ಪುತ್ತೂರು: ಕಾಂಬೋಡಿಯಾ ದೇಶದ ಪಿನೊಮ್ ಪಿನಾ ಪಿಎಚ್ ಗ್ರೌಂಡ್ ಹಾಲ್ ನಲ್ಲಿ ಜು.20 ರಂದು ನಡೆದ ಅಲೊಹಾ ಮೆಂಟಲ್ ಅರೆತ್ಮೆಟಿಕ್ ಅಬಕಾಸ್ ಇಂಟರ್ನ್ಯಾಷನಲ್ ಕಾಂಪಿಟೇಶನ್ 2025 ನಲ್ಲಿ ಸರ್ವೆ ಗ್ರಾಮದ ಯಹಾನ್ ರೈಯವರು ಗ್ರ್ಯಾಂಡ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಕಾಂಬೋಡಿಯಾದ ಉಪ ಪ್ರಧಾನಿ ಮತ್ತು ಶಿಕ್ಷಣ ಸಚಿವ ಹ್ಯಾಂಗ್ಚುನ್ ನರೋನ್ಯರವರಿಂದ ಪ್ರಶಸ್ತಿ ಪತ್ರ ಹಾಗೂ ಫಲಕವನ್ನು ಪಡೆದುಕೊಂಡಿದ್ದಾರೆ. 17 ರಾಷ್ಟ್ರಗಳ 500 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಪ್ರಸ್ತುತ ವಿದ್ಯಾಸೌಧ ಪಬ್ಲಿಕ್ ಸ್ಕೂಲ್ ಬೆಂಗಳೂರು ಇಲ್ಲಿ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಯಹಾನ್ ರೈಯವರು ಉದ್ಯಮಿ ಸರ್ವೆ ವಿಜಯಕುಮಾರ್ ರೈ ಬೆಂಗಳೂರು ಮತ್ತು ಹರಿಣಾಕ್ಷಿ ವಿ ರೈ ಯವರ ಪುತ್ರರಾಗಿದ್ದಾರೆ. ಇವರು ಅಲೊಹಾ ಇಂಟರ್ನ್ಯಾಷನಲ್ ಬೆಂಗಳೂರು ಇಲ್ಲಿಯ ಅನಿಲ್ ಕುಮಾರ್ ಶರ್ಮಾ ಇವರಿಂದ ತರಬೇತಿ ಪಡೆದುಕೊಂಡಿದ್ದಾರೆ.