ಪುತ್ತೂರು:ರೋಟರಿ ಕ್ಲಬ್ ಪುತ್ತೂರು ಸಿಟಿಯ ಪದಾಧಿಕಾರಿಗಳು ಹಾಗೂ ಸದಸ್ಯರು ನೆಲ್ಲಿಕಟ್ಟೆ ಬ್ರಹ್ಮನಗರದ ದೇವಸ್ಥಾನದ ಪರಿಸರವನ್ನು ವೀಕ್ಷಿಸಿ ಭಾರಿ ಮಳೆಯಿಂದ ದೇವಸ್ಥಾನದ ಆವರಣದ ಒಳಗೆ ಹಾಗೂ ವಸತಿನಿಲಯದ ಹೊರಗಡೆಯ ಕಾಲು ದಾರಿಯು ಜಾರುತ್ತಿರುವ ಹಿನ್ನೆಲೆಯಲ್ಲಿ ಬ್ರಹ್ಮನಗರದ ಭಕ್ತಾದಿಗಳ ಬೇಡಿಕೆಯಂತೆ ಜು.22 ರಂದು 50ಕೆ.ಜಿಯ ಎರಡು ಸುಣ್ಣದ ಹುಡಿ ಚೀಲವನ್ನು ನೀಡಿ ಸಹಕರಿಸಲಾಯಿತು.
ನೆಲ್ಲಿಕಟ್ಟೆ ಬೂತ್ ಅಧ್ಯಕ್ಷ ಹಾಗೂ ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಉಲ್ಲಾಸ್ ಪೈ, ಜ್ಯೋ ಡಿ’ಸೋಜ, ಮೋಹನ್ ಕೆ ಸಹಿತ ಹಲವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರು ಹಾಗೂ ಭಕ್ತಾದಿಗಳು ರೋಟರಿ ಸಂಸ್ಥೆಗೆ ಕೃತಜ್ಞತೆಯನ್ನು ಸಲ್ಲಿಸಿರುತ್ತಾರೆ.