ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ವಿಟ್ಲ ಸ್ಕೌಟ್ಸ ಮತ್ತು ಗೈಡ್ಸ್‌ನ ಕಟ್ಟಡ ನಿರ್ಮಾಣಕ್ಕೆ ರೂ.1.50 ಲಕ್ಷ ಮಂಜೂರುಗೊಂಡಿದ್ದು, ಇದರ ಮಂಜೂರಾತಿ ಪತ್ರವನ್ನು ವಿಟ್ಲಯೋಜನ ಕಛೇರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ-2 ರ ನಿರ್ದೇಶಕರಾದ ಬಾಬು ನಾಯ್ಕ, ಯೋಜನಾಧಿಕಾರಿ ಸುರೇಶ್ ಗೌಡ, ತಾಲೂಕಿನ ಮೇಲ್ವಿಚಾರಕರ ಸಮ್ಮುಖದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಅಧ್ಯಕ್ಷ ಸುದರ್ಶನ್ ಪಡೆಯಾರ್ ಮತ್ತು ಸಮಿತಿಯವರಿಗೆ ಹಸ್ತಾಂತರ ಮಾಡಲಾಯಿತು.
