಗಾಗಿ ಪ್ರಾಚಿ, ಲೈಟ್‌ವೈಟ್ ಆಂಟಿಕ್ ಆಭರಣಗಳಿಗಾಗಿ ಪ್ರಾಚಿ ಇಲೈಟ್, ಬಹು ಬೇಡಿಕೆಯ ಲೈಟ್ ವೈಟ್ ಆಂಟಿಕ್ ಕಲೆಕ್ಷನ್,ಅನ್‌ಕಟ್ ಡೈಮಂಡ್ಸ್ ಹಾಗೂ ಅಮೂಲ್ಯ ಹರಳುಗಳ ವಿಪುಲ ಸಂಗ್ರಹವಿದ್ದು ಗ್ರಾಹಕರು ಆರಾಮದಾಯಕವಾಗಿ ಶಾಪಿಂಗ್ ಮಾಡಲು ಉತ್ತಮ ಪಾರ್ಕಿಂಗ್ ವ್ಯವಸ್ಥೆ ಕೂಡಾ ಲಭ್ಯವಿದೆ.


ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳಿಗೆ ಹಾಗೂ ಗುಣಮಟ್ಟದ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆಯು ಸುಳ್ಯ, ಮೂಡಬಿದ್ರಿ, ಹಾಸನ ಹಾಗೂ ಕುಶಾಲನಗರದಲ್ಲಿ ತಮ್ಮ ಮಳಿಗೆಗಳನ್ನು ಹೊಂದಿದೆ. ಆಟಿ ಸೇಲ್ ಆಫರ್ ನಮ್ಮ ಪುತ್ತೂರು, ಸುಳ್ಯ, ಮೂಡಬಿದ್ರಿ ಮಳಿಗೆಗಳಲ್ಲಿ ಮಾತ್ರ ಲಭ್ಯವಿದ್ದು ಜು.25ರಂದು ಕೊನೆಗೊಳ್ಳಲಿದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here