ಅಳಿಕೆ: ಗ್ರಾಮಾಭಿವೃದ್ದಿ ಯೋಜನೆಯಿಂದ ದೇಲಂತಬೆಟ್ಟು ಶಾಲೆಯಲ್ಲಿ ಪರಿಸರ ಜಾಗ್ರತಿ ಕಾರ್ಯಕ್ರಮ

0

ಪುತ್ತೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವಿಟ್ಲ ಇದರ ಅಳಿಕೆ ವಲಯದಲ್ಲಿ ಪರಿಸರ ಕಾರ್ಯಕ್ರಮವನ್ನು ದೇಲಂತಬೆಟ್ಟು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಯಿತು.

ಕಾರ್ಯಕ್ರಮವನ್ನು ಒಕ್ಕೂಟ ಉಪಾದ್ಯಕ್ಷರಾದ ಚಂದ್ರಶೇಖರ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಪರಿಸರ ಜಾಗೃತಿ ಬಗ್ಗೆ ಶಿಕ್ಷಕರಾದ ಉದಯ ರವರು ಮಾಹಿತಿ ನೀಡಿದರು. ವೇದಿಕೆಯಲ್ಲಿ ಜ್ಞಾನ ವಿಕಾಸ ಸಮನ್ವಯಾಧಿಕಾರಿ ದೀಪ, ಶಿಕ್ಷಕಿ ಸವಿತ, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರಾದ ರವೀಶ, ಪುಟ್ಟಣ್ಣ, ಗಣೇಶ, ಚಂದ್ರಶೇಖರ, ಕುಶಾಲಪ್ಪ ಉಪಸ್ಥಿತರಿದ್ದರು.

ಜ್ಞಾನ ದೀಪ ಶಿಕ್ಷಕ ಶಶಾಂಕ್ ಸ್ವಾಗತಿಸಿದರು. ವಲಯದ ಮೇಲ್ವಿಚಾರಕಿ ಮೀನಾಕ್ಷಿ ಪ್ರಾಸ್ತಾವಿಕವಾಗಿ ಮಾತನಾಡಿದರು ಸೇವಾ ಪ್ರತಿನಿಧಿ ಪೂರ್ಣಿಮ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿ ಸವಿತಾ ವಂದಿಸಿದರು. ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆ ನಡೆಸಿ ಬಹುಮಾನವನ್ನು ವಿತರಿಸಲಾಗಿದೆ ಇದಲ್ಲದೆ ಶಾಲಾ ಮಕ್ಕಳಿಗೆ ಸಸಿ ವಿತರಣೆ ಮಾಡಿ ಸಸಿಗಳನ್ನು ನೆಡಲಾಯಿತು.

LEAVE A REPLY

Please enter your comment!
Please enter your name here