ರೂ.1,50,000 ಲಕ್ಷದ ಡಿ.ಡಿ ಹಸ್ತಾಂತರ
ನಿಡ್ಪಳ್ಳಿ: ಬೆಟ್ಟಂಪಾಡಿ ಗ್ರಾಮದ ಕಕ್ಕೂರು ವಿನಾಯಕ ನಗರ ಶ್ರೀ ಸಿದ್ದಿವಿನಾಯಕ ಭಜನಾ ಮಂದಿರದ ನೂತನ ಮಂದಿರದ ಜೀರ್ಣೋದ್ಧಾರ ಅಭಿವೃದ್ಧಿ ಕಾರ್ಯಗಳಿಗೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಮಂಜೂರು ಗೊಂಡ ರೂ. 1,50,000 ಮೊತ್ತದ ಡಿ. ಡಿ. ಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ತಾಲೂಕು ಯೋಜನಾಧಿಕಾರಿ ಶಶಿಧರ. ಎಮ್ ಹಾಗೂ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯರಾದ ಜಗನ್ನಾಥ ರೈ ಕೊಮ್ಮಂಡ ಇವರು ಭಜನಾ ಮಂದಿರದ ಜಿರ್ಣೋದ್ದಾರ ಸಮಿತಿಗೆ ಜು.23ರಂದು ಹಸ್ತಾಂತರಿಸಿದರು.

ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ರಾಧಾಕೃಷ್ಣ ಭಟ್ ಕಕ್ಕೂರು, ಜಿರ್ಣೋದ್ದಾರ ಸಮಿತಿಯ ಅಧ್ಯಕ್ಷ ಜಯಪ್ರಕಾಶ್ ರೈ ಚೆಲ್ಯಡ್ಕ, ಹಿರಿಯರಾದ ಸಾಂತಪ್ಪ ಗೌಡ ರವರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು. ಭಜನಾ ಮಂದಿರ ಜಿರ್ಣೋದ್ದಾರ ಸಮಿತಿ ಮತ್ತು ಸೇವಾ ಸಂಘದ ಪದಾಧಿಕಾರಿಗಳು, ಕಕ್ಕೂರು ಒಕ್ಕೂಟದ ಅಧ್ಯಕ್ಷ ಶಂಕರ ಗುಂಡ್ಯಡ್ಕ, ಒಕ್ಕೂಟದ ಮಾಜಿ ಅಧ್ಯಕ್ಷ ಲಕ್ಷ್ಮೀನಾರಾಯಣ ರೈ ಡೆಮ್ಮಂಗರ ಉಪಾಧ್ಯಕ್ಷ ಸತ್ಯನಾರಾಯಣ ಮಣಿಯಾಣಿ ತಲಪ್ಪಾಡಿ,ಬೆಟ್ಟಂಪಾಡಿ ವಲಯ ಮೇಲ್ವಿಚಾರಕ ಸೋಹನ್ ಜಿ, ಸೇವಾಪ್ರತಿನಿಧಿ ಲೀಲಾವತಿ ಹಾಗೂ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು.